HomePage_Banner
HomePage_Banner
HomePage_Banner
HomePage_Banner

ಬಿ.ಜೆ.ಪಿ ಕೊಯಿಲ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಪ್ರದೀಪ್ ರೈ ಮನವಳಿಕೆ , ಕಾರ್ಯದರ್ಶಿಯಾಗಿ ಸುರೇಶ್ ಗೌಡ ದೇಂತಾರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಬಿ.ಜೆ.ಪಿ ಸುಳ್ಯ ಮಂಡಲದ ಕೊಯಿಲ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಪ್ರದೀಪ್ ರೈ ಮನವಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೌಡ ದೇಂತಾರು ಸದಸ್ಯರುಗಳಾಗಿ ಸುಧಾಕರ ಪೂಜಾರಿ ಕಲ್ಲೇರಿ, ಆಲಂಕಾರು, ಮಮತಾ ಆನೆಗುಂಡಿ, ನಾಣ್ಯಪ್ಪ ಹಳೆನೇರೆಂಕಿಯವರು ಆಯ್ಕೆಗೊಂಡಿದ್ದಾರೆ ಕೊಯಿಲ, ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಕುಂತೂರು, ಪೆರಾಬೆ, ಬಲ್ಯ, ಕುಟ್ರುಪ್ಪಾಡಿ ಗ್ರಾಮಗಳನ್ನೊಳಗೊಂಡ ನೂತನ ಕೊಯಿಲ ಜಿಲ್ಲಾ ಪಂಚಾಯತ್ ಕ್ಷೇತ್ರ ರಚನೆಗೊಂಡಿದ್ದು ಇಷ್ಟು ಗ್ರಾಮಗಳ ಕೊಯಿಲ ಮಹಾಶಕ್ತಿ ಕೇಂದ್ರವಾಗಿದ್ದು ಇದರ ಅಧ್ಯಕ್ಷರಾಗಿ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಯಾಗಿ ಸುರೇಶ್ ಗೌಡ ದೇಂತಾರು ಆಯ್ಕೆಯಾಗಿದ್ದಾರೆ.

ಪ್ರದೀಪ್ ರೈ ಮನವಳಿಕೆ

ಇತ್ತೀಚ್ಚಗೆ ಸುಳ್ಯ ಮಂಡಲ ಬಿ.ಜೆ.ಪಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಯವರ ಅಧ್ಯಕ್ಷತೆಯಲ್ಲಿ ಕುಂತೂರು ಸಿ.ಎ ಬ್ಯಾಂಕ್ ಹಾಲ್ ನಲ್ಲಿ ಕೊಯಿಲ,ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಪೆರಾಬೆ, ಬಲ್ಯ, ಕುಟ್ರುಪ್ಪಾಡಿ ಶಕ್ತಿ ಕೇಂದ್ರದ ಬೂತ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಹಾಗೂ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಸುಳ್ಯಮಂಡಲ ಬಿ.ಜೆ.ಪಿ ಅದ್ಯಕ್ಷ ಹರೀಶ್ ಕಂಜಿಪಿಲಿಯವರು ಘೋಷಣೆ ಮಾಡಿದ್ದಾರೆ. ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸದಾಶಿವ ಶೆಟ್ಟಿ ಮಾರಂಗರವರನ್ನು ಸುಳ್ಯ ಮಂಡಲ ಅಂದರೆ ಸುಳ್ಯ ವಿಧಾನ ಸಭಾ ಕ್ಷೇತ್ರದ ವೃತ್ತಿಪರ ಪ್ರಕೋಷ್ಠದ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಅವರು ಸುಳ್ಯ ವಿಧಾನ ಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಇದೇ ಸಂಧರ್ಭದಲ್ಲಿ ಕೊಯಿಲ ಶಕ್ತಿ ಕೇಂದ್ರದ ಪ್ರಮುಖ್ ಆಗಿ ರಾಮಚಂದ್ರ ಏಣಿತ್ತಡ್ಕ, ರಾಮಕುಂಜ ಶಕ್ತಿ ಕೇಂದ್ರಕ್ಕೆ ಲಕ್ಷೀನಾರಾಯಣ ರಾವ್ ಅತೂರು, ಹಳೆನೇರೆಂಕಿ ಶಕ್ತಿ ಕೇಂದ್ರಕ್ಕೆ ಜನಾರ್ಧನ ಕದ್ರ, ಆಲಂಕಾರು ಶಕ್ತಿ ಕೇಂದ್ರಕ್ಕೆ ಶಿವಣ್ಣ ಗೌಡ ಕಕ್ವೆ, ಪೆರಾಬೆ ಶಕ್ತಿಕೇಂದ್ರಕ್ಕೆ ಜನಾರ್ಧನ ಶೆಟ್ಟಿ ಕಲ್ಲಡ್ಕ,ಬಲ್ಯಶಕ್ತಿ ಕೇಂದ್ರಕ್ಕೆ ದೇವಯ್ಯ ಪನ್ಯಾಡಿ, ಕುಟ್ರುಪ್ಪಾಡಿ ಶಕ್ತಿ ಕೇಂದ್ರಕ್ಕೆ ಶಿವಪ್ರಸಾದ್ ಮೈಲೇರಿ ಯವರು ಶಕ್ತಿ ಕೇಂದ್ರದ ಪ್ರಮುಖರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆಯವರು ಪ್ರಸಕ್ತ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು. ಹಿಂದೆ ಬೆಳಂದೂರು ಬಿ.ಜೆ.ಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿ, ಪೆರಾಬೆ ಬೂತ್ 1 ರ ಅಧ್ಯಕ್ಷರಾಗಿ, ಪೆರಾಬೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಸುರೇಶ್ ಗೌಡ ದೇಂತಾರು

