HomePage_Banner
HomePage_Banner
HomePage_Banner
HomePage_Banner

ಸಂಟ್ಯಾರ್ ಸೇತುವೆ ಬಳಿ ವಾಹನಗಳ ವೇಗ ತಡೆ ಅಳವಡಿಕೆ – ಅಪಘಾತ ತಡೆಯುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕರಿಂದ ಶ್ಲಾಘನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಯಾಪು ಗ್ರಾಪಂ ವ್ಯಾಪ್ತಿಯ ಸಂಟ್ಯಾರ್ ಸೇತುವೆಯ ಬಳಿ ವಾಹನಗಳ ವೇಗ ನಿಯಂತ್ರಣ ಮಾಡುವ ಉದ್ದೇಶದಿಂದ ಸ್ಪೀಡ್ ಬ್ರೇಕರ್ ಅಳವಡಿಸಲಾಗಿದೆ. ಸಂಪ್ಯ ಗ್ರಾಮಾಂತರ ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಸಂಟ್ಯಾರ್ ಸೇತುವೆಯು ಅಗಲ ಕಿರಿದಾಗಿರುವ ಕಾರಣ ಇಲ್ಲಿ ಹೆಚ್ಚು ವಾಹನ ಅಪಘಾತಗಳು ಉಂಟಾಗುತ್ತಿದೆ. ಹಲವು ವರ್ಷಗಳಿಂದ ಇಲ್ಲಿ ನಡೆದ ಅಪಘಾತದಲ್ಲಿ ಹಲವು ಮಂದಿ ಬಲಿಯಾಗಿದ್ದರು. ಸೇತುವೆಯು ತಿರುವಿನಿಂದ ಕೂಡಿದ ಜಾಗದಲ್ಲಿರುವುದು ಮತ್ತು ಸುಳ್ಯ, ಪುತ್ತೂರು, ಪಾಣಾಜೆ ಕಡೆಯಿಂದ ಬರುವ ವಾಹನಗಳು ಇದೇ ಸೇತುವೆಯ ಮೂಲಕವೇ ಸಂಚಾರ ಮಾಡಬೇಕಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ವಾಹನ ದಟ್ಟನೆಯೂ ಹೆಚ್ಚಳವಾಗಿದೆ. ಕೆಲವು ವರ್ಷಗಳ ಹಿಂದೆ ಇದೇ ಸೇತುವೆಯ ಬದಿಗೆ ವಾಹನ ಡಿಕ್ಕಿ ಹೊಡೆದು ಪುತ್ತೂರಿನ ಪುರಸಭಾ ಸದಸ್ಯರೋರ್ವರು ಸೇರಿದ್ದಂತೆ ನಾಲ್ಕು ಮಂದಿ ಮೃತಪಟ್ಟಿದ್ದರು, ಕೆಲದಿನಗಳ ಹಿಂದೆ ಲಾರಿ ಡಿಕ್ಕಿ ಹೊಡೆದು ಈಶ್ವರಮಂಗಲದ ಮೆಸ್ಕಾಂ ಪವರ್ ಮ್ಯಾನ್ ಗಂಭೀರ ಗಾಯಗೊಂಡು ಬಳಿಕ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೇತುವೆಯ ಬಳಿ ಸಂಪ್ಯ ಪೊಲೀಸರು ಸ್ಪೀಡ್ ಬ್ರೇಕರ್ ಅಳವಡಿಸಿದ್ದರಿಂದ ವಾಹನಗಳ ವೇಗಕ್ಕೆ ಬ್ರೇಕ್ ಬಿದ್ದಿದೆ.

ಹಲವು ವರ್ಷಗಳ ಬೇಡಿಕೆ:
ಸಂಟ್ಯಾರ್ ಸೇತುವೆಯ ಇಕ್ಕೆಲಗಳಲ್ಲಿ ಬ್ಯಾರಿಕೆಡ್ ಅಳವಡಿಸಬೇಕೆಂದು ಹಲವು ವರ್ಷಘಳಿಂದ ವಾಹನ ಚಾಲಕರು ಆಗ್ರಹಿಸುತ್ತಿದ್ದರು. ಆದರೆ ಹೆದ್ದಾರಿಯಾಗಿರುವ ಕಾರಣ ಬ್ಯಾರಿಕೆಡ್ ಅಳಡವಡಿಕೆಗೆ ಅವಕಾಶ ಇರಲಿಲ್ಲ. ಹಂಪ್ ನಿರ್ಮಾಣಕ್ಕೂ ಪರವಾನಿಗೆ ಇರಲಿಲ್ಲ. ಅತೀ ಹೆಚ್ಚು ಅಪಾಯದಿಂದ ಕೂಡಿರುವ ಈ ಸೇತುವೆಯ ಎರಡೂ ಬದಿಯೂ ಅತ್ಯಂತ ಅಪಾಯಕಾರಿಯಾಗಿಯೇ ಇದ್ದು ಸೇತುವೆಯ ಬಳಿಯ ತಿರುವಿನಲ್ಲಿ ವಾಹನಗಳು ಚಾಲಕನ ನಿಯಂತ್ರಣಕ್ಕೆ ಸಿಗದೆ ಅಪಘಾತ ಉಂಟಾಗುತ್ತಿತ್ತು. ಇದೀಗ ಸಂಪ್ಯ ಪೊಲೀಸರ ಸಕಾಲಿಕ ಕ್ರಮದಿಂದ ಹಲವು ಜೀವಗಳಾದರೂ ಉಳಿಯಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಸ್ಪೀಡ್ ಬ್ರೇಕರ್ ಹಾಕಿರುವ ಬಗ್ಗೆ ಕೆಲವರಿಂದ ವಿರೋಧ ವ್ಯಕ್ತವಾದರೂ ಹೆಚ್ಚಿನ ಮಂದಿ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಅಪಘಾತ ತಡೆಯುವ ಉದ್ದೇಶಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ಸ್ಪೀಡ್ ಬ್ರೇಕರ್ ಬೇರಿಕೇಡ್ ಅಳವಡಿಸಲಾಗಿದೆ ಎಂದು ಸಂಪ್ಯ ಪೊಲೀಸ್ ಠಾಣಾ ಎಸ್ಸೈ ಉದಯರವಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.