HomePage_Banner
HomePage_Banner
HomePage_Banner
HomePage_Banner

ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಯುವತಿಯ ಫೋಟೋ ಅಪ್‌ಲೋಡ್ ಮಾಡಿರುವ ಪ್ರಕರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪಶ್ಚಿಮ ಬಂಗಾಳದ ಪೊಲೀಸರಿಂದ ಬಂಧಿತರಾಗಿದ್ದ ಕಡಬ ನೂಜಿಬಾಳ್ತಿಲ ಯುವಕನಿಗೆ ಜಾಮೀನು ಮಂಜೂರು

ಕಡಬ: ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ ಯುವತಿಯೋರ್ವಳ ಫೋಟೋ ಅಪ್‌ಲೋಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಕೋಲ್ಕತ್ತ ಪೊಲೀಸರಿಂದ ಬಂಧಿತರಾಗಿದ್ದ ಕಡಬ ನೂಜಿಬಾಳ್ತಿಲದ ಯುವಕ ಸಂಜಯ್ ಕೃಷ್ಣ ಅವರಿಗೆ ಅಲ್ಲಿನ ನ್ಯಾಯಾಲಯ ಸೆ.7 ರಂದು ಜಾಮೀನು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಕೊಲ್ಕತ್ತ ಪೋಲಿಸರಿಂದ ಸೆ.4ರಂದು ಕಡಬದಲ್ಲಿ ಬಂಧಿತರಾಗಿದ್ದ ಸಂಜಯ್ ಕೃಷ್ಣ ಅವರ ವಿರುದ್ದ ಸಾಮಾಜಿಕ ಜಾಲತಾಣದ ಖಾತೆಯೊಂದಕ್ಕೆ ಯುವತಿಯ ಫೋಟೋ ಅಪ್ ಲೋಡ್ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಸೆಕ್ಷನ್ 354 ಐಪಿಸಿ & 272, 500, 506, 507, 509  ಅನ್ವಯ ಪಶ್ಚಿಮ ಬಂಗಾಳದ ಉತ್ತರ 24 ಪಾರ್‌ಗಾನ ನ್ಯಾಯಾಲಯ ಇವರ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಅಲ್ಲಿನ ಪೋಲಿಸರು ಸಂಜಯ್ ಕೃಷ್ಣ ಅವರು ಬಳಸುತ್ತಿದ್ದ ಮೊಬೈಲ್ ಲೋಕೇಷನ್ ಜಾಡು ಹಿಡಿದು ಕಡಬಕ್ಕೆ ಆಗಮಿಸಿ ಆರೋಪಿಯನ್ನು ಕಡಬದಲ್ಲಿ ಬಂಧಿಸಿ ಬಳಿಕ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಜಾಮೀನು ನಿರಾಕರಿಸಿದರಿಂದ ಬಳಿಕ ಪಶ್ಚಿಮ ಬಂಗಾಳಕ್ಕೆ ಸಂಜಯ್ ಕೃಷ್ಣ ಅವರನ್ನು ಕೊಂಡೊಯ್ಯಲಾಗಿತ್ತು. ಇದೀಗ ಸೆ.7 ರಂದು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ ಎಂದು ಸಂಜಯ್ ಕೃಷ್ಣ ಅವರ ಕುಟುಂಬ ಮೂಲದಿಂದ ತಿಳಿದುಬಂದಿದೆ.

ಪಶ್ಚಿಮ ಬಂಗಾಳದ ಕೊಲ್ಕತ್ತ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಸುಲಘ್ನ ರಾಯ್ ಚೌಧುರಿ ಎಂಬವರ ಫೋಟೋವನ್ನು ಸಂಜಯ್ ಕೃಷ್ಣ ಅವರು ಸಾಮಾಜಿಕ ಜಾಲತಾಣದ ಖಾತೆಯೊಂದಕ್ಕೆ ಅಪ್ ಲೋಡ್ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ಯುವತಿ ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ನ್ಯಾಯಾಲಯದಿಂದ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.