HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿಯಲ್ಲಿ “ಕಾರ್ ಮ್ಯಾಟಿಕ್” ಶುಭಾರಂಭ – ವ್ಯಾಪಾರ, ವ್ಯವಹಾರದಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವ ಮುಖ್ಯ-ನಝೀರ್ ಅಝ್‌ಹರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


೦ ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಒಳ್ಳೆಯ ರೀತಿಯಿಂದ ಸ್ವೀಕರಿಸಿ-ಉಷಾ ಮುಳಿಯ

೦ ಯುವ ಸಮೂಹ ಸುಂದರ, ಮೌಲ್ಯಯುತವಾದ ಕನಸು ಕಾಣಬೇಕು-ಡಾ. ರಾಜಾರಾಮ್

ಉಪ್ಪಿನಂಗಡಿ: ಇಲ್ಲಿನ ಕೂಟೇಲುನಲ್ಲಿ ರೋಯಲ್ ಮೆಕ್ಸಿಕೋ ಹೊಟೇಲ್ ಬಳಿ ಶುಕ್ರಿಯಾ ಸೆಂಟರ್‌ನಲ್ಲಿ ಸ್ಥಾಪನೆಗೊಂಡ ನೂತನ ಸಂಸ್ಥೆ “ಕಾರ್ ಮ್ಯಾಟಿಕ್” ಸೆ. 9 ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಖತೀಬ್ ನಝೀರ್ ಅಝ್‌ಹರಿಯವರ ದುವಾಃಶೀರ್ವಚನದೊಂದಿಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಕರು ಒಳ್ಳೆಯ ಕನಸಿನೊಂದಿಗೆ ಆಧುನಿಕ ವ್ಯವಸ್ಥೆಯೊಂದಿಗೆ ನೂತನ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ವ್ಯವಹಾರದಲ್ಲಿ ಮುನ್ನಡೆಯಲು ಪ್ರಾಮಾಣಿಕತೆ, ಸೇವಾ ಮನೋಭಾವ ಮುಖ್ಯ ಎಂದು ಹೇಳಿದರು.

