HomePage_Banner
HomePage_Banner
HomePage_Banner
HomePage_Banner

ಆಲಂಕಾರು: ಮೂರ್ತೆದಾರರ ಸೇವಾ ಸಹಕಾರಿ ಸಂಘದ ಗುರುಶ್ರೀ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •    63  ಗುಂಪುಗಳಿಗೆ 6.50 ಲಕ್ಷ ರೂ., ಲಾಭಾಂಶ; ಮುತ್ತಪ್ಪ ಪೂಜಾರಿ ನೈಯಲ್ಗ

ಪುತ್ತೂರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಗುರುಶ್ರೀ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ, ಸಂಘದ ವತಿಯಿಂದ ಉಡುಗೊರೆ ಹಾಗೂ ನೂತನ ಸ್ವಸಹಾಯ ಸಂಘಗಳ ಉದ್ಘಾಟನೆ ಸೆ.7 ರಂದು ಆಲಂಕಾರು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗರವರು ಮಾತನಾಡಿ, 1991ರಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸ್ಥಾಪನೆಗೊಂಡಿದ್ದು ಆರಂಭದಲ್ಲಿ ಶೇಂದಿ ಮಾರಾಟ ವ್ಯವಸ್ಥೆ ಮಾತ್ರ ಇತ್ತು. 2005 ರಲ್ಲಿ ಬ್ಯಾಂಕಿಂಗ್ ವ್ಯವಹಾರ ಆರಂಭಿಸಲಾಗಿದ್ದು ಈಗ ಸಂಘಕ್ಕೆ ಆಲಂಕಾರಿನಲ್ಲಿ ಸ್ವಂತ ಕಟ್ಟಡ, ಕಡಬ, ಕಲ್ಲುಗುಡ್ಡೆ, ನೆಟ್ಟಣ, ಕೊಯಿಲದಲ್ಲಿ ಶಾಖೆಗಳಿವೆ. 2.5ಲಕ್ಷ ರೂ., ಬಂಡವಾಳದೊಂದಿಗೆ ಆರಂಭಗೊಂಡ ಬ್ಯಾಂಕ್ ಕಳೆದ ಸಾಲಿನಲ್ಲಿ92.50 ಕೋಟಿ ರೂ.ವ್ಯವಹಾರ ನಡೆಸಿ 24.86 ಲಕ್ಷ ರೂ.,ನಿವ್ವಳ ಲಾಭಗಳಿಸಿದೆ. ಸಮಾಜದ ಎಲ್ಲಾ ವರ್ಗದ ಜನರ ಸಹಕಾರದಿಂದ ಸಂಘ ಈ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಿದ ಅವರು, 2008ರಲ್ಲಿ ಗುರುಶ್ರೀ ಸ್ವಸಹಾಯ ಸಂಘ ಆರಂಭಿಸಿದ್ದು ಈಗ ಒಟ್ಟು63  ಗುಂಪುಗಳಿಗೆ 6.50 ಲಕ್ಷ ರೂ.,ಲಾಭಾಂಶ ವಿತರಣೆ ಮಾಡಲಾಗಿದೆ ಎಂದು ಹೇಳಿದರು. ಗುರುಶ್ರೀ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಆಗಿದೆ. ಶುಚಿತ್ವ, ಶ್ರಮದಾನದಂತಹ ಚಟುವಟಿಕೆಗಳಲ್ಲಿ ಸಂಘದ ಸದಸ್ಯರು ತೊಡಗಿಕೊಳ್ಳಬೇಕೆಂದು ಮುತ್ತಪ್ಪ ಪೂಜಾರಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಂಕೀರ್ತ್ ಹೆಬ್ಬಾರ್‌ರವರು ಮಾತನಾಡಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘವು ಶಿಕ್ಷಣಕ್ಕೆ, ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿದೆ. ಸಂಘ ತಾನು ಬೆಳೆಯುವುದರೊಂದಿಗೆ ಸಂಘದ ವ್ಯಾಪ್ತಿಯ ಜನರಿಗೂ ಸಹಕಾರ ನೀಡುವ ಮನೋಭಾವ ಹೊಂದಿದೆ ಎಂದು ಹೇಳಿದರು. ಸಂಘದ ನಿರ್ದೇಶಕ ಕೆ.ಜಯಕರ ಪೂಜಾರಿ ಕಲ್ಲೇರಿಯವರು ನೂತನ ಸ್ವಸಹಾಯ ಸಂಘಗಳ ಉದ್ಘಾಟಿಸಿ ಮಾತನಾಡಿ, ಕಡಿಮೆ ಬಂಡವಾಳದೊಂದಿಗೆ ಆರಂಭಗೊಂಡ ಸಂಘ ಸಮಾಜದ ಎಲ್ಲಾ ವರ್ಗದ ಜನರ ಸಹಕಾರದಿಂದ ದೊಡ್ಡ ಮಟ್ಟಕ್ಕೆ ಬೆಳೆದುನಿಂತಿದೆ. ಸಂಘದ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಹಾಗೂ ನಿರ್ದೇಶಕರ ನಿಸ್ವಾರ್ಥ ಸೇವೆಯೂ ಸಂಘದ ಬೆಳವಣಿಗೆಗೆ ಕಾರಣವಾಗಿದೆ. ಇದು ಕೇವಲ ಬಿಲ್ಲವರ ಬ್ಯಾಂಕ್ ಅಲ್ಲ, ಸಮಾಜದ ಬ್ಯಾಂಕ್, ಪರಸ್ಪರ ಸಹಕಾರ ಮನೋಭಾವದಿಂದ ಬೆಳೆದಿದೆ ಎಂದರು. ಸ್ವಸಹಾಯ ಸಂಘದ ಸದಸ್ಯರಿಗೆ ಉಡುಗೊರೆ ಹಾಗೂ ಲಾಭಾಂಶ ವಿತರಿಸಿದ ನಿರ್ದೇಶಕಿ ಮಂಜುಳಾ ಚಂದ್ರಶೇಖರ ಕಲ್ಲೇರಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. 

