ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಿಯಡ್ಕ ವಲಯದ ನೂತನ ಒಕ್ಕೂಟ ರಚನೆ ಕೊಳ್ತಿಗೆ ಶಾಲೆಯಲ್ಲಿ ನಡೆಯಿತು. ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಮ್ ಸುಂದರ ರೈ ಕೆರೆಮೂಲೆ ಮಾತನಾಡಿ ಹಿಂದಿನ ಕಾಲದಲ್ಲಿ ಬಡವರು ಬ್ಯಾಂಕಿನ ಪರಿಚಯ ಇಲ್ಲದೆ ಬ್ಯಾಂಕ್ ವಹಿವಾಟುಗಳ ಬಗ್ಗೆ ತಿಳುವಳಿಕೆ ಇಲ್ಲದೇ ಇದ್ದು, ಈಗ ಸಂಘವು ರಚನೆಗೊಂಡು ಜನರು ಬ್ಯಾಂಕಿನ ವ್ಯವಹಾರದಲ್ಲಿಯೂ ತೊಡಗಿಸುವಂತೆ ಯೋಜನೆಯು ರಚನೆಗೊಂಡಿದೆ. ಯೋಜನೆಯಲ್ಲಿ ಕೆಲಸ ಮಾಡುವಲ್ಲಿ ಪ್ರಾಮಾಣಿಕತೆ ನಂಬಿಕೆ ಮುಖ್ಯ, ತನ್ನ ಜವಾಬ್ದಾರಿಯನ್ನು ತಾನೇ ನಿರ್ವಹಿಸುವಂತೆ ತಿಳಿಸಿ ನೂತನ ಒಕ್ಕೂಟಕ್ಕೆ ಶುಭಹಾರೈಸಿದ್ದರು.

ಅರಿಯಡ್ಕ ವಲಯದ ಮೇಲ್ವಿಚಾರಕ ಮೋಹನ್ ಮಾತನಾಡಿ ಯೋಜನೆಯು ಜಾತ್ಯತೀತ ಸಂಘವಾಗಿ ಕೃಷಿ ಅಭಿವೃದ್ಧಿಯ ಜೊತೆಗೆ ತನ್ನ ಮನೆಯ ಅಭಿವೃದ್ಧಿಯನ್ನು ನಡೆಸಿಕೊಂಡು ಬಂದು ಅದೇ ರೀತಿ ದುಶ್ಚಟವನ್ನು ನಿರ್ಮೂಲನಗೊಳಿಸಿ ಸಮಾಜದಲ್ಲಿ ಒಂದು ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳಿಸಿದಲ್ಲಿ ಸಂಘದ ಪದಾಧಿಕಾರಿಗಳು ಸಹಕರಿಸಬೇಕಾಗಿ ತಿಳಿಸಿದ್ದರು. ಮಹಿಳೆಯರಿಗೆ ಸ್ವ-ಉದ್ಯೋಗದ ಮೂಲಕ ಸಮಾಜದ ಮುಂದೆ ಬರುವಂತೆ ಅಲ್ಲದೇ ಸಮಾಜದ ಜೊತೆ ಬೆರೆಯುವಂತೆ ಆಗಬೇಕಾಗಿದೆ ಎಂದು ತಿಳಿಸಿದರು. ಕೊಳ್ತಿಗೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ ಸರ್ಕಾರದ ಮೂಲಕ ಆಗಬೇಕಾದ ಕೆಲಸವನ್ನು ನಿರ್ವಹಿಸುತ್ತದೆ ಕಾವಂದರು ಆಶಯದಂತೆ ಕೆಲಸಕಾರ್ಯಗಳು ನಡೆಯಬೇಕೆಂದು ತಿಳಿಸಿದರು. ಮಾಜಿ ವಲಯ ಅಧ್ಯಕ್ಷ ಉದಯಕುಮಾರ್ ಜಿ.ಕೆ ಮಾತನಾಡಿ ಕನ್ನಡದಲ್ಲಿ ಒಗ್ಗಟ್ಟು ಮುಖ್ಯ ಸಂಘದಲ್ಲಿ ಬಡವರು ಮಧ್ಯಮವರ್ಗದವರು ಸೇರಿ ಸಮಾಜದ ಅಭಿವೃದ್ಧಿಯ ಜೊತೆಗೆ ತಮ್ಮ ಅಭಿವೃದ್ಧಿಯು ನಡೆಯಬೇಕೆಂದು ತಿಳಿಸಿದ್ದರು. ಅಧ್ಯಕ್ಷತೆ ವಹಿಸಿದ ಅಧ್ಯಕ್ಷ ವಲಯ ಅಧ್ಯಕ್ಷರಾದ ನವೀನ ಮೇಳಂರವರು ಮಾತನಾಡಿ ಯೋಜನೆಯ ನಡೆದುಬಂದ ದಾರಿಯ ವಿವರಿಸುತ್ತಾ ಧರ್ಮಸ್ಥಳ ಬಾಹುಬಲಿ ನಿರ್ಮಾಣದ ಸಮಯದಿಂದ ಸಂಘದ ರಚನೆಯನ್ನು ನೆನಪಿಸಿದರು. ಮಹಿಳೆ ಒಗ್ಗಟ್ಟಿನ ಮುಂದೆ ಬೇರೆ ಯಾವುದು ಇಲ್ಲ ಸಂಘದ ಸದಸ್ಯರು ಜೊತೆಗೂಡಿ ಕೆಲಸ ಮಾಡಿದ್ದಲ್ಲದೆ, ತಮ್ಮ ಅಭಿವೃದ್ಧಿ ಮತ್ತು ಸಮಾಜದ ಅಭಿವೃದ್ಧಿ ಆಗಲು ಸಾಧ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ ಬಿ. ಒಕ್ಕೂಟದ ಅಧ್ಯಕ್ಷ ವಸಂತ ದುಗ್ಗಲ, ನೂತನ(ಅ)ಒಕ್ಕೂಟದ ಸೇವಾ ಪ್ರತಿನಿಧಿ ಅರುಣಾ ಉಪಸ್ಥಿತರಿದ್ದರು. ನೂತನ ಒಕ್ಕೂಟದ ಪದಗ್ರಹಣದ ನಡೆದು ದಾಖಲಾತಿ ಹಸ್ತಾಂತರಿಸಲಾಯಿತು. ಪದಾಧಿಕಾರಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆಶಾಲತಾ ಪ್ರಾರ್ಥಿಸಿ, ಅರುಣ ಕೆ.ಎಂ ಸ್ವಾಗತಿಸಿದರು. ರಮ್ಯ ವಂದಿಸಿದರು. ಶಾರದಾ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.