HomePage_Banner
HomePage_Banner
HomePage_Banner
HomePage_Banner

 ಪಾಣಾಜೆ:  ಬಿಜೆಪಿ ಬೂತ್  ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪಾಣಾಜೆ: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮ ಪಂಚಾಯತಿಗಳ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರ ಮನೆಗಳಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮದ ಅಂಗವಾಗಿ ಪಾಣಾಜೆ ಗ್ರಾಮದ 4 ಬೂತ್ ಅಧ್ಯಕ್ಷರ ಮನೆಗಳಲ್ಲಿ ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಸೆ.6 ರಂದು ಸಂಜೆ ನಡೆಯಿತು.

ಮೋದಿಜಿಯ ಕನಸಿನ ಅಭಿವೃದ್ಧಿಯ ಕಾರ್ಯಗಳು, ಯೋಜನೆಗಳು ಪುತ್ತೂರು ತಾಲೂಕಿನ  ಪ್ರತಿ ಹಳ್ಳಿ – ಹಳ್ಳಿಯ  ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ಧ್ಯೇಯ ಹೊಂದಿರುವ ತಾಲೂಕಿನ ಎಲ್ಲಾ ಗ್ರಾಮಗಳು ಅಭಿವೃದ್ಧಿ ಕಾಣಬೇಕೆಂದು ಹಲವಾರು  ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಪುತ್ತೂರು ಶಾಸಕರಾದ   ಅಭಿವೃದ್ಧಿಯ ಹರಿಕಾರ  ಸಂಜೀವ ಮಠಂದೂರುರವರ ನೇತೃತ್ವದಲ್ಲಿ ಬೂತ್ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
  ಪಾಣಾಜೆ ಬೂತ್ ಸಮಿತಿ 1 ರ ಅಧ್ಯಕ್ಷ ರಘುನಾಥ ಪಾಟಾಳಿ ,  ಬೂತ್ 2 ರ ಅಧ್ಯಕ್ಷ  ಗಣಪತಿ ಬಲ್ಯಾಯ , ಬೂತ್ 3 ರ ಅಧ್ಯಕ್ಷರೂ, ಪಂಚಾಯತ್ ಸದಸ್ಯರೂ ಆಗಿರುವ ಸುಭಾಷ್ ರೈ ಚಂಬರಕಟ್ಟ , ಹಾಗೂ ಬೂತ್ 4 ರ  ಅಧ್ಯಕ್ಷ ಮಾಜಿ ಪಾಣಾಜೆ ಗ್ರಾ.ಪಂ. ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ ಇವರ ಮನೆಯಲ್ಲಿ  ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ‌ಮಾಡಿ ಬಳಿಕ ನಾಮ ಫಲಕ ಅಳವಡಿಸಲಾಯಿತು.   ರಾಧಿಕಾ, ತಾರಾ, ಸುನೀತಾ ಹಾಗೂ ಕು.ಅಧಿರಾ ಮೊದಲಿಗೆ ಶಾಸಕರಿಗೆ ಆರತಿ ಎತ್ತಿ , ಹಣೆಗೆ ತಿಲಕವನಿಟ್ಟು ಸಾಂಪ್ರದಾಯಿಕವಾಗಿ  ಸ್ವಾಗತಿಸಿದರು.

    ಪುತ್ತೂರು ಬಿ.ಜೆ.ಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ , ಉಪಾಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಬಿ.ಜೆ.ಪಿ ಹಿಂದುಳಿದ ವರ್ಗ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ ರೆಂಜ,ಹಿರಿಯ ಮುಖಂಡ ರಂಗನಾಥ ರೈ ಗುತ್ತು,  ಪಾಣಾಜೆ ಬಿ.ಜೆ.ಪಿ ಶಕ್ತಿ ಕೇಂದ್ರದ ಸಂಚಾಲಕ ಸದಾಶಿವ ರೈ ಸೂರಂಬೈಲು, ಪುತ್ತೂರು ಬಿ.ಜೆ.ಪಿ ಮಂಡಲ ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಭಂಡಾರಿ,ಪಾಣಾಜೆ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಡಾ.ಅಖಿಲೇಶ್ ಪಾಣಾಜೆ, ಹಿರಿಯ ಮುಖಂಡ ಶಂಕರನಾರಾಯಣ ಭಟ್ ಕೊಂದಲ್ಕಾನ,ಪದ್ಮನಾಭ ರೈ, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್, ಸದಸ್ಯರಾದ ಜಯಶ್ರೀ.ಡಿ, ಸುಲೋಚನ, ಮೋಹನ ನಾಯ್ಕ, ಸಿ.ಎ.ಬ್ಯಾಂಕ್ ನಿರ್ದೇಶಕರಾದ ರವಿಶಂಕರ ಶರ್ಮ, ಗುಣಶ್ರೀ, ಪಂಚಾಯತ್ ಮಾಜಿ ಸದಸ್ಯೆ ಪುಷ್ಪಾವತಿ ರಘುನಾಥ ಪಾಟಾಳಿ,ಬಿ.ಜೆ.ಪಿ ಕಾರ್ಯಕರ್ತರಾದ ಜಾಣು ನಾಯ್ಕ ಭರಣ್ಯ, ಸಂತೋಷ ರೈ ಗೋಳಿತ್ತಡಿ, ಸಂತೋಷ ರೈ ಗಿಳಿಯಾಲು, ಬಾಲಕೃಷ್ಣ ರೈ ಸೂರಂಬೈಲು, ಜತ್ತಪ್ಪ ರೈ ಕೊಂಡೆಪ್ಪಾಡಿ ಮತ್ತೀತರರು ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.