ಜೇಸಿಐ ಆಲಂಕಾರಿನ ಸ್ಥಾಪಕ ಉಪಾಧ್ಯಕ್ಷರಾಗಿ, 2014 ನೇ ಸಾಲಿನ ಅಧ್ಯಕ್ಷರಾಗಿ, 2016 ನೇ ಸಾಲಿನಲ್ಲಿ ಗೋ ಗ್ರೀನ್ ವಿಭಾಗದ ವಲಯ ಸಂಯೋಜಕರಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಎಲ್ಲಾ ಘಟಕಗಳಿಗೆ ಉಚಿತ ಗಿಡಗಳನ್ನು ನೀಡಿದ್ದರು. ಜೇಸಿಐ ಸಂಸ್ಥೆ ನೀಡುವ ಪ್ರತಿಷ್ಠಿತ ಕಮಲ ಪತ್ರ ಪುರಸ್ಕೃತರಾದ ಪ್ರದೀಪ್ ರೈ ಮನವಳಿಕೆ ಕೃಷಿಕರಾಗಿದ್ದು, ಪಾಂಡುರಂಗ ಭಜನಾ ಮಂಡಳಿ ಮನವಳಿಕೆ ಇದರ ಸದಸ್ಯರಾಗಿ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರದಾನಕಾರ್ಯದರ್ಶಿ ಸುರೇಶ್ ಗೌಡ ದೇಂತಾರು ರವರು ಕೃಷಿಕರಾಗಿದ್ದು ಕುಟ್ರುಪ್ಪಾಡಿ ಗ್ರಾಮದವರಾಗಿದ್ದು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ, ಬಿ.ಜೆ.ಪಿ ಶಕ್ತಿ ಕೇಂದ್ರ ಪ್ರಮುಖ್ ಆಗಿ ಸುಳ್ಯ ಮಂಡಲ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆಯ್ಕೆಯಾ ಸಂಧರ್ಭ ದಲ್ಲಿ ಬಿ.ಜೆ.ಪಿ ರಾಜ್ಯ ರೈತಮೋರ್ಚದ ಉಪಾಧ್ಯಕ್ಷರಾದ ಎ.ವಿ ತೀರ್ಥರಾಮ,ದ.ಕ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ಕೃಷ್ಣಶೆಟ್ಟಿ ಕಡಬ, ಸುಳ್ಯಮಂಡಲ ಪ್ರದಾನ ಕಾರ್ಯದರ್ಶಿ ರಾಕೇಶ್ ರೈ ಕಡೆಂಜಿ, ಪ್ರಬುದ್ದರ ಪ್ರಕೋಷ್ಟದ ಸಂಚಾಲಕ ದರ್ಮ ಪಾಲರಾವ್ ಕಜೆ, ಉಪಾಧ್ಯಕ್ಷರಾದ ಜಯಂತಿ ಆರ್ ಗೌಡ, ಗಂಗರತ್ನಾ, ಎಸ್.ಟಿ ಮೋರ್ಚಾದ ಕಾರ್ಯದರ್ಶಿ ಪೂವಪ್ಪ ನಾಯ್ಕ್, ಮಹಿಳಾಮೋರ್ಚಾದ ಕಾರ್ಯದರ್ಶಿ ತೇಜಸ್ವಿನಿ ಕಟ್ಟಪುಣಿ ,ಯುವಮೋರ್ಚ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.