ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಮೋದಿ ಸರಕಾರದ ಆರ್ಥಿಕ ಹಾಗೂ ವಿದೇಶ ನೀತಿಯಿಂದ ದೇಶ ಬರ್ಬಾದು ಆಗಿದೆ – ಯು.ಟಿ ಖಾದರ್      

ಪುತ್ತೂರು : ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದು 8 ವರ್ಷದಲ್ಲಿ ದೇಶದ ಜನ ಸಾಮಾನ್ಯರನ್ನು ಸಂಕಷ್ಟದಲ್ಲಿ ಸಿಲುಕಿಸುವಂತಹ ಕಾನೂನು ಜ್ಯಾರಿಗೆ ತಂದು, ಬಂಡವಾಳ ಶಾಹಿಗಳಾದ ಅಂಬಾನಿ ಮತ್ತು ಅದಾನಿಗಳ ಸಾಮ್ರಾಜ್ಯ ಗಳನ್ನು ಬೆಳೆಸಲು ತನ್ನ ಅಧಿಕಾರವನ್ನು ದೇಶದ ಶ್ರೀಮಂತರಿಗೆ ಒತ್ತೆ ಇಟ್ಟಿರುತ್ತಾರೆ ಇದರಿಂದ ದೇಶದ ಆರ್ಥಿಕ ನೀತಿಗೆ ಲಂಗು ಲಗಾಮು ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು, ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮಾಸಿಕ ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಸರಕಾರ ಕಳೆದ 70 ವರ್ಷಗಳ ತನ್ನ ಆಡಳಿತ ಅವಧಿಯಲ್ಲಿ ಮಾಡಿದ್ದ ಸಾರ್ವಜನಿಕ ಸೊತ್ತು ಗಳನ್ನು ಒಂದೊಂದನ್ನೇ ಮೋದಿಯವರು ತನ್ನ ಸ್ನೇಹಿತ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದಾರೆ, ಸರಕಾರದ ಬ್ಯಾಂಕ್ ಗಳನ್ನು ಕೂಡ ಮಾರಲು ಹೊರಟು ದೇಶವನ್ನು ದಾರಿದ್ರ್ಯದ ಕಡೆ ತಳ್ಳುತ್ತಿದ್ದಾರೆ, ಮನಮೋಹನ್ ಸಿಂಗ್ ರವರ ಕಾಂಗ್ರೆಸ್ ಸರಕಾರವಿದ್ದಾಗ ದೇಶದ GDPಎಳೂವರೇ ಶೇಕಡ ವಿದ್ದ GDP ಕೋರೋನ ಬರುವ ಮೊದಲೇ ಶೇ.೩ ಕ್ಕೆ ಇಳಿದಿತ್ತು. ಕೋರೋನ ಬಂದ ಮೇಲೆ GDP ನೆಲಕಚ್ಚಿದೆ ಎಂದರು. ಬಡವರಿಗೆ ಸರಿಯಾಗಿ ರೇಷನ್ ಸಿಗುತ್ತಿಲ್ಲ, ನಾವು ಕೊಟ್ಟಿರುವ BPL ಕಾರ್ಡನ್ನು ರದ್ದು ಪಡಿಸುತ್ತಿದ್ದಾರೆ, ವೃದ್ಯಾಪ, ವಿಧವೆ, ಸಂದ್ಯಾ ಸುರಕ್ಷ ಯೋಜನೆಯ ಹಣ ಸಿಗುತ್ತಿಲ್ಲ ಅದೂ ಬಿಡಿ ಕೊನೆಗೆ ಶವ ಸಂಸ್ಕಾರಕ್ಕೂ ಹಣ ನೀಡಲು ಈ ಸರಕಾರಕ್ಕೆ ಗತಿ ಇಲ್ಲ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬ್ಲಾಕ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಯವರು ಪಕ್ಷ ಸಂಘಟಣೆಗೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಯವರು ಪುತ್ತೂರು ಬ್ಲಾಕ್ ನ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿ ನಗರ ಸಬಾ ಚುನಾವಣೆಗೆ ಇನ್ನೂ ೪ ವರ್ಷಗಳ ಸಮಯವಿದ್ದು, ಇದೀಗ  ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ನ ಚುನಾವಣೆ ಬಹಳ ಹತ್ತಿರ ಇರುವುದರಿಂದ ಗ್ರಾಮೀಣ ಬಾಗದ ಬೂತ್ ಸಮಿತಿಗಳನ್ನು ಬಲ ಪಡಿಸಲು ಬ್ಲಾಕ್ ಅಧ್ಯಕ್ಷರು ಮುಂದಾಗಿದ್ದು ಅವರೊಂದಿಗೆ ವಲಯ ಮಟ್ಟದ ಪಕ್ಷ ಸಂಘಟಣೆಗೆ ನಾನು ಕೈ ಜೋಡಿಸುತ್ತಿದ್ದೇನೆ, ಇನ್ನು ಕೆಲವು ದಿನಗಳ ಒಳಗೆ ನಗರ ಕಾಂಗ್ರೆಸ್ ಗೆ ಪದಾಧಿಕಾರಿಗಳನ್ನು ನೇಮಕಗೊಳಿಸಿ ನಗರ ಪ್ರದೇಶದಲ್ಲಿ ತಲಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ವಲಯ ಅಧ್ಯಕ್ಷರುಗಳಾದ ಎ.ಕೆ ಜಯರಾಮರೈ, ಬಾಬು ರೈ ಕೋಟೆ, ಪ್ರಜ್ವಲ್ ರೈ ತೊಟ್ಲ, ಪ್ರಕಾಶ್ ಪುರುಷರ ಕಟ್ಟೆ, ಅಶೋಕ ಪೂಜಾರಿ ಒಳಮೊಗರು, ಪುರಂದರ ರೈ ಕೊರಿಕ್ಕಾರು, ಆಬಿದ್ ಕುಕ್ಕಾಜೆ, ಗೋಪಾಲ ಕೃಷ್ಣ ಒಕ್ಕಲಿಗ, ನವೀನ್ ರೈ ಚೆಲ್ಯಡ್ಕ, ಮೂಸಾನ್ ಕರ್ನೂರ್, ಇಕ್ಬಾಲ್ ಹುಸೈನ್ ಕೌಡಿಚಾರ್ ಹಾಗೂ ಉಸ್ತುವಾರಿಗಳಾದ ಯಾಕೂಬು ಮುಲಾರ್, ಮನಮೋಹನ್ ರೈ, ರೋಷನ್ ರೈ ಬನ್ನೂರು, ಗೋಪಾಲ ಪಾಟಾಳಿ, ಇವರು ಕಳೆದ ಒಂದು ತಿಂಗಳಲ್ಲಿ ನಡೆಸಿದ ಪಕ್ಷ ಚಟುವಟಿಕೆಯ ಬಗ್ಗೆ ವರದಿ ಮಂಡಿಸಿದರು.

ಬ್ಲಾಕ್ ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ವಿಎಚ್‌ಎ ಶಕೂರ್ ಹಾಜಿ, ಶರೊನ್ ಸಿಕ್ವೆರಾ, ಕೇಶವ ಪಡೀಲ್, ಮೆಲ್ವಿನ್ ಮೊಂತೆರೊ, ಅಭಿಷೇಕ್ ಬೆಳ್ಳಿಪ್ಪಾಡಿ, ಹರೀಶ್ ನಿಡ್ಪಳ್ಳಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಸೇವಾದಾಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜೆ, ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಶಾರದಾ ಅರಸ್, ತಮ್ಮ ಘಟಕಗಳ ಚಟುವಟಿಕೆಗಳ ವಿವರ ನೀಡಿದರು. ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಬಾಗವಹಿಸಿದ ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ. ಸೋಜಾ ರವರು ಸೇವಾದಳದ ಸಂಘಟಣೆಯ ಬಗ್ಗೆ ಹಾಕಿಕೊಂಡಿರುವ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು, ಹಿರಿಯ ಕಾಂಗ್ರೆಸ್ಸಿಗರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ : ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಹಿರಿಯ ಕಾಂಗ್ರೆಸ್ಸಿಗರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮದಂತೆ ಒಳಮೊಗರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಜಯ ಕುಮಾರ್ ರೈ ಮುಗೇರು, ಹಿರಿಯ ಕಾಂಗ್ರೆಸ್ ಮುಖಂಡರಾದ ಯು.