HomePage_Banner
HomePage_Banner
HomePage_Banner
HomePage_Banner

ಸರ್ವೆ: ಕಾಡಬಾಗಿಲು-ಬಾವ ರಸ್ತೆ ದುರಸ್ತಿಗೆ ಸ್ಥಳೀಯರ ವಿರೋಧ: ಪೊಲೀಸ್ ಭದ್ರತೆಯಲ್ಲಿ ದುರಸ್ತಿ ಕಾರ್ಯ ನಡೆಸಿದ ಗ್ರಾ.ಪಂ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿವಾದದಲ್ಲಿರುವ ಕಾಡಬಾಗಿಲು-ಬಾವ ರಸ್ತೆಯ ದುರಸ್ತಿ ಕಾರ್ಯವು ಗ್ರಾ.ಪಂ ನಿರ್ಣಯಾನುಸಾರ ಸೆ.೭ರಂದು ನಡೆಯಿತು. ಮುಂಡೂರು ಗ್ರಾ.ಪಂ ಪಿಡಿಓ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ನೇತೃತ್ವದಲ್ಲಿ ನಡೆದ ದುರಸ್ತಿ ಕಾರ್ಯಕ್ಕೆ ಸಂಪ್ಯ ಪೊಲೀಸ್ ಠಾಣಾ ಎಸ್ಸೈ ಉದಯರವಿ ನೇತೃತ್ವದ ಪೊಲೀಸರ ತಂಡ ರಕ್ಷಣೆ ಒದಗಿಸಿದ್ದರು.
ಮುಂಡೂರು ಗ್ರಾ.ಪಂ ತಿರ್ಮಾನದಂತೆ ಎರಡು ಜೆಸಿಬಿ ಮೂಲಕ ರಸ್ತೆಯ ದುರಸ್ತಿ ಕಾರ್ಯ ನಡೆಸಲಾಯಿತು. ರಸ್ತೆಯ ಬದಿಗಳಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆಯನ್ನೂ ಮಾಡಲಾಯಿತು.

ಸ್ಥಳೀಯರ ವಿರೋಧ-ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ
ಕಾಡಬಾಗಿಲು-ಬಾವ ರಸ್ತೆ ಹಲವು ವರ್ಷಗಳಿಂದ ವಿವಾದದಲ್ಲಿದ್ದು ಈ ಹಿಂದೆ ಇದೇ ರಸ್ತೆ ವಿಚಾರದಲ್ಲಿ ಸ್ಥಳೀಯವಾಗಿ ಗಲಾಟೆಯೂ ಆಗಿತ್ತು. ಹೀಗಾಗಿ ಗ್ರಾ.ಪಂ ವತಿಯಿಂದ ದುರಸ್ತಿ ಕಾರ್ಯ ನಡೆಸುವಾಗ ಏನಾದರೂ ಅಹಿತಕರ ಘಟನೆ ಇಲ್ಲವೇ ವಿರೋಧ ಬರುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಗ್ರಾ.ಪಂ ಪಿಡಿಓ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದರು. ಅದರಂತೆ ಪೊಲೀಸ್ ರಕ್ಷಣೆಯೊಂದಿಗೆ ರಸ್ತೆ ಕೆಲಸ ಪ್ರಾರಂಭಗೊಂಡಿತು. ಕೆಲಸ ಪ್ರಾರಂಭವಾಗುತ್ತಿದ್ದಂತೆ ಸ್ಥಳೀಯ ಕೆಲವು ಮನೆಯವರಿಂದ ವಿರೋಧವೂ ವ್ಯಕ್ತವಾಯಿತು. ರಸ್ತೆಯ ವಿಚಾರದಲ್ಲಿ ಕಾನೂನು ಹೋರಾಟ ನಡೆಯುತ್ತಿರುವಾಗ ಇದನ್ನು ದುರಸ್ತಿ ಮಾಡುವುದು ಬೇಡ ಎಂದು ಹೇಳಿದ ಕೆಲವರು ದುರಸ್ತಿ ಕಾರ್ಯ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಅಧಿಕಾರಿಗಳು ಅಸಮಾಧಾನಿತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರಾದರೂ ಅದು ಫಲಪ್ರದವಾಗಲಿಲ್ಲ. ನಂತರ ಕಾನೂನು ಮುಖಾಂತರ ಪೊಲೀಸ್ ಭದ್ರತೆಯೊಂದಿಗೆ ರಸ್ತೆ ದುರಸ್ತಿ ಕಾರ್ಯವನ್ನು ನಡೆಸಲಾಯಿತು. ಮುಂಡೂರು ಗ್ರಾ.ಪಂ ಸಿಬ್ಬಂದಿಗಳಾದ ದೇವಪ್ಪ ನಾಯ್ಕ ಹಾಗೂ ಶಶಿಧರ ಕೆ ಮಾವಿನಕಟ್ಟೆ ಉಪಸ್ಥಿತರಿದ್ದರು.


ಸಹಾಯಕ ಆಯುಕ್ತರು ಭೇಟಿ ನೀಡಿದ್ದರು:
ಕಾಡಬಾಗಿಲು-ಬಾವ ರಸ್ತೆ ಅನೇಕ ವರ್ಷಗಳಿಂದ ವಿವಾದದಲ್ಲಿದ್ದು ಈ ವಿಚಾರದಲ್ಲಿ ಸ್ಥಳೀಯರು ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿಯನ್ನೂ ಸಲ್ಲಿಸಿದ್ದರು. ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್ ಅವರು ಕೆಲವು ಸಮಯಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ರಸ್ತೆ ವಿವಾದ ಮುಗಿದಿರಲಿಲ್ಲ. ಸದ್ಯಕ್ಕೆ ಆ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿರುವ ಹಿನ್ನೆಲೆಯಲ್ಲಿ ಆ ಭಾಗದ ನಿವಾಸಿಗಳು ದುರಸ್ತಿಗೊಳಿಸುವಂತೆ ಮುಂಡೂರು ಗ್ರಾ.ಪಂಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.

ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗಿತ್ತು:
ಇತ್ತೀಚೆಗೆ ನಡೆದ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ತೆರಿಗೆ ಕಟ್ಟುವವರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಕಡ್ಡಾಯ ಹಾಗಾಗಿ ರಸ್ತೆ ದುರಸ್ತಿಗೊಳಿಸಿ ಕೊಡಬೇಕೆಂದು ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಒತ್ತಾಯಿಸಿದ್ದರು. ಸದಸ್ಯರಾದ ಚಂದ್ರಶೇಖರ ಎನ್.ಎಸ್.ಡಿ, ಕರುಣಾಕರ ಗೌಡ ಎಲಿಯ ಹಾಗೂ ಅಶೋಕ್ ಕುಮಾರ್ ಪುತ್ತಿಲ ಅವರೂ ಕಾಡಬಾಗಿಲು ರಸ್ತೆ ದುರಸ್ತಿಗೆ ಪೂರಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರಸ್ತೆಯ ವಿವಾದ ಸಹಾಯಕ ಆಯುಕ್ತರ ಹಂತದಲ್ಲಿರುವ ಕಾರಣ ಆ ವಿಚಾರಕ್ಕೆ ನಾವು ಕೈಹಾಕದೆ ಗ್ರಾ.ಪಂ ತೀರ್ಮಾನದಂತೆ ಸದ್ಯಕ್ಕೆ ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡುವುದಾಗಿ ನಿರ್ಣಯ ಮಾಡಲಾಗಿತ್ತು.

ನಿರ್ಗಮನ ದಿನದಂದೂ ಕರ್ತವ್ಯಪ್ರಜ್ಞೆ ಮರೆದ ಪಿಡಿಓ ವಿಲ್ಫ್ರೆಡ್:
ಮುಂಡೂರು ಗ್ರಾ.ಪಂ ಪ್ರಭಾರ ಪಿಡಿಓ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರು ಮುಂಡೂರಿಗೆ ನೂತನವಾಗಿ ನೇಮಕಗೊಂಡಿರುವ ಪಿಡಿಓ ಗೀತಾ ಬಿ.ಎಸ್ ಅವರಿಗೆ ಸೆ.೭ರಂದು ಅಧಿಕಾರ ಹಸ್ತಾಂತರಿಸುವುದಾಗಿ ತೀರ್ಮಾನಿಸಲಾಗಿತ್ತು. ತಾವು ಮುಂಡೂರಿನಿಂದ ವಿರಮಿಸುತ್ತಿದ್ದರೂ ಅದೇ ದಿನ ಗ್ರಾ.ಪಂ ವ್ಯಾಪ್ತಿಯ ವಿವಾದದಲ್ಲಿರುವ ರಸ್ತೆಯನ್ನು ದುರಸ್ತಿಗೊಳಿಸಲು ಸ್ವತಃ ಮುಂದೆ ನಿಂತು ಆ ಭಾಗದ ರಸ್ತೆ ಫಲಾನುಭವಿಗಳ ಮನವಿಗೆ ಸ್ಪಂಧಿಸಿರುವುದಕ್ಕೆ ವಿಲ್ಫ್ರೆಡ್ ಅವರಿಗೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಹಲವು ಪಿಡಿಓಗಳು ಕಾಡಬಾಗಿಲು ರಸ್ತೆ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದರೂ ಅದನ್ನು ದುರಸ್ತಿಗೊಳಿಸುವ ಇಚ್ಛಾಶಕ್ತಿ ತೋರಿಲ್ಲ, ವಿಲ್ಫ್ರೆಡ್ ಅವರು ತಾನು ನಿರ್ಗಮಿಸುತ್ತಿದ್ದರೂ ಜನರ ಸಮಸ್ಯೆ ಅರ್ಥ ಮಾಡಿಕೊಂಡು ರಸ್ತೆ ದುರಸ್ತಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿ ಬಂದಿದೆ.

ಮತದಾನ ಬಹಿಷ್ಕಾರ ಬ್ಯಾನರ್ ಪ್ರತ್ಯಕ್ಷಗೊಂಡಿತ್ತು:
ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕಳೆದ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಕಾಡಬಾಗಿಲು ಎಂಬಲ್ಲಿ ರಾತ್ರೋರಾತ್ರಿ ‘ಚುನಾವಣಾ ಬಹಿಷ್ಕಾರದ ಬ್ಯಾನರ್’ ಪ್ರತ್ಯಕ್ಷಗೊಂಡಿತ್ತು. ನಂತರ ಅಧಿಕಾರಿಗಳು ಅದನ್ನು ತೆರವು ಮಾಡಿದ್ದರು.

ಮುಂಡೂರು ಗ್ರಾ.ಪಂನ ನಿರ್ಣಯದಂತೆ ಕಾಡಬಾಗಿಲು-ಬಾವ ರಸ್ತೆ ದುರಸ್ತಿ ಕಾರ್ಯವನ್ನು ನಡೆಸಲಾಗಿದೆ. ರಸ್ತೆ ವಿಚಾರದಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯೊಂದಿಗೆ ದುರಸ್ತಿ ಕಾರ್ಯಾಚರಣೆ ನಡೆಸಲಾಗಿದೆ-ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಪಿಡಿಓ ಮುಂಡೂರು ಗ್ರಾ.ಪಂ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.