ನಿರ್ದೇಶಕ ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್‌ಕುಮಾರ್‌ರವರು ಸ್ವಸಹಾಯ ಸಂಘಗಳ ಪುಸ್ತಕ ನಿರ್ವಹಣೆ, ಸಂಘದಿಂದ ಸದಸ್ಯರಿಗೆ ಸಿಗುವ ಸವಲತ್ತುಗಳ ಕುರಿತಂತೆ ಮಾಹಿತಿ ನೀಡಿದರು. ಗುರುಶ್ರೀ ಸ್ವಸಹಾಯ ಸಂಘದ ಸದಸ್ಯೆಯರಾದ ಅಖಿಲ, ವಿಶಾಲಾಕ್ಷಿ ನೈಯ್ಯಲ್ಗರವರು ಅನಿಸಿಕೆ ವ್ಯಕ್ತಪಡಿಸಿದರು. ನೆಟ್ಟಣ ಶಾಖಾ ಮೇನೇಜರ್ ಸುಂದರ ಪಿ ಪಲ್ಲತ್ತಡ್ಕ, ಸಿಬ್ಬಂದಿಗಳಾದ ಸ್ವಾತಿ, ಶರ್ಮಿಳಾ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕ, ನಿಕಟಪೂರ್ವಾಧ್ಯಕ್ಷರೂ ಆದ ಕೆ.ಚಂದ್ರಶೇಖರ ಆಲಂಕಾರುರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ ಸ್ವಾಗತಿಸಿ, ಉಪಾಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು ವಂದಿಸಿದರು. ಸಿಬ್ಬಂದಿ ಅನಿಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುನೀತಾ ಪ್ರಾರ್ಥಿಸಿದರು. ಸಂಘದ ನಿರ್ದೇಶಕರಾದ ಜಿನ್ನಪ್ಪ ಸಾಲಿಯಾನ್ ಕಡಬ, ಗಂಗಾರತ್ನವಸಂತ್ ಅಗತ್ತಾಡಿ, ಜಯಂತ ಪೂಜಾರಿ ನೆಕ್ಕಿಲಾಡಿ, ನೆಟ್ಟಣ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷರಾದ ಕುಮಾರಿ ವಾಸುದೇವನ್, ಸಂತೋಷ್‌ಕುಮಾರ್, ಕೊಯಿಲ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಜನಾರ್ದನ ಕದ್ರ, ಆಲಂಕಾರು ಗ್ರಾ.ಪಂ.ಉಪಾಧ್ಯಕ್ಷೆ ರೂಪಾಶ್ರೀ, ತಾ.ಪಂ.ಮಾಜಿ ಸದಸ್ಯೆ ತಾರಾ ಕೇಪುಳು, ಬಿಲ್ಲವ ಸಂಘದ ಆಲಂಕಾರು ವಲಯ ಸಂಚಾಲಕ ಉದಯ ಸಾಲ್ಯಾನ್, ಕಲ್ಲುಗುಡ್ಡೆ ಶಾಖಾ ಸಲಹಾ ಸಮಿತಿ ಸದಸ್ಯ ಕುಸುಮಾಧರ ಎನ್ಕಾಜೆ, ಲಿಂಗಪ್ಪ ಪೂಜಾರಿ ಕೇಪುಳು, ಜಿನ್ನಪ್ಪ ಪೂಜಾರಿ ಸೇರಿದಂತೆ ಗುರುಶ್ರೀ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.