ಕೆ ಇಬ್ರಾಹಿಂ ಉಜಿರೋಡಿ, ಕೆ.ಪಿ ಹಸನ್ ನೀರ್ಪಜೆ ರವರನ್ನು ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ ಯವರು ಶಾಲು ಹಾಕಿ ಹಣ್ಣು ಹಂಪಲು ನೀಡಿ ಸನ್ಮಾನಿಸಿದರು. ಅಲ್ ಅಮೀನ್ ಮೆಡಿಕಲ್ ಕಾಲೇಜ್ ಬಿಜಾಪುರ ಇಲ್ಲಿ ಎಂ.ಡಿ (ಮೆಡಿಸಿನ್)ಇದರಲ್ಲಿ ಟಾಪರ್ ಆಗಿರುವ ಹಾಗೂ ರಾಜೀವ್ ಗಾಂಧಿ ಯೂನಿವರ್ಸಿಟಿಯಲ್ಲೇ ಟಾಪರ್ ಆಗಿರುವ ಪುತ್ತೂರಿನ ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ರವರ ಪುತ್ರಿಯಾಗಿರುವ ಡಾ.ಆಯಿಷತ್ ನಿಷಾದ್ ಎಂ.ಪಿ ರವರನ್ನು ಹಾಗೂ ೧೦ ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದಿರುವ ಅರ್ಯಾಪು ಗ್ರಾಮದ ಕುಂಜೂರು ಪಂಜ ನಿವಾಸಿ ಕಾಂಗ್ರೆಸ್ ಬೂತ್ ಅಧ್ಯಕ್ಷ ಪುರುಷೋತ್ತಮ ಪ್ರಭು ರವರ ಪುತ್ರಿ ಅನುಶ್ರೀ ಜಿ. ಪ್ರಭುರವರನ್ನು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶಾರದಾ ಅರಸ್‌ರವರು ಸನ್ಮಾನಿಸಿದರು.

ಯಂಗ್ ಬ್ರಿಗೇಡ್ ವತಿಯಿಂದ ಸನ್ಮಾನ : ಪುತ್ತೂರು ಯಂಗ್ ಬ್ರಿಗೇಡ್ ಸೇವಾದಾಳದ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಉಚಿತ ಆಂಬುಲೆನ್ಸ್ ಸೇವೆ ಒದಗಿಸಿದ್ದು ಈ ಆಂಬುಲೆನ್ಸ್ ನ ಉಸ್ತುವಾರಿ ವಹಿಸಿಕೊಂಡು ಯಶಸ್ವಿ ಯಾಗಿ ನಿರ್ವಹಣೆ ಮಾಡಿರುವ ಶರೀಫ್ ಬಲ್ನಾಡ್, ಆಂಬುಲೆನ್ಸ್ ಚಾಲಕ ಉಬೇದುಲ್ಲಾರವರಿಗೆ ಹಾಗೂ ನೂತನವಾಗಿ ಆಯ್ಕೆಯಾಗಿರುವ NSUI ಪದಾಧಿಕಾರಿಗಳಾದ ರಾಜ್ಯ NSUIಕೋ ಓರ್ಡಿನೇಟರ್  ಜೈನುದ್ದೀನ್ ಅತೂರು,NSUI ನ ಜಿಲ್ಲಾ ಪ್ರದಾನ ಕಾರ್ಯದರ್ಶಿ ತಮೀಜ್ ಕೋಲ್ಪೆ, ಜಿಲ್ಲಾ ಕಾರ್ಯದರ್ಶಿ ಲಸ್ಟರ್ ಪಿಂಟೋ,    ಪುತ್ತೂರು NSUIನ ನಿಯೋಜಿತ ಅಧ್ಯಕ್ಷೆ ವೀರ ಜನ್ನೀಫರ್ ಡಿ ಸೋಜಾ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಬಾತೀಶ ಅಳಕೆಮಜಲು ಇವರನ್ನು ಮಾಜಿ ಸಚಿವ ಯು ಟಿ ಖಾದರ್, ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಸನ್ಮಾನಿಸಿದರು

