HomePage_Banner
HomePage_Banner
HomePage_Banner
HomePage_Banner

ಸೆ.11: ಮುಂಡಾಳಗುತ್ತು ಡಾ. ತಿಮ್ಮಪ್ಪ ರೈಯವರಿಗೆ ಮುಂಡಾಳಗುತ್ತು ತರವಾಡಿನಲ್ಲಿ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಶುವೈದ್ಯರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮುಂಡಾಳಗುತ್ತು ಡಾ. ತಿಮ್ಮಪ್ಪ ರೈಯವರಿಗೆ ಮುಂಡಾಳಗುತ್ತು ತರವಾಡು ವತಿಯಿಂದ ಸನ್ಮಾನ ಕಾರ್ಯಕ್ರಮ ಸೆ. 11 ರಂದು ಅಪರಾಹ್ನ ಮುಂಡಾಳಗುತ್ತು ತರವಾಡು ಮನೆಯಲ್ಲಿ ನಡೆಯಲಿದೆ. ಮುಂಡಾಳಗುತ್ತು ಕುಟುಂಬದ ಹಿರಿಯರೂ, ಮುಂಡಾಳಗುತ್ತು ತರವಾಡು ದೈವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆದ ಡಾ. ತಿಮ್ಮಪ್ಪ ರೈಯವರ ಸಾರ್ಥಕ 90 ವರ್ಷಗಳ ಹುಟ್ಟುಹಬ್ಬ ಸಂಭ್ರಮಾಚರಣೆ ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದು, ಪ್ರಸ್ತುತ ಮುಂಡಾಳಗುತ್ತು ತರವಾಡು ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಕುಟುಂಬಿಕರ ವತಿಯಿಂದ ಸನ್ಮಾನ ಕಾರ್ಯಕ್ರಮ ಸೆ.11 ರಂದು ಅಪರಾಹ್ನ 3.00ಗಂಟೆಗೆ ಮುಂಡಾಳಗುತ್ತು ತರವಾಡು ಮನೆಯಲ್ಲಿ ಸಾಂಕೇತಿಕವಾಗಿ ನಡೆಯಲಿದೆ. ಕಳೆದ ಮೇ 15 ರಂದು ಮುಂಡಾಳಗುತ್ತು ತರವಾಡಿನಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕೋವಿಡ್ ೧೯ ಸರಕಾರದ ಮಾರ್ಗಸೂಚಿ ಅನ್ವಯ ಕಾರ್ಯಕ್ರಮ ನಡೆಸಲು ಅಸಾಧ್ಯವಾಗಿತ್ತು. ಆ ಪ್ರಯುಕ್ತ ಇದೀಗ ಸಾಂಕೇತಿಕವಾಗಿ ಡಾ. ತಿಮ್ಮಪ್ಪ ರೈಯವರಿಗೆ ಆಹ್ವಾನಿತ ಕುಟುಂಬಿಕರ ಸಮ್ಮುಖದಲ್ಲಿ ಸನ್ಮಾನ ನಡೆಸಲಿದ್ದೇವೆ ಎಂದು ತರವಾಡು ದೈವಸ್ಥಾನ ವ್ಯವಸ್ಥಾಪನಾ ಸಮಿತಿಯ ಗೌರವ ಕಾರ್ಯದರ್ಶಿ ಕಡಮಜಲು ಸುಭಾಸ್ ರೈ, ಕೋಶಾಧಿಕಾರಿ ಮುಂಡಾಳಗುತ್ತು ಸುರೇಂದ್ರ ರೈ ಬೆಂಗಳೂರು, ಜೊತೆ ಕಾರ್ಯದರ್ಶಿ ಮುಂಡಾಳಗುತ್ತು ಮೋಹನ ಆಳ್ವ, ಜೊತೆ ಕೋಶಾಧಿಕಾರಿ ಮುಂಡಾಳಗುತ್ತು ವಿನೋದ್ ರೈ ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.
ಡಾ. ತಿಮ್ಮಪ್ಪ ರೈಯವರು 7-1-1931 ರಲ್ಲಿ ಕೆದಂಬಾಡಿ ಗ್ರಾಮದ ಮುಂಡಾಳಗುತ್ತು ಪರಮೇಶ್ವರಿ ರೈ ಹಾಗೂ ಕೆಯ್ಯೂರು ಇಳಂತಾಜೆ ಸುಬ್ಬಣ್ಣ ರೈರವರ ಮಗನಾಗಿ ಜನಿಸಿದರು. 1956ರಲ್ಲಿ ಪಶು ವೈದ್ಯಕೀಯ ಕ್ಷೇತ್ರದಲ್ಲಿ ಅಸಿಸ್ಟೆಂಟ್ ಸರ್ಜನ್‌ರಾಗಿ ಆರಂಭದಲ್ಲಿ ಕುಂದಾಪುರ ಬಳಿಕ ಉಡುಪಿ, ಮಂಗಳೂರು, ಸುಳ್ಯ, ಪುತ್ತೂರುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1964 ರಲ್ಲಿ ಯುಎಸ್‌ಎಯ್ಡ್ ಯೋಜನೆಯನ್ವಯ ಅಮೆರಿಕದ ಟೆನೆಸ್ಸಿ ಯುನಿವರ್ಸಿಟಿಯಲ್ಲಿ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದರು. 1966ರಲ್ಲಿ ಬೆಂಗಳೂರಿನ ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನಲ್ಲಿ ಪಶುವೈದ್ಯ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. ಬಳಿಕ ವಿಭಾಗ ಮುಖ್ಯಸ್ಥರಾಗಿಯೂ ಅರ್ಹತೆಯ ಆಧಾರದಲ್ಲಿ ಆಯ್ಕೆಯಾದರು. ಸುದೀರ್ಘ 35 ವರ್ಷಗಳ ಸೇವೆಯ ಬಳಿಕ 30 ವರ್ಷಗಳ ಹಿಂದೆ ನಿವೃತ್ತಿಯಾದರು. ಇವರ 40ಕ್ಕೂ ಅಧಿಕ ಸಂಶೋಧನಾತ್ಮಕ ಲೇಖನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರ ವೃತ್ತಿ ಮತ್ತು ಪ್ರವೃತ್ತಿಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಹುಟ್ಟೂರಿನಲ್ಲಿಯೂ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

