HomePage_Banner
HomePage_Banner
HomePage_Banner
HomePage_Banner

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಾಣಿಯೂರು: ಶಿಕ್ಷಕರ ಕ್ರೀಯಾಶೀಲತೆ ಹಾಗೂ ಆದರ್ಶಗಳು ವಿದ್ಯಾರ್ಥಿಗಳ ಭದ್ರ ಬುನಾದಿಗೆ, ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಮೂಲ ಪ್ರೇರಣೆ. ಶಿಕ್ಷಕರ ಆದರ್ಶಗಳು, ಸರಳತೆ, ಶಿಸ್ತು ಇವೆಲ್ಲವೂ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಎಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಹೇಳಿದರು. ಅವರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಶಾಲಾ ಮುಖ್ಯಗುರು ಸರಸ್ವತಿ ಎಂ. ಹಿರಿಯ ಶಿಕ್ಷಕಿಯರಾದ ವಿನಯ. ವಿ ಶೆಟ್ಟಿ, ಅನಿತಾ ಜೆ ರೈ , ಹೇಮಾ ನಾಗೇಶ್ ರೈ, ಪುಷ್ಪ ಬಿ.ಜೆ ಶುಭಹಾರೈಸಿದರು. ವಿದ್ಯಾರ್ಥಿಗಳಾದ ಅಪರ್ಣ, ಅಂಬಿಕಾ, ಮನಸ್ವಿ ಪ್ರಾರ್ಥಿಸಿದರು. ಸಮೃದ್ಧಿ ಶೆಟ್ಟಿ, ಭೂಮಿಕಾ, ಯಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಸುನಿತಾ, ಸೌಭಾಗ್ಯ, ವಿನ್ಯಾ ವಿ ಶೆಟ್ಟಿ, ವೈಷ್ಣವಿ, ಜಸ್ಮಿತಾ, ಸಾತ್ವಿಕಾ, ಹಂಸಿನಿ, ಚೈತನ್, ಶ್ರವಣ್‌ರಾಜ್ ಜೈನ್, ರಕ್ಷಾ ಶಿಕ್ಷಕರ ದಿನಾಚರಣೆಯ ಬಗ್ಗೆ ಮಾತನಾಡಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.