HomePage_Banner
HomePage_Banner
HomePage_Banner
HomePage_Banner

ನರಿಮೊಗರು ಗ್ರಾಮದ ಬೂತ್ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅನಾವರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಪಕ್ಷವನ್ನು ಇನ್ನಷ್ಟು ಬಲಪಡಿಸಲು ಕಾರ್ಯಕರ್ತರು ಸನ್ನದ್ದರಾಗಬೇಕು-ಸಂಜೀವ ಮಠಂದೂರು

ಪುತ್ತೂರು: ಬಿಜೆಪಿ ನರಿಮೊಗರು ಗ್ರಾಮದ ಬೂತ್ 144 ಇದರ ಅಧ್ಯಕ್ಷರಾದ ಹರಿಣಿ ಅವರ ಮನೆಯಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ಸೆ.8ರಂದು ನಡೆಯಿತು. ಭಾರತ ಮಾತೆಗೆ ದೀಪ ಪ್ರಜ್ವಲನವನ್ನು ಶಾಸಕರು ನೆರವೇರಿಸಿದರು. ಶಾಸಕ ಸಂಜೀವ ಮಠಂದೂರು ಮಾತನಾಡಿ ಮಂಡಲದ ಎಲ್ಲಾ ಬೂತ್‌ಗಳಿಗೆ ನಾವು ಭೇಟಿ ನೀಡುತ್ತಿದ್ದು ತಳಮಟ್ಟದ ಬೂತ್ ಸಮಿತಿ ಅಧ್ಯಕ್ಷರ ಮತ್ತು ಕಾರ್ಯಕರ್ತರ ಸ್ಥಿತಿಗತಿಗಳನ್ನು ಅರಿಯುವ ಕೆಲಸವನ್ನು ಮಾಡುತ್ತಿದೆ. ಮಹಿಳೆಯರು, ಕೂಲಿಕಾರ್ಮಿಕರು, ಅಂಗವಿಕಲರು, ಗುತ್ತಿನಮನೆಯ ಯಜಮಾನರು ಹೀಗೆ ಯಾರು ಬೇಕಾದರೂ ಅಧ್ಯಕ್ಷರಾಗಬಹುದು ಎಂಬುವುದನ್ನು ಬಿಜೆಪಿ ಬೂತ್ ಸಮಿತಿ ತೋರಿಸಿಕೊಟ್ಟಿದೆ, ಹಾಗಾಗಿಯೇ ಬಿಜೆಪಿ ಇತರ ಪಕ್ಷಗಳಿಗಿಂತ ವಿಭಿನ್ನ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.

ಬಿಜೆಪಿ ಪ್ರೀತಿ ವಿಶ್ವಾಸದ ರಾಜಕಾರಣ ಮಾಡುತ್ತಿದ್ದು ಪಕ್ಷಕ್ಕೆ ರಾಜಕೀಯ ಎನ್ನುವುದು ವೃತ್ತಿಯಲ್ಲ, ವ್ರತವಾಗಿದೆ, ನಮ್ಮ ಉದ್ದೇಶ ಭಾರತ ಮಾತೆಯ ಸೇವೆಯಾಗಿದೆ, ದೇಶದ ೧೩೫ ಕೋಟಿ ಜನರ ಯೋಗಕ್ಷೇಮ ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಕೋವಿಡ್ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದ ಅವರು ಸಮಾಜದಲ್ಲಿರುವ ದೀನ ದಲಿತ, ಬಡವರ ಪರವಾಗಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದು ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಲು ಕಾರ್ಯಕರ್ತರು ಇನ್ನಷ್ಟು ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಬೂತ್ ಅಧ್ಯಕ್ಷೆ ಹರಿಣಿ ಅವರ ಮನೆಯಲ್ಲಿ ಶೀಟ್ ಹಾಕಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಿದ ನವೀನ್ ರೈ ಶಿಬರ ಮತ್ತು ಬಳಗದವರ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು-ಸಾಜ
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ನಾವು ವಿಧಾನಸಭಾ ಕ್ಷೇತ್ರ ಸಮಿತಿ ಅಧೀನದಲ್ಲಿರುವ ಪ್ರತೀ ಬೂತ್ ಅಧ್ಯಕ್ಷರ ಮನೆಗಳಿಗೆ ಭೇಟಿ ನೀಡಿ ನಾಮಫಲಕ ಅಳವಡಿಕೆ ಮಾಡುತ್ತಿದ್ದು ತಳ ಮಟ್ಟದ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಅವರು ಹೇಳಿದರು.

