HomePage_Banner
HomePage_Banner
HomePage_Banner
HomePage_Banner

ಒಳಮೊಗ್ರು ವಲಯ ಕಾಂಗ್ರೆಸ್‌ನಿಂದ ಚುನಾವಣಾ ಸಿದ್ದತಾ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಜಿಪಂ , ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣ: ಅಶೋಕ್ ಬೊಳ್ಳಾಡಿ

ಪುತ್ತೂರು: ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಪಣ ತೊಡಬೇಕು ಮತ್ತು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕರದ ಆಡಳಿತ ವೈಫಲ್ಯ ಮತ್ತು ಬೆಲೆ ಏರಿಕೆ ನೀತಿಯನ್ನು ಮನೆ ಮನೆಯಲ್ಲೂ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದು ಒಳಮೊಗ್ರು ಗ್ರಾಮ ಕಾಂಗ್ರೆಸ್ ವಲಯ ಸಮಿತಿ ಅಧ್ಯಕ್ಷ ಅಶೋಕ್ ಬೊಳ್ಳಾಡಿ ಹೇಳಿದರು. ಅವರು ಕಾಂಗ್ರೆಸ್ ಕಾರ್ಯಕರ್ತ ಅಬೂಬಕ್ಕರ್ ಬೊಳ್ಳಾಡಿಯವರ ಮನೆಯಲ್ಲಿ ನಡೆದ ವಲಯ ಕಾಂಗ್ರೆಸ್ ಸಭೆಯಲ್ಲಿ ಅಧ್ಯಕ್ಷತೆ ಮಾತನಾಡಿದರು.

ತಾಪಂ ಹಾಗೂ ಜಿಪಂ ಚುನಾವಣೆ ಯಾವಾಗ ಬೇಕಾದರೂ ನಡೆಯಲಿ ಅದಕ್ಕಾಗಿ ನಾವು ಈಗಲೇ ಸಿದ್ದತೆ ಮಾಡಿಕೊಳ್ಳಬೇಕಿದೆ. ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ ಪಕ್ಷಕ್ಕೆ ಗೆಲುವಾಗಬೇಕು. ಕೇಂದ್ರ ಹಗೂ ರಾಜ್ಯ ಸರಕಾರ ಜನವಿರೋಧಿಯಾಗಿದೆ. ಧೈನಂದಿನ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲ, ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಗಿದ್ದು ಇದೆಲ್ಲವೂ ಜನ ಸಾಮಾನ್ಯರಿಗೆ ಗೊತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಜನ ಇಂದು ಭಾರೀ ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಈ ವಿಚಾರವನ್ನು ಗ್ರಾಮದ ಪ್ರತೀ ಮನೆಯಲ್ಲೂ ತಿಳಿಸುವ ಕೆಲಸವನ್ನು ನಾವು ಮಾಡಲಿದ್ದೇವೆ. ಕಾರ್ಯಕರ್ತರ ಜೊತೆ ಸೇರಿ ನಾವೆಲ್ಲರೂ ಪಕ್ಷವನ್ನು ಗಟ್ಟಿಗೊಳಿಸಲಿದ್ದೇವೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಭದ್ರವಾಗಬೇಕು: ಶಶಿಕಿರಣ್ ರೈ
ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಭದ್ರಗೊಳಿಸುವ ಕೆಲಸವನ್ನು ಕಾರ್ಯಕರ್ತರೆಲ್ಲಾ ಸೇರಿ ಮಾಡಲಿದ್ದೇವೆ. ದೇಶದಲ್ಲಿ , ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರವಿದ್ದಾಗ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಈಗ ಜನ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ನಾವು ಖರೀದಿಸುವ ಪ್ರತೀಯೊಂದು ವಸ್ತುವಿನ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಕೂಲಿ ಕೆಲಸ ಮಾಡುವವರು, ಮಧ್ಯಮವರ್ಗದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಇದನ್ನು ನಾವು ಜನರ ಬಳಿ ಹೇಳಲಿದ್ದೇವೆ. ದೇಶದಲ್ಲಿ , ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ಯು ಕೆ ಅಶ್ರಫ್ ಉಜಿರೋಡಿ, ವಲಯ ವಿನೋದ್ ಶೆಟ್ಟಿ ಮುಡಾಲ , ಶೀನಪ್ಪ ನಾಯ್ಕ್ ,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್ ಅಡ್ಕ,ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಲಯ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ಗ್ರಾಪಂ ಸದಸ್ಯೆ ಚಿತ್ರಾ ಬಿ ಸಿ, ಕಾಂಗ್ರೆಸ್ ರಾಜೀವ ಗಾಂಧಿ ಸೇವಾ ದಳದ ಅಧ್ಯಕ್ಷ ಹುಕ್ರಪ್ಪ ಬೊಳ್ಳಾಡಿ, ಮಹಮ್ಮದ್ ಮುಡಾಲ,ಜಾಫರ್ ಸಾದಿಕ್ ಎಸ್ ಕೆ, ಮಹಮ್ಮದ್ ರಫೀಕ್ ಕೆ ಎಂ ಉಪಸ್ಥಿತರಿದ್ದರು. ಮಹಮ್ಮದ್ ಅಡ್ಕ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.