HomePage_Banner
HomePage_Banner
HomePage_Banner
HomePage_Banner

ಅರಸು ಭವನಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಾಲ್ಮರದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ʻಅರಸು ಭವನʼಕ್ಕೆ ಶಾಸಕ ಸಂಜೀವ ಮಠಂದೂರು ಅವರು ಭೇಟಿ ನೀಡಿದರು. ಅರಸು ಭವನದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಎದುರು ನೋಡುತ್ತಿದೆ. ಸಚಿವರು ಉದ್ಘಾಟನೆಗೆ ದಿನ ಗೊತ್ತು ಪಡಿಸಿದ ತಕ್ಷಣವೇ ಉದ್ಘಾಟನಾ ಪ್ರಕ್ರಿಯೆಗೆ ವೇಗ ಸಿಗಲಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಭೇಟಿ ನೀಡಿದ್ದು, ಉದ್ಘಾಟನಾ ಪೂರ್ವದಲ್ಲಿ ನಡೆಯಬೇಕಾಗಿದ್ದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ರಾಜ್‌ಗೋಪಾಲ್‌ ಹಾಗೂ ನಿರ್ಮಿತಿಯ ಹರೀಶ್‌ ಉಪಸ್ಥಿತರಿದ್ದು, ಶಾಸಕರಿಗೆ ಮಾಹಿತಿ ನೀಡಿದರು.

ಪುತ್ತೂರು ತಾಲೂಕು ಪಂಚಾಯತ್‌ನ ಆವರಣದಲ್ಲಿರುವ ಪುಟ್ಟ ಕೊಠಡಿಯಲ್ಲಿ ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸುತ್ತಿದೆ. 7 ಪೋಸ್ಟ್‌ ಮೆಟ್ರಿಕ್‌ ಹಾಸ್ಟೆಲ್‌ ಹಾಗೂ 2 ಪ್ರೀ ಮೆಟ್ರಿಕ್‌ ಹಾಸ್ಟೆಲ್‌ಗಳ ನಿರ್ವಹಣೆಯ ಜೊತೆಗೆ, ಇಲಾಖೆಯ ಇತರ ಕೆಲಸಗಳನ್ನು ಇದೇ ಪುಟ್ಟ ಕೊಠಡಿಯಲ್ಲಿದ್ದುಕೊಂಡು ನಿರ್ವಹಿಸಬೇಕಾಗಿದೆ. ಆದ್ದರಿಂದ ಹೊಸ ಕಟ್ಟಡ ʻಅರಸು ಭವನʼಕ್ಕೆ ಆದಷ್ಟು ಶೀಘ್ರವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಳಾಂತರವಾಗಬೇಕಾದ ಅನಿವಾರ್ಯತೆ ಇದೆ.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.