HomePage_Banner
HomePage_Banner
HomePage_Banner
HomePage_Banner

ಅನಂತಾಡಿ, ನೆಟ್ಲಮುಡ್ನೂರು, ವೀರಕಂಬ ಗ್ರಾಮದ ಬೂತ್ ಅಧ್ಯಕ್ಷರ ಮನೆಗಳಲ್ಲಿ ಸಂಸದರಿಂದ ನಾಮಫಲಕ ಅನಾವರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ: ನಳಿನ್ ಕುಮಾರ್ ಕಟೀಲ್
  • ಕಾರ್ಯಕರ್ತರ ಅಭೂತಪೂರ್ವ ಸ್ಫಂದನೆ ಪ್ರೀತಿ ವಿಶ್ವಾಸವೇ  ಪಕ್ಷಕ್ಕೆ ಸ್ಪೂರ್ತಿ : ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ವಿಟ್ಲ: ಮುಂದಿನ ಚುನಾವಣೆಯಲ್ಲಿ 150 ಸ್ಥಾನವನ್ನು ಬಿಜೆಪಿ ಪಡೆಯುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ರವರು ಹೇಳಿದರು.

ಅವರು ಸೆ.೮ರಂದು ಅನಂತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 3 ಬೂತ್ ಹಾಗೂ ನೆಟ್ಲಮುಡ್ನೂರು ಗ್ರಾ.ಪಂ.ವ್ಯಾಪ್ತಿಯ 2  ಬೂತ್ ಹಾಗೂ ವೀರಕಂಭ 4 ಬೂತ್  ಗಳ ಅಧ್ಯಕ್ಷ ರುಗಳ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಬಂಟ್ವಾಳ ಬಿಜೆಪಿ ಮಂಡಲದ ಪದಾದಿಕಾರಿಗಳ ಜೊತೆಗೆ ಭೇಟಿ ನೀಡಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ಇಡೀ ರಾಜ್ಯದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ಒತ್ತು ನೀಡಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಯಡಿಯೂರಪ್ಪ ಮಾರ್ಗದರ್ಶನ ದಲ್ಲಿ ಬೊಮ್ಮಾಯಿ ನೇತ್ರತ್ವದ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಬಂಟ್ವಾಳ ದಲ್ಲಿ ಶಾಸಕರು ಮಾದರಿ ಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು ಅವರ ಇಡೀ ತಂಡಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದರು.  ಜನಪ್ರತಿನಿಧಿ ಹಾಗೂ ಕಾರ್ಯಕರ್ತರ ನಡುವೆ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೂತ್ ಅಧ್ಯಕ್ಷ ರ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕರ್ತರ ಅಪೇಕ್ಷಗಳಿಗೆ ಹೆಚ್ಚಿ ನ ಒತ್ತು ನೀಡುವ ಉದ್ದೇಶ ವನ್ನು ಹೊಂದಿದೆ. ಬಿಜೆಪಿ  ಕಾರ್ಯಕರ್ತರ ಆಧಾರಿತ ಪಾರ್ಟಿಯಾಗಿದ್ಧು, ಕಾರ್ಯಕರ್ತರ ಪರಿಶ್ರಮದಿಂದ ಪಾರ್ಟಿ ಗೆದ್ದಿದೆ.  ರಾಜ್ಯದ ಸೂಚನೆಯನ್ನು ಪಾಲನೆ ಮಾಡಿ ಪ್ರಥಮವಾಗಿ ಆರಂಭಮಾಡಿ ಯಶಸ್ವಿ ಕಾರ್ಯಕ್ರಮ ಮಾಡುತ್ತಿರುವ ಬಂಟ್ವಾಳ ಶಾಸಕ ಹಾಗೂ ಮಂಡಲದ ಅಧ್ಯಕ್ಷ ರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.  ಬಿಜೆಪಿ ಪಕ್ಷದ ದಲ್ಲಿ ಕಾರ್ಯಕರ್ತರ ಪರಿಶ್ರಮದ ಆಧಾರದ ಮೇಲೆ ನಾಯಕನಾದರೆ ಉಳಿದ ರಾಜಕೀಯ ಪಕ್ಷಗಳಲ್ಲಿ ಜಾತಿ, ಹಣ, ಒತ್ತಡ, ಪ್ರಭಾವದ  ಮೇಲೆ ನಾಯಕನಾಗುತ್ತಾನೆ ಹಾಗಾಗಿ ಬಿಜೆಪಿ ಪಕ್ಷ ಇತರ ಪಕ್ಷಗಳಿಗಿಂತ  ಭಿನ್ನ ಎಂದರು.   ರಾಷ್ಟ್ರೀಯ ವಿಚಾರದ ಆದಾರದಲ್ಲಿ ಆಡಳಿತ ಮಾಡಲು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು. ರಾಷ್ಟ್ರದ ಶ್ರೇಷ್ಟ ವಾದ ಪರಂಪರೆಯನ್ನು , ಸಂಸ್ಕೃತಿ , ನೆಲ, ಜಲ, ಭಾಷೆಯನ್ನು ಉಳಿಸಲು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಸಂಕಲ್ಪ, ಆಚಾರ, ವಿಚಾರ, ಸಂಬಂಧ , ಸಂಪರ್ಕ ಗಳ ತತ್ವ, ಸಿದ್ದಾಂತದ ಆಧಾರದಲ್ಲಿ ಪಕ್ಷದ ಸಂಘಟನೆಗೆ ಒತ್ತುನೀಡಿ ಅ ಮೂಲಕ ಆಡಳಿತ ಮಾಡಬೇಕು ಎಂದು ಅವರು ಹೇಳಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಮಾತನಾಡಿ , ಕಾರ್ಯಕರ್ತರ ಅಭೂತಪೂರ್ವ ಸ್ಫಂದನೆ ಪ್ರೀತಿ ವಿಶ್ವಾಸವೇ ಪಕ್ಷ ಸಂಘಟನೆ ಹಾಗೂ ಪಕ್ಷಕ್ಕೆ ಸ್ಪೂರ್ತಿ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಗೂ ಭಾರತೀಯ ಜನತಾ ಪಾರ್ಟಿಯ ಕಲ್ಪನೆ ಗಳು , ಯೋಚನೆಗಳು ನಮ್ಮ ಜೀವಿತಾವಧಿಯಲ್ಲಿ ಸಾಕರಗೊಂಡಿದೆ ಎಂಬುದೇ ನಮಗೆ ಹೆಮ್ಮೆಯ ವಿಷಯ ಎಂದರು.

