HomePage_Banner
HomePage_Banner
HomePage_Banner
HomePage_Banner

ಪಾಪೆಮಜಲು ಶಾಲೆಯಲ್ಲಿ ಚಿಣ್ಣರ ಪಾರ್ಕ್ ಉದ್ಘಾಟನೆ ಸರಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ – ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ : ಪಾಪೆಮಜಲು ಹಿ.ಪ್ರಾ ಶಾಲೆಯಲ್ಲಿ ಸೆ.೭ ರಂದು ದೇರ್ಲ ದಿ.ತಿಮ್ಮಣ್ಣ ರೈ ಮತ್ತು ದೇರ್ಲ ದಿ. ಸೋಮಕ್ಕೆ ರೈ ಪಾಪೆಮಜಲು ಇವರ ಸ್ಮರಣಾರ್ಥ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಕೊಡುಗೆಯಾಗಿ ನೀಡಿರುವ ಚಿಣ್ಣರ ಪಾರ್ಕ್‌ನ ಉದ್ಘಾಟನೆ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಪಾರ್ಕ್ ಉದ್ಫಾಟಿಸಿ ಮಾತಾಡಿ ಕೋವಿಡ್‌ನಿಂದಾಗಿ ಗುರು ಶಿಷ್ಯ ಸಂಬಂಧ ದೂರವಾಗಿದೆ. ಗುರುವಿನ ಹತ್ತಿರ ವಿದ್ಯಾರ್ಥಿ ಬರುವಂತೆ ಸರಕಾರ ಯೋಚಿಸುತ್ತಿದೆ. ವಿದ್ಯಾರ್ಥಿಯ ವಿದ್ಯಾರ್ಜನೆಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಲ್ಲಿ ಸರಕಾರ ಆನ್‌ಲೈನು ಕ್ಲಾಸು, ವಿದ್ಯಾಗಮ ಕ್ಲಾಸುಗಳನ್ನು ತಂದಿದೆ. ಕೋವಿಡ್ ದೂರವಾಗಿ ಮಕ್ಕಳು ಶಾಲೆಗೆ ಬರುವ ದಿನ ಬೇಗನೆ ಬರಲಿ ಶಿಕ್ಷಣದಲ್ಲಿ ಬದಲಾವಣೆಯಾಗಬೇಕು. ಅದಕ್ಕಾಗಿ ಸರಕಾರ ಹೊಸ ಶಿಕ್ಷಣ ಪದ್ದತಿಯನ್ನು ಜಾರಿಗೆ ತರುವ ಯೋಚನೆ ಮತ್ತು ಯೋಜನೆ ನಡೆಯುತ್ತಿದೆ. ಪರಿವರ್ತನೆ ಜಗದ ನಿಯಮ ಪಾಶ್ಚಾಮಾತ್ಯ ಶೈಲಿಗೆ ಮಾರು ಹೋಗದೇ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಬೇಕು. ಸರಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಲೆಗಳು ಉತ್ತುಂಗ ಶಿಖರಕ್ಕೇರಲು ಡಾ.ಅರುಣ್ ಕುಮಾರ್ ನಂತಹ ಹೃದಯ ಶ್ರೀಮಂತಿಕೆ ಇರುವವರು ಬೇಕು. ಅವರು ನೀಡಿರುವ ಚಿಣ್ಣರ ಪಾರ್ಕ್ ಇತರರಿಗೆ ಮಾದರಿಯಾಗಿದೆ. ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಮಾತನಾಡಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಮಕ್ಕಳ ಸಂಖ್ಯೆ ಹೆಚ್ಚಾಗಬೇಕು ನಮ್ಮೂರಿನ ನಮ್ಮ ಶಾಲೆ ಮಾದರಿ ಶಾಲೆಯಾಗಬೇಕಾದರೆ ಸಮಾಜ ಮತ್ತು ಶಾಲೆಯ ಬಾಂದವ್ಯ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ದೇರ್ಲ ಕುಟುಂಬಸ್ಥರು ಶಾಲೆಯ ಮೇಲೆ ಗೌರವವಿಟ್ಟು ಚಿಣ್ಣರ ಪಾರ್ಕನ್ನು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ಸುದ್ದಿ ಮಾದ್ಯಮದವರು ನಡೆಸಿದ ಉತ್ತಮ ಸರಕಾರಿ ಇಲಾಖೆ, ಆನ್‌ಲೈನ್ ಮತದಾನದಲ್ಲಿ ನಮ್ಮ ಶಿಕ್ಷಣ ಇಲಾಖೆ ಪ್ರಥಮ ಸ್ಥಾನ ಪಡೆದಿದೆ. ಇದರಿಂದ ಜವಾಬ್ದಾರಿ ಹೆಚ್ಚಿದೆ. ಕೋವಿಡ್ ಸಮಯದಲ್ಲಿ ನಮ್ಮ ಶಿಕ್ಷಕ ಬಂದುಗಳು ಸಮಾಜಸೇವೆಯನ್ನು ಮಾಡಿದ್ದಾರೆ. ದಾನಿಗಳ ಸಂಖ್ಯೆ ಇನ್ನೂ ಹೆಚ್ಚಾಗಿ ಇನ್ನಷ್ಟು ಶಾಲೆ ಪ್ರಗತಿ ಸಾಧಿಸಲಿ ಎಂದು ಆಶಿಸಿದರು. ಪುತ್ತೂರು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಅಮಣ್ಣ ರೈ ಡಿ. ಪಾಪೆಮಜಲು ಮಾತನಾಡಿ ನಮ್ಮ ದೇರ್ಲ ಕುಟುಂಬಸ್ಥರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆ ಮಾಡಿದ್ದೇವೆ. ಅದೇ ರೀತಿ ಈ ಶಿಕ್ಷಣ ಸಂಸ್ಥೆಗೆ ಚಿಣ್ಣರ ಪಾರ್ಕ್‌ನ್ನು ಒದಗಿಸಿಕೊಟ್ಟಿದ್ದೇವೆ. ನನಗೆ ಇಲ್ಲಿಯ ಪಾಪೆಮಜಲು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಎರಡು ಕಣ್ಣಿದ್ದಂತೆ. ಮಕ್ಕಳ ಮತ್ತು ಶಿಕ್ಷಕರ ಬಗ್ಗೆ ಒಳ್ಳೆಯ ಬಾಂದವ್ಯ ಇದ್ದಾಗ ಶಾಲೆ ಮಾದರಿ ಶಾಲೆಯಾಗುತ್ತದೆ. ದೇಶ ಕಾಯುವ ಸೈನಿಕರು ಮತ್ತು ಶಿಕ್ಷಣ ಸಂಸ್ಥೆಗಳು ಈ ದೇಶದಲ್ಲಿರುವ ಅತ್ಯುತ್ತಮ ಸಂಸ್ಥೆಗಳಾಗಿವೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ ಮಾತನಾಡಿ ಶಾಲೆಗಳಲ್ಲಿ ಮಕ್ಕಳ ಮುಖವನ್ನು ನೋಡಲು ಖಾತರಿಸುತ್ತಿದ್ದೇವೆ. ಕೋವಿಡ್ ದೂರವಾಗಿ ಮಕ್ಕಳು ಶಾಲೆಗೆ ಬೇಗನೇ ಬರುವಂತಾಗಲಿ. ಶಿಕ್ಷಕರ ಮುಖದಲ್ಲಿ ನಗುವಿರಬೇಕಾದರೆ ಶಾಲೆಯಲ್ಲಿ ಮೂಲಭೂತ ಸೌಕರ‍್ಯಗಳಿರಬೇಕು. ಈ ನಿಟ್ಟಿನಲ್ಲಿ ದೇರ್ಲ ಕುಟುಂಬಸ್ಥರು ಶಾಲೆಯ ಕೊರತೆಯನ್ನು ನೀಗಿಸಿದ್ದಾರೆ ಎಂದರು. ಮುಖ್ಯಗುರು ತೆರೆಜ್ ಎಂ. ಸಿಕ್ವೇರಾ ಪ್ರಾಸ್ತಾವಿಕ ಮಾತನಾಡಿ ಚಿಣ್ಣರ ಪಾರ್ಕ್ ನೀಡಿದ ಡಾ.ಅರುಣ್ ಕುಮಾರ್ ರೈ ದೇರ್ಲ ಮತ್ತು ಅವರ ಕುಟುಂಬ ವರ್ಗಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಚಿಣ್ಣರ ಪಾರ್ಕ್ ಕಾಮಗಾರಿಯ ಸಂದರ್ಭದಲ್ಲಿ ಶ್ರಮಿಸಿದ ಪ್ರತಿಯೊಬ್ಬರನ್ನು ಸ್ಮರಿಸಿದರು.

