HomePage_Banner
HomePage_Banner
HomePage_Banner
HomePage_Banner

ಮುಳಿಯ ಜ್ಯುವೆಲ್ಸ್‌ನಲ್ಲಿ ಚೈನ್, ಡೈಮಂಡ್ ಪೆಸ್ಟ್ ಉದ್ಘಾಟನೆ: ಚಿನ್ನಾಭರಣಗಳು ಜನರಿಗೆ ಮುಟ್ಟಬೇಕೆಂಬ ಮನಸ್ಸು ಮುಳಿಯ ಸಂಸ್ಥೆಯದ್ದು-ದುರ್ಗಾಪ್ರಸಾದ್ ಕುಂಬ್ರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರೂ. ೨,೪೦೦ ರಿಂದ ರೂ. ೧೫ ಲಕ್ಷದ ತನಕ ವಜ್ರಾಭರಣಗಳು
  • ೭೦ ಕ್ಕೂ ಹೆಚ್ಚು ವಿವಿಧ ವಿನ್ಯಾಸಗಳು
  • ೨ ಗ್ರಾಮ್‌ನಿಂದ ೧೦೦ ಗ್ರಾಮ್ ತನಕದ ಚೈನಗಗಳ ಲಭ್ಯ
  • ಪ್ರತೀ ಖರೀದಿಗೆ ಅತ್ಯಾಕರ್ಷಕ ಕೊಡುಗೆಗಳ ಗಿಫ್ಟ್ ಓಚರ್
  • ಬಂಪರ್ ಬಹುಮಾನವಾಗಿ ಕಾರು ಗೆಲ್ಲುವ ಅವಕಾಶ

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಖರೀದಿಸುವ ಅವಕಾಶ
ಹೊಸ ವಿಷಯಗಳನ್ನು ಪುತ್ತೂರಿಗೆ ಪರಿಚಯಿಸುವ ಮೂಲಕ ಎಲ್ಲಾ ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ. ಚೈನ್ ಮತ್ತು ಡೈಮಂಡ್ ಪೆಸ್ಟ್‌ನಲ್ಲಿ ರೂ. ೨,೪೦೦ ರಿಂದ ವಜ್ರಭರಣಗಳನ್ನು ಗ್ರಾಹಕರು ತಮ್ಮದಾಗಿಸುವ ಅವಕಾಶವಿದೆ. ರೂ. ೧೫ಲಕ್ಷದ ತನಕ ಡೈಮಂಡ್ ಆಭರಣಗಳಿವೆ. ಚೈನ್‌ನಲ್ಲಿ ೭೦ಕ್ಕೂ ಹೆಚ್ಚು ಡಿಸೈನ್ ಲಭ್ಯವಿದೆ. ೨ ಗ್ರಾಮ್‌ನಿಂದ ೧೦೦ ಗ್ರಾಮ್ ಆಭರಣಗಳಿವೆ. ಗ್ರಾಹಕ ಬಾಂದವರು ನೋಡಿ ಆನಂದಿಸಿ, ಖರೀದಿಸಿ, ಖರೀದಿ ಮೇಲೆ ವಿವಿಧ ಗೃಹೋಪಯೋಗಿ ವಸ್ತುಗಳ ಕೊಡುಗೆಗಳಿವೆ. ಬಂಪರ್ ಬಹುಮಾನವಾಗಿ ಕಾರು ಗೆಲ್ಲುವ ಅವಕಾಶವಿದೆ. ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಪಾಲಿಸಿಕೊಳ್ಳಲಾಗಿದೆ. ಕೃಷ್ಣನಾರಾಯಣ ಮುಳಿಯ, ಮ್ಯಾನೇಜಿಂಗ್ ಡೈರೆಕ್ಟರ್, ಮುಳಿಯ ಜ್ಯುವೆಲ್ಸ್ ಪುತ್ತೂರು

ಪುತ್ತೂರು: ಅಮೃತಮಹೋತ್ಸವದ ಸಂಭ್ರಮದಲ್ಲಿರುವ ಚಿನ್ನಾಭರಣಗಳ ಪ್ರತಿಷ್ಠಿತ ಸಂಸ್ಥೆ ಮುಳಿಯ ಜ್ಯುವೆಲ್ಸ್‌ನಲ್ಲಿ ಸೆ.೨೦ರ ತನಕ ನಡೆಯುವ ಚೈನ್ ಮತ್ತು ಡೈಮಂಡ್ ಪೆಸ್ಟ್‌ಗೆ ಸೆ.8ರಂದು ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು. ಈ ನಡುವೆ ಪ್ರತಿ ಖರೀದಿಯಲ್ಲಿ ಅತ್ಯಾಕರ್ಷಕ ಉಡುಗೊರೆ ಪಡೆಯುವ ಅವಕಾಶವನ್ನು ಕೊಡಲಾಗಿದೆ.