ಜಿಲ್ಲಾ ಸಹಕಾರಿ ಯೂನಿಯನಿನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ನ ಪ್ರದಾನ ಕಾರ್ಯದರ್ಶಿಗಳಾದ ಫಝಲ್ ರಹೀಮ್, ಮಹೇಶ್ ಅಂಕೋತಿಮಾರ್, ಜಿಲ್ಲಾ ಕಾರ್ಯದರ್ಶಿ ಯಾಕೂಬು ಹಾಜಿ ದರ್ಬೆ, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಜಿಲ್ಲಾ ಹಿಂದುಳಿದ ವರ್ಗ ವಿಭಾಗದ ಪ್ರದಾನ ಕಾರ್ಯದರ್ಶಿ ನಾರಾಯಣ ನಾಯಕ್ ಆರ್ಲಪದವು, ಜಿಲ್ಲಾ ಕಾರ್ಯದರ್ಶಿ ಶ್ರೀಧರ ಪೂಜಾರಿ ಚಾಲೆಪುಣಿ, ಯಂಗ್ ಬ್ರಿಗೇಡ್‌ನ ಅಭಿಷೇಕ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ಹಾಗೂ ಬ್ಲಾಕ್‌ನ ಹೆಚ್ಚಿನ ಪದಾಧಿಕಾರಿಗಳು ಬಾಗವಹಿಸಿದ್ದರು, ಬ್ಲಾಕ್ ಉಪಾಧ್ಯಕ್ಷ ಆಲಿ ಕುಂಜಿ ಕೊರಿಂಗಿಲ, ಸ್ವಾಗತಿಸಿದರು, ಪ್ರದಾನ ಕಾರ್ಯದರ್ಶಿ ಅಮಲ ರಾಮಚಂದ್ರ ಬ್ಲಾಕ್ ಕಾಂಗ್ರೆಸ್‌ನ ವರದಿ ಮಂಡಿಸಿದರು. ಇನ್ನೋರ್ವ ಪ್ರದಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್ ಭಂಡಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಪ್ರಧಾನಿ ಮೋದಿಯಿಂದ ಭಾರತದ ವರ್ಚಸ್ಸಿಗೆ ಧಕ್ಕೆ

ನಮ್ಮ ವಿರೋಧಿ ದೇಶಗಳಾದ ಪಾಕಿಸ್ತಾನ ಹಾಗೂ ಚೈನಾ ದೇಶಗಳು ಆಫಗಾನಿಸ್ತಾನ ನೆಲವನ್ನು ತಮ್ಮ ಹಿತಾಶಕ್ತಿಗೆ ಬಳಸಿಕೊಳ್ಳದಂತೆ ಭಾರತ ನೋಡಿ ಕೊಳ್ಳುತ್ತಿತ್ತು, ಅದಕ್ಕಾಗಿ ಆಫಗಾನಿಸ್ಥಾನಿ ದೇಶದಲ್ಲಿ ಒಳ್ಳೆಯ ಸಂಬಂಧವನ್ನು ಬೆಳೆಸಿ ಕೊಂಡಿದ್ದ ಭಾರತ ಆ ದೇಶದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡುತ್ತಿತ್ತು, ಆದರೆ ಈ ತಾಲಿಬಾನಿಗಳು ಆ ದೇಶವನ್ನು ವಶಪಡಿಸಿಕೊಂಡಿದೆ ಆದರೆ ಈ ಅಪಾಯಕಾರಿ ಬೆಳೆವಣಿಗೆಯ ಬಗ್ಗೆ ಪ್ರಧಾನಿ ಮೋದಿಯವರು ಚಕಾರವೆತ್ತದೆ ಮೌನವಾಗಿದ್ದಾರೆ, ಈ ಹಿಂದೆ ಕೆಲವು ದೇಶಗಳ ವಿದ್ಯಾಮಾನಗಳ ಬಗ್ಗೆ ಭಾರತ ದೇಶ ಆಲಿಪ್ತ ನೀತಿಯನ್ನು ಅನುಸರಿಸುತ್ತಿತ್ತು, ಆಗ ಉತ್ತಮ ವಿದೇಶ ನೀತಿಯನ್ನು ಹೊಂದಿ ಎಲ್ಲರಲ್ಲಿ ಸಂಬಂಧ ಚೆನ್ನಾಗಿ ಇಟ್ಟುಕೊಂಡಿತ್ತು ಆದರೆ ಪ್ರಧಾನಿ ಮೋದಿ ಅಮೇರಿಕಾದಂತಹ ದೇಶಗಳ ರಾಜಕೀಯದಲ್ಲಿ ಮೂಗು ತೂರಿಸಿ ಅಲ್ಲಿಯ ಅಧ್ಯಕ್ಷ ರೊಬ್ಬರ ಪರ ನಿಂತು ಅವರ ಪರ ಪ್ರಚಾರನಡೆಸಿ  ಜಗತ್ತಿನಲ್ಲಿ ಭಾರತ ದೇಶದ ವರ್ಚಸ್ಸಿಗೆ ಕುಂದುತಂದಿರುತ್ತಾರೆ ಪ್ರಧಾನಿ ಮೋದಿಯವರ ಇಂತಹ ನಡೆವಳಿಕೆಗಳು ಮುಂದಿನ ದಿನಗಳಲ್ಲಿ ನಮ್ಮ ದೇಶಕ್ಕೆ ಸಂಕಷ್ಟ ತರಲಿದೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.