HomePage_Banner
HomePage_Banner
HomePage_Banner
HomePage_Banner

ತಾಲೂಕು ಸರಕಾರಿ ನೌಕರರ ಸಂಘದಿಂದ ಸರಕಾರಿ ನೌಕರರಿಗೆ ಕೆ.ಸಿ.ಎಸ್.ಆರ್, ಸಿ.ಸಿ.ಎ ಮಾಹಿತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •      ಕಾಲ ಕಾಲಕ್ಕೆ ಬದಲಾಗುವ ಕಾನೂನುಗಳಿಗೆ ನೌಕರರು ಆಪ್‌ಡೇಟ್ ಆಗಿ-ಮಠಂದೂರು

ಪುತ್ತೂರು: ಜಗತ್ತಿನಲ್ಲಿನ ಯಾವುದೇ ರಾಷ್ಟ್ರದಲ್ಲಿ ಇಲ್ಲದಂತಹ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ಭಾರತ ದೇಶದಲ್ಲಿದೆ. ಸಂವಿಧಾನದ ಬಹುಮುಖ್ಯ ಅಂಗವಾಗಿರುವ ಕಾರ್ಯಾಂಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ನೌಕರರು ಕಾಲ ಕಾಲಕ್ಕೆ ಬದಲಾಗುವ ಕಾನೂನುಗಳ ಪರಿಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅಪ್‌ಡೇಟ್ ಆಗುವ ಮೂಲಕ ವೃತ್ತಿಧರ್ಮ ಪಾಲನೆ ಮಾಡಬೇಕು ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ಪುತ್ತೂರು ತಾಲೂಕು ಶಾಖೆಯ ಆಶ್ರಯದಲ್ಲಿ ಸರಕಾರಿ ನೌಕರರಿಗೆ ಕೆ.ಸಿ.ಎಸ್.ಆರ್(ಕರ್ನಾಟಕ ನಾಗರಿಕ ಸೇವಾ ನಿಯಮ) ಮತ್ತು ಸಿ.ಸಿ.ಎ(ಕರ್ನಾಟಕ ಸಿವಿಲ್ ಸೇವಾ ನಿಯಮ)ಗಳ ಬಗ್ಗೆ ಶಾಖೆಯ ಮೇರಿ ದೇವಾಸಿಯ ಸಭಾಂಗಣದ ಶ್ರೀಮತಿ ಮತ್ತು ಶ್ರೀ ನಂದಕುಮಾರ್ ವೇದಿಕೆಯಲ್ಲಿ ಸೆ.7 ರಂದು ನಡೆದ ಮಾಹಿತಿ ಕಾರ್ಯಾಗಾರವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕೇವಲ ಸ್ವಾತಂತ್ರ್ಯ ಸಿಕ್ಕ ಕೂಡಲೇ ನಮಗೆ ಸಂಪೂರ್ಣ ಸ್ವಾತಂತ್ರ್ಯದ ಹಕ್ಕು ಸಿಗಲಿಲ್ಲ. ಬದಲಾಗಿ ಡಾ.ಬಿ.ಆರ್ ಅಂಬೇಡ್ಕರವರು ರಚಿಸಿದ ಸಂವಿಧಾನವು ಸರ್ವೆ ಜನ ಸುಖಿನೋ ಭವಂತು ಎಂಬಂತೆ ನಮಗೆ ಸಂಪೂರ್ಣ ಸ್ವಾತಂತ್ರ್ಯದ ಹಕ್ಕು ಸಿಕ್ಕಿದುದಾಗಿದೆ. ಈ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾಂಗ ಒಳಗೊಂಡಿದೆ. ಸ್ವಾತಂತ್ರ್ಯ ಸಿಕ್ಕ ಬಳಿಕ 75 ವರ್ಷದಲ್ಲಿ ಹಲವು ಬಾರಿ ಸಂವಿಧಾನ ತಿದ್ದುಪಡಿ ಆಗಿದೆ. ಪ್ರಜೆಗಳಿಗೋಸ್ಕರ ಪ್ರಜೆಗಳಿಗೆ ಮಾಡುವಂತಹ ಕಾನೂನು ದೇಶದ ಎಲ್ಲ ಜನರಿಗೆ ಆಶ್ರಯವಾಗಿದೆ ಎಂದ ಅವರು ಕಾನೂನುಗಳನ್ನು ರಚಿಸುವಾಗ ಅವುಗಳು ದೇಶಕ್ಕೆ, ಜನರಿಗೆ ಪೂರಕವಾಗಿ ಇರಬೇಕೇ ಹೊರತು ಮಾರಕವಾಗಿ ಇರಕೂಡದು ಜೊತೆಗೆ ಮಾನವೀಯತೆ, ಶ್ರದ್ಧೆ, ಪ್ರಾಮಾಣಿಕತೆ, ಭ್ರಷ್ಟಾಚಾರ ಮುಕ್ತ ಕಾನೂನು ಒಳಗೊಂಡಿದಾಗ ದೇಶಕ್ಕೆ ಮಹತ್ವ ಬರುತ್ತದೆ ಎಂದು ಅವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಸಂವಿಧಾನ ಆಗಿದೆ. ಸರಕಾರಿ ನೌಕರರು ನೌಕರರಲ್ಲ, ಅವರು ಸೇವಕರು. ದಿನದ ಇಪ್ಪತ್ತನಾಲ್ಕು ಘಂಟೆಯೂ ಸೇವೆ ನೀಡುವವವರು. ಸರಕಾರಿ ನೌಕರರು ಸಮಯಪಾಲನೆಯನ್ನು ಮಾಡುವ ಮೂಲಕ ವೃತ್ತಿಧರ್ಮವನ್ನು ಪಾಲಿಸಬೇಕಾಗುತ್ತದೆ. ಬದಲಾದ ಕಾನೂನು ವ್ಯವಸ್ಥೆಯನ್ನು ತಿಳಿದುಕೊಳ್ಳಲು ಒಂದೇ ದಿನ ಸಾಕಾಗೋದಿಲ್ಲ. ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಮೈಗೂಡಿಸಿಕೊಂಡಲ್ಲಿ ಕಾನೂನು ನಿಯಮಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಸರಕಾರಿ ನೌಕರರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘ ಸ್ಪಂದಿಸಿದಾಗ ಸಂಘದ ಆಸ್ತಿತ್ವ ಉಳಿಯುತ್ತದೆ. ಜೊತೆಗೆ ಸಂಘವು ನೌಕರರ ಕೆಲಸದಲ್ಲಿನ ಮಾನಸಿಕ ಒತ್ತಡವನ್ನು ನಿವಾರಿಸುವ ಕೌಶಲ ಹಾಗೂ ನಾಯಕತ್ವದ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಂಡರೆ ಒಳ್ಳೆಯದು ಎಂದರು.

