HomePage_Banner
HomePage_Banner
HomePage_Banner
HomePage_Banner

ಪುಣ್ಚಪ್ಪಾಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುಮಾರ್ ಕೆ.ಮಾಸ್ತರ್‌ಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದ ಕುಮಾರ್ ಕೆ.ರವರಿಗೆ ಶ್ರದ್ಧಾಂಜಲಿ ಸಭೆಯು ಸವಣೂರಿನ ಪುಣ್ಚಪ್ಪಾಡಿ ಗ್ರಾಮದ ನೆಕ್ಕಿ ಮನೆಯಲ್ಲಿ ಸೆ.8 ರಂದು ನಡೆಯಿತು. ಕುಮಾರ್ ಕೆ.ರವರು ಪತ್ನಿ ವಿಜಯಲಕ್ಷ್ಮೀಯವರು ಭಾವಚಿತ್ರದ ಎದುರು ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು. ಕರ್ನಾಟಕ ರಾಜ್ಯ ಮೊಗೇರ ಸಂಘದ ಸಂಘಟನ ಕಾರ್ಯದರ್ಶಿ ನಂದರಾಜ್ ಸಂಕೇಶರವರು ಮಾತನಾಡಿ, ಕುಮಾರ್ ಮಾಸ್ತರ್‌ರವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು, ತಾನು ಸಲ್ಲಿಸಿದ ಸೇವೆಗೆ ರಾಷ್ಟ್ರ ಪ್ರಶಸ್ತಿಯ ಗರಿ ಸಿಕ್ಕಿದ್ದು ಇಂತಹ ಓರ್ವ ಶಿಕ್ಷಕರು ಮೊಗೇರ ಸಮುದಾಯಕ್ಕೆ ಹೆಮ್ಮೆಯಾಗಿದ್ದರು. ತನ್ನ ಸಮುದಾಯದ ಬೆಳವಣಿಗೆಗೆ ಬಹಳಷ್ಟು ಶ್ರಮವಹಿಸಿದ ಕುಮಾರ್‌ರವರು ಓರ್ವ ಸಜ್ಜನ ಸರಳ ಜೀವಿಯಾಗಿದ್ದರು. ಕುಮಾರ್‌ರವರನ್ನು ಕಳೆದುಕೊಂಡಿರುವುದು ಇಡೀ ಮೊಗೇರ ಸಮುದಾಯಕ್ಕೆ ಅಪಾರ ನಷ್ಟ. ಅವರ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ಕೊಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನುಡಿನಮನ ಸಲ್ಲಿಸಿದರು. ಎಲ್‌ಐಸಿ ಬಂಟ್ವಾಳ ಶಾಖಾ ಪ್ರಬಂಧಕ ಸುಂದರ್‌ರವರು ಮಾತನಾಡಿ, ಕುಮಾರ್‌ರವರ ಸರಳ ಸಜ್ಜನಿಕೆ ಜೀವನ ಶೈಲಿ ನಮಗೆಲ್ಲರಿಗೂ ಮಾದರಿಯಾಗಿದೆ. ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಇಡೀ ಮೊಗೇರ ಸಮುದಾಯಕ್ಕೆ ಹೆಮ್ಮೆ ತಂದ ವಿಷಯವಾಗಿದೆ ಎಂದು ನುಡಿನಮನ ಸಲ್ಲಿಸಿದರು. ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಒಂದು ನಿಮಿಷ ಮೌನ ಪ್ರಾರ್ಥನೆಯ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ತಾ.ಮೊಗೇರ ಸಂಘದ ಅಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಅಂಗಾರ ಹಾರಾಡಿ, ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ, ಸುಳ್ಯ ತಾ.ಮೊಗೇರ ಸಂಘದ ಸಲಹೆಗಾರ ಕೇಶವ ಮಾಸ್ತರ್, ಕೃಷ್ಣ ಪ್ರಸಾದ್ ಮಂಗಳೂರು, ಹಿರೆಬಂಡಾಡಿ ಶಾಲಾ ಮುಖ್ಯಗುರು ಬಾಬು ಮಾಸ್ತರ್ ತೆಗ್ಗು, ತೆಗ್ಗು ಶಾಲಾ ಮುಖ್ಯಗುರು ಕಿರಣ್ ಮಾಸ್ತರ್, ಅಬಕಾರಿ ಇಲಾಖೆಯ ವಿಜಯ ಕುಮಾರ್ ಕನ್ಯಾಮಂಗಲ, ಸವಣೂರು ಗ್ರಾಪಂ ಸದಸ್ಯ ಗಿರಿಶಂಕರ ಸುಲಾಯ, ಸೋಮನಾಥ ಕನ್ಯಾಮಂಗಲ, ನಿವೃತ್ತ ತಹಶೀಲ್ದಾರ್ ಮೋಹನ್‌ದಾಸ್, ಬಾಬು ಮಾಸ್ತರ್ ತುಂಬೆ, ರಾಧಾಕೃಷ್ಣ, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಮಣಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಕುಮಾರ್ ಮಾಸ್ತರ್‌ರವರ ಅಣ್ಣ ಕುಂಡ ನೆಕ್ಕಿ, ಪುತ್ರರಾದ ಡಾ|| ಶಿವಪ್ರಸಾದ ಕೆ.ವಿ, ಶರತ್ ಕೆ.ವಿ, ಭರತ್ ಕೆ.ವಿ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.