ಪ್ರತಿಯೋರ್ವ ವ್ಯಕ್ತಿ ತನ್ನ ಕುಟುಂಬ ಜೀವನ ನಿರ್ವಹಣೆಯ ಉದ್ದೇಶ ಇಟ್ಟುಕೊಂಡು ಯಾವುದಾದರೊಂದು ವ್ಯಾಪಾರ, ವ್ಯವಹಾರ, ಉದ್ಯಮದ ಹಾದಿ ಹಿಡಿಯುತ್ತಾರೆ. ಹೀಗಿರುವಾಗ ಅದನ್ನು ಕೆಡಿಸುವಂತಹ ಕೃತ್ಯ ಖಂಡನೀಯವಾಗುತ್ತದೆ, ಖುರಾನ್‌ನಲ್ಲಿ ಅದನ್ನು ಸ್ಪಷ್ಟವಾಗಿ ತಿಳಿಸಿದ್ದು, ಪರಸ್ಪರ ಸೌಹಾರ್ದತೆ, ಭಾವೈಕ್ಯತೆ ನೆಲೆಗೊಳ್ಳುವ ನಿಟ್ಟಿನಲ್ಲಿ ನಾವುಗಳು ಕೈಜೋಡಿಸಬೇಕಾಗಿದೆ ಎಂದ ಅವರು ನೂತನ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಮಾತನಾಡಿ ಎಲ್ಲರಿಗೂ ಸರ್ಕಾರಿ ಕೆಲಸ ದೊರಕುವುದು ಕಷ್ಠ, ಈ ನಿಟ್ಟಿನಲ್ಲಿ ಯುವ ಸಮೂಹ ಬದುಕು ಕಟ್ಟಿಕೊಳ್ಳುವ ಸಲುವಾಗಿ ಉದ್ಯಮ ಪ್ರಾರಂಭಿಸುತ್ತಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಎದುರಾಗುವ ಸವಾಲುಗಳನ್ನು ಒಳ್ಳೆಯ ರೀತಿಯಿಂದ ಸ್ವೀಕರಿಸಿ, ಈ ಸಂಸ್ಥೆ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ ಯುವ ಸಮೂಹ ನಮ್ಮ ನಾಳಿನ ಬದುಕಿಗಾಗಿ ಸುಂದರ ಕನಸು ಕಾಣುವಂತದ್ದು, ಅದರಲ್ಲೂ ಮೌಲ್ಯಯುತವಾದ ಕನಸು ಕಾಣಬೇಕು, ಈ ಸಂಸ್ಥೆ ಪ್ರಾರಂಭಿಸಿರುವ ಯುವಕರು ಒಳ್ಳೆಯ ಉದ್ದೇಶದೊಂದಿಗೆ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ಭಾಗದ ವಾಹನ ಮಾಲಕರು ವಾಹನಗಳ ಸೌಂದರ್‍ಯ ಹೆಚ್ಚಿಸುವ ಸಲುವಾಗಿ ಮಂಗಳೂರುನಲ್ಲಿ ಶೋರೂಂ ಅವಲಂಭಿಸಬೇಕಾಗಿತ್ತು. ಈದೀಗ ಈ ಕೊರತೆಯನ್ನು ಈ ಸಂಸ್ಥೆಯ ಮೂಲಕ ನೀಗಿಸಲಾಗಿದ್ದು, ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಉಪಾಧ್ಯಕ್ಷ ನವೀನ್ ಬ್ರಾಗ್ಸ್, ಜಮಾಅತ್ ಇಸ್ಲಾಂ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್, ಎಸ್.ಡಿ.ಪಿ.ಐ. ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಸಿದ್ದಿಕ್ ಕೆ.ಎ., ಉಪ್ಪಿನಂಗಡಿ ದಾರುತೌಹೀದ್ ಮಸೀದಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಮಠ, ನೆಕ್ಕಿಲಾಡಿ ಯು.ಎಫ್.ಜೆ.ಎಂ. ಅಧ್ಯಕ್ಷ ಮಹಮ್ಮದ್ ಹಾಜಿ ಕೆ., ವರ್ತಕ ಸಂಘದ ಮಾಜಿ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ಮಹಮ್ಮದ್ ತೌಸೀಫ್, ಪಿ.ಎಫ್.ಐ. ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಶೀದ್ ಮಠ, ಉಪ್ಪಿನಂಗಡಿ ಹೊಟೇಲ್ ಸನ್ಮಾನ್ ಮಾಲಕ ಯು.ಪಿ. ಆದಂ, ವರ್ತಕ ಸಂಘದ ಉಪಾಧ್ಯಕ್ಷ ಶಬೀರ್ ಕೆಂಪಿ, ಶುಕ್ರಿಯಾ ಟ್ರೇಡರ್‍ಸ್ ಸಂಸ್ಥೆಯ ಹಾಜಿ ಶುಕೂರ್ ಯು.ಎ., ಉಪ್ಪಿನಂಗಡಿಯ ಅಡಿಕೆ ವರ್ತಕ ಅಬ್ದುಲ್ ರಹಿಮಾನ್ ಹಾಜಿ, ಶುಕ್ರಿಯಾ ಸೆಂಟರ್ ಮಾಲಕ ಅಬ್ದುಲ್ ರಶೀದ್ ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ಮಹಮ್ಮದ್ ನಿಝಾಮುದ್ದೀನ್ ಸ್ವಾಗತಿಸಿ, ಮಹಮ್ಮದ್ ಸವಾದ್ ವಂದಿಸಿದರು. ಮಕ್ದೂಂ ರಾಝಿ, ಸಲ್ಮಾನ್ ಪಾರಿಸ್, ನವಾಝ್ ಪಿ.ಬಿ., ಇರ್ಫಾನ್, ನಿಸಾರ್ ಮೆಕ್ಸಿಕೋ, ನೌಫಲ್ ಎನ್.ಎನ್. ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಝಕರಿಯಾ ಕೊಡಿಪ್ಪಾಡಿ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.