ಹಿರಿಯ ಕಾರ್ಯಕರ್ತರಿಗೆ ಸನ್ಮಾನ:
ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಸೀತರಾಮ ಆಚಾರ್ಯ ಹಾಗೂ ಸಂಕಪ್ಪ ನಾಯ್ಕ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಶಾಸಕರಿಗೆ ಗೌರವಾರ್ಪಣೆ:
ನರಿಮೊಗರು ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಿದ ಶಾಸಕ ಸಂಜೀವ ಮಠಂದೂರು ಅವರನ್ನು ಗ್ರಾಮ ಸಮಿತಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಶಾಸಕರು ಹೆಚ್ಚಿನ ಅನುದಾನ ನೀಡಿದ್ದಾರೆ-ನವೀನ್ ರೈ
ಬಿಜೆಪಿ ಮುಖಂಡ, ನರಿಮೊಗರು ಗ್ರಾ.ಪಂ ಸದಸ್ಯ ನವೀನ್ ಕುಮಾರ್ ರೈ ಶಿಬರ ಮಾತನಾಡಿ ಶಾಸಕ ಸಂಜೀವ ಮಠಂದೂರು ಅವರು ನರಿಮೊಗರು ಭಾಗದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನಗಳನ್ನು ನೀಡಿದ್ದಾರೆ, ಮುಂದಕ್ಕೂ ಅವರು ಇನ್ನಷ್ಟು ಅನುದಾನಗಳನ್ನು ಈ ಭಾಗಕ್ಕೆ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಅರುಣ್ ವಿಟ್ಲ, ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಛಾದ ಅಧ್ಯಕ್ಷ ಆರ್.ಸಿ ನಾರಾಯಣ್, ಪಾಣಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಮ ಪೂಜಾರಿ, ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನರಿಮೊಗರು ಗ್ರಾ.ಪಂ ಸದಸ್ಯರಾದ ಮಲ್ಲಿಕಲತಾ ರೈ, ಕೇಶವ ಪೂಜಾರಿ, ಗಣೇಶ್, ಪುಷ್ಪಾ, ಪದ್ಮಪ್ಪ, ಪುಷ್ಪಾವತಿ, ಉಮೇಶ್, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಬಿಜೆಪಿ ಜಿಲ್ಲಾ ಮಹಿಳಾಮೋರ್ಛಾದ ಪ್ರ.ಕಾರ್ಯದರ್ಶಿ ತ್ರಿವೇಣಿ ಪೆರ್‍ವೋಡಿ, ಪ್ರಮುಖರಾದ ಶರತ್‌ಚಂದ್ರ ಬೈಪಡಿತ್ತಾಯ, ಜಯಂತ್, ಉಶಾ , ಮೋಹನ್ ರೈ, ಹರೀಶ್ ಬಿಜತ್ರೆ, ಕೃಷ್ಣಪ್ಪ ಗೌಡ, ಸುರೇಶ್ ಪ್ರಭು, ಗಣೇಶ್ ರೈ, ಉಮೇಶ್ ರೈ, ಮೋಹನ್ ರೈ, ಜ್ಯೋತಿ ನಾಯಕ್, ಪ್ರವೀಣ್ ನಾಯ್ಕ್, ನಾಗೇಶ್, ಪುರುಷೋತ್ತಮ, ಶಶಿಧರ್, ಗುರುಪ್ರಸಾದ್, ವಿನೋದ್, ಅನ್ಸಾಫ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ನರಿಮೊಗರು ಗ್ರಾ.ಪಂ ಸದಸ್ಯ ನವೀನ್ ಕುಮಾರ್ ರೈ ಶಿಬರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುಧಾಕರ ಕುಲಾಲ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.