ಆಟೋ ರಿಕ್ಷಾ ಬಾಡಿಗೆ ದರ ಏರಿಸುವಂತೆ ಸಂಯುಕ್ತ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ., ಬಿಡಿಭಾಗಗಳ ಹಾಗೂ ದಿನ ಬಳಕೆಯ ಅಗತ್ಯ ಸಾಮಾಗ್ರಿಗಳ ದರ ಏರಿಕೆಯಾಗಿದ್ದು ಆಟೋ ರಿಕ್ಷಾ ಬಾಡಿಗೆ ದರ ಹೆಚ್ಚಳಗೊಳಿಸುವಂತೆ ಆಟೋ ರಿಕ್ಷಾ ಚಾಲಕರ ಸಂಯುಕ್ತ ಹೋರಾಟ ಸಮಿತಿಯಿಂದ ಸಹಾಯಕ ಆಯುಕ್ತರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ., ಬಿಡಿಭಾಗಗಳ ಹಾಗೂ ದಿನ ಬಳಕೆಯ ಅಗತ್ಯ ಸಾಮಾಗ್ರಿಗಳ ದರ ಏರಿಕೆಯಾಗಿರುವುದಲ್ಲದೆ ಕೋವಿಡ್-19 ಮಹಾಮಾರಿಯಿಂದಾಗಿ ರಿಕ್ಷಾ ಚಾಲಕರು ಬಹಳಷ್ಟು ತೊಂದರೆಗೆ ಒಳಗಾಗಿದ್ದು ಜೀವನ ನಡೆಸುವುದು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಟೋ ರಿಕ್ಷಾ ಬಾಡಿಗೆ‌‌ ದರವನ್ನು ಪ್ರತಿ ಕಿಲೋಮೀಟರ್ ಗೆ ರೂ.38 ಹಾಗೂ ಪ್ರತಿ ಒಂದು ಕಿಲೋಮೀಟರ್ ಗೆ ರೂ.20ರಂತೆ ಹೆಚ್ಚಳಗೊಳಿಸುವಂತೆ ಮನವಿಯಲ್ಲಿ‌ ತಿಳಿಸಿದ್ದಾರೆ.

ಸಂಯುಕ್ತ ಹೋರಾಟ ಸಮಿತಿ ಅಧ್ಯಕ್ಷ ಜಯರಾಮ ಕುಲಾಲ್, ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರು, ಕರ್ನಾಟಕ ಆಟೋ ರಿಕ್ಷಾ ಚಾಲಕ ಮ್ಹಾಲಕರ ಸಂಘದ ಅಧ್ಯಕ್ಷ ನಾಸೀರ್ ಇಡಬೆಟ್ಟು, ಸಲಹೆಗಾರರಾ ಗಿರೀಶ್ ನಾಯ್ಕ ಸೊರಕೆ, ಸ್ನೇಹ ಸಂಗಮದ ಮಾಜಿ ಅಧ್ಯಕ್ಷ ಸಿಲ್ವೆಸ್ಟರ್ ಡಿ ಸೋಜ, ಉಪಾಧ್ಯಕ್ಷರಾದ ಉಮೇಶ್ ಚಂದ್ರ, ಶರತ್ ರೈ ಪಡೀಲು, ವಿಶ್ವನಾಥ ಪೆರಿಗೇರಿ, ಎಸ್.ಡಿ.ಟಿ.ಯು ಆಟೋ ಯೂನಿಯನ್ ಅಧ್ಯಕ್ಷ ಸಮೀರ್ ನಾಜುಕ್ ಸೇರಿದಂತೆ ಹಲವು ಮಂದಿ‌ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.