ಅಧ್ಯಕ್ಷತೆ ವಹಿಸಿದ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಶಿವಾನಂದ ಆಚಾರ್ಯರವರು ಮಾತನಾಡಿ, ಕರ್ನಾಟಕ ನಾಗರಿಕ ಸೇವಾ ನಿಯಮ ಮತ್ತು ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಬಗ್ಗೆ ಸರಕಾರಿ ನೌಕರರಿಗೆ ಮಾಹಿತಿ ಒದಗಿಸುವ ಕಾರ್ಯಾಗಾರ ಹಮ್ಮಿಕೊಳ್ಳಬೇಕೆಂದು ಸಹಾಯಕ ಆಯುಕ್ತರೇ ಸಲಹೆ ನೀಡಿದ್ದರು. ಜೊತೆಗೆ ಸಂಘವು ನೌಕರರ ಕೆಲಸದಲ್ಲಿನ ಮಾನಸಿಕ ಒತ್ತಡವನ್ನು ನಿವಾರಿಸುವ ಕೌಶಲ ಹಾಗೂ ನಾಯಕತ್ವದ ಬಗ್ಗೆ ಕಾರ್ಯಾಗಾರವನ್ನು ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಗಳ, ಸಂಘ-ಸಂಸ್ಥೆಗಳ ಸಹಕಾರದಿಂದ ಹಮ್ಮಿಕೊಳ್ಳುವ ಕುರಿತು ನಮ್ಮ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪಾಣಾಜೆ ಸರಕಾರಿ ಶಾಲೆಯ ಶಿಕ್ಷಕಿ ಸುನೀತ ಕೆ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಕೋಶಾಧಿಕಾರಿ ನಾಗೇಶ್, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ, ಕೃಷ್ಣಪ್ರಸಾದ್ ಭಂಡಾರಿ, ಕೃಷ್ಣ ಬಿ, ರವಿಚಂದ್ರರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ರಾಜ್ಯಪರಿಷತ್ ಸದಸ್ಯ ಪುರುಷೋತ್ತಮ್ ಬಿ ವಂದಿಸಿ, ಸಹ ಶಿಕ್ಷಕ ವಿನೋದ್ ಕಾರ್ಯಕ್ರಮ ನಿರೂಪಿಸಿದರು.

