HomePage_Banner
HomePage_Banner
HomePage_Banner
HomePage_Banner

ಸಾಲ್ಮರ ಯತೀಂಖಾನದಲ್ಲಿ ಉಚಿತ ಕೋವಿಡ್ ಲಸಿಕ ವಿತರಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಪುತ್ತೂರು ಪುರಸಭೆ, ಆರೋಗ್ಯ ಇಲಾಖೆ ಪುತ್ತೂರು, ಸೈಯದ್ ಮಲೆ ಜುಮ್ಮ ಮಸ್ಜಿದ್, ಅನ್ಸಾರುದ್ದೀನ್ ಯತೀಂಖಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ,ಪುತ್ತೂರು ನಗರಸಭೆಯ 9 ನೇ ವಾರ್ಡಿನ ಸುಮಾರು 300 ಜನರಿಗೆ ಕೋವಿಡ್ ಲಸಿಕೆ ಅಭಿಯಾನ ನಡೆಯಿತು. ಲಸಿಕ ವಿತರಣ ಶಿಬಿರವನ್ನು ಸೈಯದ್ ಮಲೆ ಜುಮ್ಮ ಮಸ್ಜಿದ್ ಅಧ್ಯಕ್ಷ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಉದ್ಘಾಟಿಸಿದರು. ಸ್ಥಳೀಯ ನಗರ ಸಭಾ ಸದಸ್ಯ ರಾಬಿನ್ ತಾವ್ರೊ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಎಲ್ ಟಿ ಅಬ್ದುಲ್ ರಜಾಕ್ ಹಾಜಿ, ಉದ್ಯಮಿ ರಹಮಾನ್ ಹಾಜಿ ಸಾಲ್ಮರ, ಅನ್ಸಾರುದ್ದೀನ್ ಯತೀಂಖಾನಧ ವ್ಯವಸ್ಥಾಪಕ ಇಸ್ಮಾಯಿಲ್ ನೆಲ್ಯಾಡಿ, ಸೈಯದ್‌ಮಲೆ ಜುಮ್ಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ ಉಪಸ್ಥಿತರಿದ್ದರು. ಪುತ್ತೂರು ನಗರಸಭೆ ಆರೋಗ್ಯ ಇಲಾಖೆಯ ಮೇಲ್ವಿಚಾರಕ ನಾಗೇಶ ರವರ ನೇತೃತ್ವದಲ್ಲಿ, ಪುತ್ತೂರು ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರಾದ ತ್ರಿವೇಣಿ, ಮೀನಾಕ್ಷಿ, ಸವಿತಾ ರವರು ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.