ಸಂಘಟಕ: ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದ ಅವರು ಕಾಲೇಜಿನ ಅಥ್ಲೆಟಿಕ್ ಚಾಂಪಿಯನ್‌ರಾಗಿದ್ದರು. ವಿಶ್ವವಿದ್ಯಾಲಯವನ್ನೂ ಪ್ರತಿನಿಧಿಸಿದ್ದರು. ಬೆಂಗಳೂರಿನಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಬೆಂಗಳೂರಿನ ಬಂಟರ ಸಂಘದಲ್ಲಿ ಅಧ್ಯಕ್ಷರಾಗಿ ಮತ್ತು ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಮುಂಡಾಳಗುತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ, ಮುಂಡಾಳಗುತ್ತು ತರವಾಡು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಕೆದಂಬಾಡಿ ಗ್ರಾಮ ದೈವ ಶಿರಾಡಿ ದೈವಸ್ಥಾನ, ಇದ್ಪಾಡಿ ಮಂಜಕೊಟ್ಯ ಇದರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಜನ್ಮಭೂಮಿಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ. ಶ್ರೀರಾಮ ಮಂದಿರ ಕೆದಂಬಾಡಿ -ಶ್ರೀಕ್ಷೇತ್ರ ಸನ್ಯಾಸಿಗುಡ್ಡೆಯ ಪೋಷಕರಾಗಿ ಸೇವೆ ಸಲ್ಲಿಸಿ ಹತ್ತು ಹಲವು ವಿಧದಲ್ಲಿ ಕುಟುಂಬದ ಹಿರಿಮೆ-ಗರಿಮೆಯನ್ನು ಹೆಚ್ಚಿಸಿದ್ದಾರೆ.

1957ರಲ್ಲಿ ಮುಂಡಾಳಗುತ್ತು ಸಂಕಪ್ಪ ರೈ ಹಾಗೂ ಅರಿಯಡ್ಕ ಮಮ್ಮಕ್ಕೆ ರೈರವರ ಪುತ್ರಿ ಜಯಂತಿ ರೈರವರನ್ನು ವಿವಾಹವಾದರು. ಪುತ್ರಿಯರಾದ ಸೌಮ್ಯ ಜಯರಾಮ ರೈ, ಮಂಜುಳಾ ಸಂತೋಷ್ ಶೆಟ್ಟಿ, ಪುತ್ರರಾದ ಉದಯಶಂಕರ್ ರೈ, ಮನೋಜ್ ಕುಮಾರ್ ರೈ, ಪುತ್ತೂರಿನಲ್ಲಿ ವೈದ್ಯರಾಗಿರುವ ಡಾ. ದೀಪಕ್ ರೈರವರು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ೧೧ ಮೊಮ್ಮಕ್ಕಳು ಮತ್ತು ೪ ಮರಿಮಕ್ಕಳನ್ನು ಹೊಂದಿ ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸ್ತವ್ಯ ಹೊಂದಿ ಸುಖೀ ಸಂಸಾರ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.