HomePage_Banner
HomePage_Banner
HomePage_Banner
HomePage_Banner

ಮತಾವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್‌ನ ಪ್ರಥಮ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪಡ್ನೂರು ಗ್ರಾಮದ ಮತಾವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್‌ನ ಪ್ರಥಮ ಮಹಾಸಭೆ ಮೋಹನ್ ಪೂಜಾರಿ ಕೂಟೆಲ್‌ರವರ ಮನೆಯಲ್ಲಿ ಕೊಡಂಗೆ ಗುತ್ತು ವಾಸು ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪುತ್ತೂರು ತಾಲೂಕು ಬಿಲ್ಲವ ಸಂಘದಿಂದ ಪುತ್ತೂರು ವಲಯ ಗ್ರಾಮಾಂತರ ಸಂಚಾಲಕರಾಗಿ ಆಯ್ಕೆಯಾದ ಆರುವಾರ ಗುತ್ತು ಮನೋಹರ್ ಹಾಗೂ ಮದಗ ಶ್ರೀಜನಾರ್ದನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಮಧುಸೂದನ ಪಡ್ಡಾಯೂರು ರವರನ್ನು ಸಭೆಗೆ ಪರಿಚಯಿಸಿ ಅಭಿನಂದಿಸಲಾಯಿತು. ಬಳಿಕ ಎ. ಮನೋಹರ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ಮತ್ತು ಬಿಲ್ಲವ ಗ್ರಾಮ ಸಮಿತಿಯು ಒಟ್ಟಿಗೆ ಸೇರಿ ಕೆಲಸ ಮಾಡಿದ್ದಲ್ಲಿ ಬಿಲ್ಲವ ಸಮಾಜಕ್ಕೆ ಉತ್ತಮ ಸೇವೆ ಮಾಡಿದಂತೆ ಆಗುವುದು ಎಂದರು. ಇತ್ತೀಚೆಗೆ ಮೃತರಾದ ಕುಂಜಾರು ನಾರಾಯಣ ಪೂಜಾರಿ, ಮಾವಿನಕಟ್ಟೆ ಪುರಂದರ ಪೂಜಾರಿ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರಧಾನ ಕಾರ್ಯದರ್ಶಿ ಎನ್. ಮೋಹನ್ ಪಡ್ಡಯೂರು ಮತ್ತು ಪದ್ಮಪ್ಪ ಪೂಜಾರಿ ಮತಾವು ಎರಡು ಸಂಘಗಳ ವರದಿ ವಾಚಿಸಿದರು. ಶ್ರೀಧಾಮು ಪೂಜಾರಿ ನೆಲಪ್ಪಾಲ್ ಲೆಕ್ಕಪತ್ರ ಮಂಡಿಸಿದರು. ವಸಂತ ಪೂಜಾರಿ ದೇಂತಡ್ಕ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ವಿಮಲ ಸುರೇಶ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.