HomePage_Banner
HomePage_Banner
HomePage_Banner
HomePage_Banner

ಅಕ್ರಮ ಸಕ್ರಮದಲ್ಲಿ ಇತ್ಯರ್ಥಗೊಂಡವರಿಗೆ ಸಾಗುವಳಿ ಚೀಟು, ಸರಕಾರಿ ಭೂಮಿ ಮಂಜೂರಾತಿ ಪತ್ರ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚೆಗೆ ನಡೆದ ಅಕ್ರಮ ಸಕ್ರಮ ಬೈಠೆಕ್‌ನಲ್ಲಿ ಇತ್ಯರ್ಥಗೊಂಡವರಿಗೆ ಸಾಗುವಾಳಿ ಚೀಟು ಮತ್ತು ಸರಕಾರಿ ಭೂಮಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಸೆ.7ರಂದು ಪುತ್ತೂರು ಪುರಭವನದಲ್ಲಿ ಶಾಸಕ ಸಂಜೀವ ಮಠಂದೂರು ಫಲಾನುಭವಿಗಳಿಗೆ ವಿತರಣೆ ಮಾಡಿದರು. 118 ಮಂದಿಗೆ ಸಾಗುವಳಿ ಚೀಟು ವಿತರಣೆ ಮತ್ತು 77 ಮಂದಿಗೆ ಸರಕಾರಿ ಭೂಮಿ ಮಂಜೂರಾತಿ ಪತ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಫಲಾನುಭವಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಶಾಸಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲಿ ಅರಣ್ಯ ಭೂಮಿ ಇದೆ. ಈ ಕುರಿತು ಅರಣ್ಯ ಇಲಾಖೆಯಲ್ಲಿ ಮತ್ತು ಕಂದಾಯ ಇಲಾಖೆಯಲ್ಲೂ ದಾಖಲೆ ಇದೆ. ಫಲಾನುಭವಿಯ ಜಮೀನು ಅರಣ್ಯ ಇಲಾಖೆಯ ಗಡಿಯಿಂದ ೪೫೦ ಮೀಟರ್ ದೂರ ಇದೆ ಎಂದು ವರದಿ ಕೊಟ್ಟರೂ ಅದು ಅರಣ್ಯ ಇಲಾಖೆಯ ಸರ್ವೆ ನಂಬರ್‌ನಲ್ಲಿದ ಎಂದು ಕಂದಾಯ ಇಲಾಖೆಯಿಂದ ಫೈಲು ವಿಳಂಬ ಆಗುವ ಸಂದರ್ಭ ಇದೆ. ಆದರೆ ತಹಶೀಲ್ದಾರ್, ವಿ.ಎಗಳು ಭೂಮಿ ಅರಣ್ಯ ಇಲಾಖೆಯದ್ದು ಅಲ್ಲ ಎಂದು ಖಾತ್ರಿಯಾದರೆ ಕೊಡಲು ಯಾವ ಸಮಸ್ಯೆ ಇಲ್ಲ. ಈ ನಿಟ್ಟಿನಲ್ಲಿ ತಹಸೀಲ್ದಾರ್ ಗಮನಿಸುವಂತೆ ತಿಳಿಸಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್, ಅಕ್ಷಯ ಕುಮಾರಿ, ತಹಶೀಲ್ದಾರ್ ರಮೇಶ್ ಬಾಬು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ದಯಾನಂದ ವಿವಿಧ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.