ಪಕ್ಷ ಜವಾಬ್ದಾರಿಯ ಜೊತೆಗೆ ಸಂಘಟನೆಯನ್ನು ಮಾಡಿದ ಹೆಗ್ಗಳಿಕೆ ನಳಿನ್ ಅವರದ್ದು ಎಂದು ಅವರು ಹೇಳಿದರು.
ಅನಂತಾಡಿ ಗ್ರಾ.ಪಂ‌.ವ್ಯಾಪ್ತಿಯ ಬೂತ್ ಸಂಖ್ಯೆ 208  ನಾಗೇಶ್ ಭಂಡಾರಿ , ಬೂತ್ ಸಂಖ್ಯೆ 209 ರ ಅಧ್ಯಕ್ಷ ಕುಂಜ್ಞಪ್ಪ ಗೌಡ, ಬೂತ್ ಸಂಖ್ಯೆ 210 ರ ಅಧ್ಯಕ್ಷ ತಿಮ್ಮಪ್ಪ ಗೌಡ ಅವರ ಮನೆಗೆ ತೆರಳಿ ನಾಮಫಲಕ ಅನಾವರಣ ಮಾಡಲಾಯಿತು.

 

ನೆಟ್ಲಮುಡ್ನೂರು  ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ,ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಅನಂತಾಡಿ,ಉಪಾಧ್ಯಕ್ಷ ಕುಸುಮಾಧರ ಗೌಡ,  ಸದಸ್ಯರಾದ ಸುಜಾತ, ಮಮಿತಾಕೇಶವ, ರಶ್ಮಿರಾಕೇಶ್ , ಸಂದ್ಯಾನಾಗೇಶ್, ಬಿಜೆಪಿ ಮಂಡಲದ   ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ,  ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ,  ಪ್ರಮುಖರಾದ ಮಾದವ ಮಾವೆ,  ಪುಷ್ಪ ರಾಜ್ ಚೌಟ,  ಸಂತೋಷ್ ಕುಮಾರ್ ಬೋಳಿಯಾರ್, ಸುಲೋಚನ ಜಿ.ಕೆ.ಭಟ್, ರಮನಾಥ ರಾಯಿ,   ಗೀತಾಚಂದ್ರಶೇಖರ್, ದಿನೇಶ್ ಅಮ್ಟೂರು,   ಪ್ರಕಾಶ್ ಅಂಚನ್, ಗಣೇಶ್ ರೈ ಮಾಣಿ, ಆನಂದ ಶಂಭೂರು  , ರಂಜಿತ್ ಮೈರ, ಮೋಹನ್ ಪಿ.ಎಸ್. ತನಿಯಪ್ಪ ಗೌಡ ನೇರಳಕಟ್ಟೆ, ಸಂದೇಶ ಶೆಟ್ಟಿ, ಪುರುಷೋತ್ತಮ ಬಾರಕಿನೆಡೆ ವಾಮದಪದವು,ಸೀತಾರಾಮ ಪೂಜಾರಿ,ನಾರಾಯಣ ಶೆಟ್ಟಿ ಮಾಣಿ, ಯಶೋಧರ ಕರ್ಬೆಟ್ಟು,ಸೀಮಾಮಾದವ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್ ಅರಳ, ಕಾರ್ತಿಕ್ ಬಲ್ಲಾಳ್, ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದರು.

ಕಳಸ ಕನ್ನಡಿ , ಬ್ಯಾಂಡ್ ವಾದ್ಯ ದೊಂದಿಗೆ  ಸಂಸದ, ಶಾಸಕ ಹಾಗೂ ಬಿಜೆಪಿ ಮಂಡಲದ  ಪದಾಧಿಕಾರಿಗಳನ್ನು ಸ್ವಾಗತಿಸಲಾಯಿತು.
ಪ್ರತೀ ಮನೆಗಳಲ್ಲಿ ಆರತಿ ಎತ್ತಿ ಹಣೆಗೆ ಕುಂಕುಮ ಹಚ್ಚಿ ಸಂಸದ ಶಾಸಕರನ್ನು ಬರಮಾಡಿಕೊಳ್ಳಲಾಯಿತು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ  ಪ್ರಾಸ್ತಾವಿಕ ವಾಗಿ ಮಾತನಾಡಿದ ರು. ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿ, ಮಹಾಶಕ್ತಿ ಕೇಂದ್ರ ದ  ಅಧ್ಯಕ್ಷ ಸನತ್   ಕುಮಾರ್ ರೈ ತುಂಬೆದಕೋಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.


  

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.