ನೌಕರರು ಹೆಚ್ಚೆಚ್ಚು ಮಾಹಿತಿಯನ್ನು ತಿಳಿದುಕೊಳ್ಳುವವರಾಗಿ…
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗವು ಶಾಸನ ಸಭೆಯಲ್ಲಿ ಕೆಲವೊಂದು ಪೂರಕವಾದ ಶಾಸನಗಳನ್ನು ಜಾರಿಗೊಳಿಸುತ್ತಾರೆ. ಕಾರ್ಯಾಂಗವು ದೈನಂದಿನ ಚಟುವಟಿಕೆಗಳಿಗೆ ಶಾಸನಗಳನ್ನು ಬಳಕೆ ಮಾಡಲು, ತೊಡಕುಗಳನ್ನು ಹಾಗೂ ಬದಲಾವಣೆಗಳನ್ನು ಶಾಸಕಾಂಗಕ್ಕೆ ತಿಳಿಸುವ ವ್ಯವಸ್ಥೆಯಾಗಿದೆ. ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸಾವಿರಾರು ನೌಕರರಿದ್ದು, ಸರಕಾರಿ ನೌಕರರು ತಮ್ಮ ವೃತ್ತಿಯಲ್ಲಿ ಪದೋನ್ನತಿ ಹಾಗೂ ವೇತನ ಹೆಚ್ಚಳವಾಗುವ ಸಂದರ್ಭದಲ್ಲಿ ಕಾನೂನು ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳುವಂತಾಗಬೇಕು. ಸರಕಾರಿ ನೌಕರರಿಗೆ ತೊಂದರೆಯಾದಾಗ ಸರಕಾರಿ ನೌಕರರ ಸಂಘವು ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಕಾರ್ಯಾಗಾರದಲ್ಲಿ ಲಭಿಸಿದ ಮಾಹಿತಿಯನ್ನು ಬಿಟ್ಟು ಬಿಡೋದಲ್ಲ. ಅದು ನಿಂತ ನೀರಾಗದೆ ಹೆಚ್ಚೆಚ್ಚು ಮಾಹಿತಿಯನ್ನು ಪಡೆದುಕೊಂಡು ಹರಿಯುವ ನೀರಾಗಬೇಕು. ಡಾ.ಯತೀಶ್ ಉಳ್ಳಾಲ್, ಸಹಾಯಕ ಆಯುಕ್ತರು

ಶಿಕ್ಷಣ ಇಲಾಖೆ ಮಂಗಳೂರು ಇಲ್ಲಿನ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕರಾದ ಉಮೇಶ್ ಆಚಾರ್‌ರವರು ಸರಕಾರಿ ನೌಕರರಿಗೆ ಕೆ.ಸಿ.ಎಸ್.ಆರ್(ಕರ್ನಾಟಕ ನಾಗರಿಕ ಸೇವಾ ನಿಯಮ) ಮತ್ತು ಸಿ.ಸಿ.ಎ(ಕರ್ನಾಟಕ ಸಿವಿಲ್ ಸೇವಾ ನಿಯಮ)ಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.