ಸನ್ಮಾನ : ಚಿಣ್ಣರ ಪಾರ್ಕ್‌ನ್ನು ಕೊಡುಗೆ ನೀಡಿದ ಡಾ. ಅರುಣ್ ಕುಮಾರ್ ರೈಯವರ ಮಾತೃಶ್ರೀ ಗುಲಾಬಿ ರೈ ದೇರ್ಲ, ಮಾವಂದಿರಾದ ಚೆನ್ನಪ್ಪ ರೈ ದೇರ್ಲ ಹಾಗೂ ಅಮ್ಮಣ್ಣ ರೈ ಡಿ. ಪಾಪೆಮಜಲುರವರನ್ನು ಶಾಸಕರು ಫಲಪುಷ್ಪ, ಸ್ಮರಣಿಕೆ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಿದರು. ಸನ್ಮಾನ ಪತ್ರವನ್ನು ಶಿಕ್ಷಕಿ ಮೇಬಲ್ ಡಿಸೋಜ ವಾಚಿಸಿದರು.

ಶೌಚಾಲಯಕ್ಕೆ ಗುದ್ದಲಿಪೂಜೆ : ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ನರೇಗಾ ಯೋಜನೆಯಡಿ ೪ ಲಕ್ಷ ರೂ ವೆಚ್ಚದ ಶೌಚಾಲಯ ನಿರ್ಮಾಣಕ್ಕೆ ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಗುದ್ದಲಿ ಪೂಜೆ ನೇರವೇರಿಸಿದರು. ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಲೆಯ ಅಭಿವೃದ್ದಿಗೆ ನಮ್ಮ ಪಂಚಾಯತ್ ವತಿಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ದೇರ್ಲ ಕುಟುಂಬಸ್ಥರು ಮಾಡಿದ ಈ ಕಾರ್ಯ ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಂಚಾಯತ್ ಪಿ.ಡಿ.ಓ ಪದ್ಮ ಕುಮಾರಿ, ಪ್ರಾ.ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ವೇದಾವತಿ, ಉಪಸ್ಥಿತರಿದ್ದರು. ದೇರ್ಲ ಕುಟುಂಬಸ್ಥರು, ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಪೋಷಕರು, ಅಂಗನವಾಡಿ ಸಿಬ್ಬಂದಿಗಳು, ಶಾಲಾ ಶಿಕ್ಷಕಿ ಉಮಾ ನಾಯ್ಕ್ ಉಪಸ್ಥಿತರಿದ್ದರು. ಶಿಕ್ಷಕಿ ಜಯಲತಾ ಬಿ.ಕೆ ಸ್ವಾಗತಿಸಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಪ್ಪಯ್ಯ ನಾಯ್ಕ ವಂದಿಸಿದರು. ಶಿಕ್ಷಕಿ ರಜನಿ ಕೆ.ಆರ್ ಪ್ರಾರ್ಥಿಸಿ, ಶಿಕ್ಷಕಿ ಪುಷ್ಪಾವತಿ ಎಸ್. ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.