HomePage_Banner
HomePage_Banner
HomePage_Banner
HomePage_Banner

ಸೆ.10: ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ 40 ನೇ ವರ್ಷದ ಶ್ರೀ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ ಸಂಪ್ರದಾಯ ಬದ್ಧವಾದ 40  ವರ್ಷದ ಶ್ರೀ ಗಣೇಶೋತ್ಸವ ಸೆ.10  ರಂದು ನಡೆಯಲಿದೆ. ಕೋವಿಡ್ 19  ಹಿನ್ನೆಲೆಯಲ್ಲಿ ಸರಕಾರದ ಸುತ್ತೋಲೆಯಂತೆ ಸರಳ ರೀತಿಯಲ್ಲಿ ಒಂದು ದಿನದ ಶ್ರೀ ಗಣೇಶೋತ್ಸವ ನಡೆಯಲಿದೆ.ಬೆಳಿಗ್ಗೆ ಗಣಪತಿ ವಿಗ್ರಹದ ಪ್ರತಿಷ್ಠೆ ನಡೆಯಲಿದೆ. ಶ್ರೀನಿವಾಸ ರೈ ಮಕ್ಕಳು ಶ್ರೀನಿಲಯ ಕುಂಬ್ರರವರು ಗಣೇಶ ವಿಗ್ರಹದ ಸೇವಾರ್ಥಿಯಾಗಿದ್ದಾರೆ. ವಿಗ್ರಹ ಪ್ರತಿಷ್ಠೆಯ ಬಳಿಕ ಗಣಪತಿ ಹೋಮ, ಭಜನಾ ಸೇವೆ ಮಧ್ಯಾಹ್ನ ಧಾರ್ಮಿಕ ಚಿಂತನೆ ನಡೆದು ಮಹಾಪೂಜೆ ನಡೆಯಲಿದೆ ಬಳಿಕ ಭೋಜನ ವಿರಾಮ. ಸಂಜೆ ಗಂಟೆ ೪ ಕ್ಕೆ ಶ್ರೀ ಗಣೇಶ ವಿಗ್ರಹದ ವಿಸರ್ಜನೆಯ ವಿಧಿ ವಿಧಾನಗಳು ನಡೆದು ಬಳಿಕ ಸಮಿತಿಯವರಿಂದ ಯಾವುದೇ ಮೆರವಣಿಗೆ ಇಲ್ಲದೆ ಶೇಖಮಲೆ ಪುಣ್ಯನದಿಯಲ್ಲಿ ವಿಗ್ರಹದ ವಿಸರ್ಜನೆ ನಡೆಯಲಿದೆ. ಭಕ್ತಾಧಿಗಳು ಕೋವಿಡ್ 19 ನಿಯಮದಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಣೇಶನ ಕೃಪೆಗೆ ಪಾತ್ರರಾಗುವಂತೆ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ರೈ ಪರ್ಪುಂಜ, ಉಪಾಧ್ಯಕ್ಷೆ ಉಷಾ ನಾರಾಯಣ ಗೌಡ, ಜತೆ ಕಾರ್ಯದರ್ಶಿ ಚಂದ್ರಶೇಖರ ರೈ ಕುರಿಕ್ಕಾರ, ಕೋಶಾಧಿಕಾರಿ ರಾಜ್‌ಪ್ರಕಾಶ್ ರೈ ಕುಂಬ್ರ, ಗಣೇಶೋತ್ಸವ ಸಮಿತಿ ಸಂಚಾಲಕ ಪದ್ಮನಾಭ ರೈ ಅರೆಪ್ಪಾಡಿ ಹಾಗೂ ಶ್ರೀರಾಮ ಭಜನಾ ಮಂದಿರದ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.