ಚಿನ್ನಾಭರಣಗಳು ಜನರಿಗೆ ಮುಟ್ಟಬೇಕಾದ ಮನಸ್ಸು ಮುಳಿಯ ಸಂಸ್ಥೆಯದ್ದು:
ಚೈನ್ ಮತ್ತು ಡೈಮಂಡ್ ಪೆಸ್ಟ್‌ನ್ನು ಉದ್ಘಾಟಿಸಿ, ಡೈಮಂಡ್ ಚೈನ್‌ಗಳನ್ನು ಬಿಡುಗಡೆ ಮಾಡಿದ ತುಳು ಅಕಾಡೆಮಿ ಮಾಜಿ ಸದಸ್ಯ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಮಾತನಾಡಿ ಮುಳಿಯದವರು ಪುತ್ತೂರಿನಲ್ಲಿ ರೂ.೨೦೦ಕ್ಕೂ ಬಂಗಾರ ಕೊಟ್ಟವರು. ಚಿನ್ನಾಭರಣಗಳು ಜನರಿಗೆ ಮುಟ್ಟಬೇಕೆಂಬ ಮನಸ್ಸು ಮುಳಿಯದವರದ್ದು, ಇಂತಹ ಮನೋಭಾವ ಅವರ ಸಾಹಿತ್ಯದ ಮನೋಭಾವ ಮತ್ತು ಸಾಮಾಜಿಕ ಕಳಕಳಿಯಿಂದ ಸಾಧ್ಯವಾಗಿದೆ. ಇವೆಲ್ಲ ಇದ್ದಾಗ ವ್ಯಾಪಾರವು ಗೌಣ ಆಗುತ್ತದೆ. ಸಮಾಜವನ್ನು ಮುಟ್ಟುವ ಕಳಕಳಿ ಹೆಚ್ಚಾಗುತ್ತದೆ. ಈ ಎಲ್ಲಾ ಗುಣಗಳು ಹಿರಿಯರಾದ ಶ್ಯಾಮಣ್ಣ ಅವರ ಸಾಹಿತ್ಯ ಲೋಕದ ಚಿಂತನೆಯಿಂದ ಬಂದಿದೆ. ಅವರ ಮಾರ್ಗದರ್ಶನದಂತೆ ಪುತ್ರರಾದ ಹಿರಿಯ ಮುಳಿಯ ಮತ್ತು ಕಿರಿಯ ಮುಳಿಯದವರು ಸೇರಿಕೊಂಡು ಅದನ್ನು ಮುಂದುವರಿಸುತ್ತಿದ್ದಾರೆ. ಶಿಸ್ತುಬದ್ದವಾದ ನಗುಮೊಗದ ಸಿಬ್ಬಂದಿ ಮುಳಿಯದ ಪ್ಲಸ್ ಪಾಯಿಂಟ್. ಈ ನಡುವೆ ನಮಗೂ ಆಭರಣ ಖರೀದಿಸಲು ಮುಳಿಯಕ್ಕೆ ಹೋಗುತ್ತೇವೆ ಎಂಬುದೇ ಹೆಗ್ಗಳಿಕೆ ಎಂದರು. ಮುಳಿಯ ಜ್ಯುವೆಲ್ಸ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಕೃಷ್ಣನಾರಾಯಣ ಮುಳಿಯ ಸಂಸ್ಥೆಯಲ್ಲಿ ಗ್ರಾಹಕರಿಗೆ ಸಿಗುವ ಉತ್ತಮ ಅವಕಾಶ ಸದುಪಯೋಗ ಮಾಡುವಂತೆ ವಿನಂತಿಸಿದರು. ಹಿರಿಯರಾದ ಸುಲೋಚನಾ ಭಟ್ ಉಪಸ್ಥತಿರಿದ್ದರು. ಪ್ಲೋರ್ ಮೆನೇಜರ್ ಯತೀಶ್ ಅವರು ಮಾತನಾಡಿ ಚೈನ್ ಮತ್ತು ಡೈಮಂಡ್ ಪೆಸ್ಟ್ ಕುರಿತು ಮಾಹಿತಿ ನೀಡಿದರು. ಆನಂದ ಕುಲಾಲ್, ಯತೀಶ್, ಪ್ರಶಾಂತ್ ಕೆ ಅತಿಥಿಗಳನ್ನು ಗೌರವಿಸಿದರು. ಕು.ದಿವ್ಯಶ್ರೀ ಪ್ರಾರ್ಥಿಸಿದರು. ಸಂಸ್ಥೆಯ ಶಾಖಾ ಪ್ರಬಂದಕ ನಾಮದೇವ್ ಮಲ್ಯ ಸ್ವಾಗತಿಸಿದರು. ಪ್ಲೋರ್ ಮೆನೇಜರ್ ಪ್ರವೀಣ್ ವಂದಿಸಿದರು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.