HomePage_Banner
HomePage_Banner
HomePage_Banner
HomePage_Banner

ಕಾವು: ಅಮ್ಚಿನಡ್ಕ ಬಿಜೆಪಿ ಬೂತ್ ಅಧ್ಯಕ್ಷ ನಾರಾಯಣ ಆಚಾರ್ಯ ಮಳಿರವರ ನಾಮಫಲಕ ಅನಾವರಣ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಕಾವು: ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಗಳ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳ ಮನೆಗಳಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ಅಂಗವಾಗಿ ಮಾಡ್ನೂರು ಗ್ರಾಮದ ಅಮ್ಚಿನಡ್ಕ ಬೂತ್ ಅಧ್ಯಕ್ಷ ನಾರಾಯಣ ಆಚಾರ್ಯ ಮಳಿರವರ ಮನೆಯಲ್ಲಿ ಭಾರತ ಮಾತೆಗೆ ದೀಪ ಪ್ರಜ್ವಲಿಸಿ ಪುಷ್ಪರ್ಚನೆ ಮಾಡಿ ನಾಮಫಲಕ ವನ್ನು ಶಾಸಕ ಸಂಜೀವ ಮಠ0ದುರು ಅನಾವರಣ ಮಾಡಿದರು. ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಶಾಸಕರು ಬಿಜೆಪಿ ಕಾರ್ಯಕರ್ತರನ್ನು ಆಧಾರಿತವಾದ ಪಕ್ಷ ವಾಗಿದ್ದು,ಈ ದೇಶವನ್ನು ರಾಷ್ಟ್ರೋತ್ಥಾನದತ್ತ ಕೊಂಡೊಯ್ಯಬೇಕಿದ್ದು,ಕಾರ್ಯಕರ್ತರು ರಾಷ್ಟ್ರಾಭಿಮಾನದ ಸಂಕೇತವಾಗಿ ಮೂಡಿ ಬರಬೇಕು,ಈ ಹಿನ್ನಲೆಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಅಧ್ಯಕ್ಷ ಹಾಗೂ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಬಿಜೆಪಿ ವತಿಯಿಂದ ನಡೆಯುತ್ತಿದೆ,ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ಹಾಗೂ ಪಕ್ಷದ ವಿಚಾರಧಾರೆ ಯನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸ ಪ್ರತಿ ಬೂತ್ ಮಟ್ಟದಲ್ಲಿ ಆಗಬೇಕು ಎಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅದ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ,ನಿತೀಶ್ ಕುಮಾರ್ ಶಾಂತಿವನ, ಕಾರ್ಯದರ್ಶಿಗಳಾದ ಯತಿಂದ್ರ ಕೊಚ್ಚಿ,ಲೋಹಿತ್ ಆಮ್ಚಿನಡ್ಕ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್ ಸಿ ನಾರಾಯಣ, ಕಾವು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ,ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರ ಆದ್ಯಕ್ಷ ವಿಜಯ ಕುಮಾರ್ ರೈ ಕೋರಂಗ,ಕಾರ್ಯದರ್ಶಿ ತೀರ್ಥನಂದ ದುಗ್ಗಳ, ಮಾಡ್ನೂರು ಶಕ್ತಿ ಕೇಂದ್ರ ಸಂಚಾಲಕ ಲೋಕೇಶ್ ಚಾಕೋಟೆ,ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಸುಬ್ರಹ್ಮಣ್ಯ ಸದಸ್ಯ ಅನಿತಾ ಜಗದೀಶ್ ಆಚಾರಿಮೂಲೆ, ಕಾವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ,ಗ್ರಾಮಾಂತರ ಮಂಡಲ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ಸದಸ್ಯ ಅಜಿತ್ ಮಿನೊಜಿಕಲ್ ಬಿಜೆಪಿ ಪ್ರಮುಖರಾದ ಶಿವ ಪ್ರಸಾದ್ ಕೊಚ್ಚಿ,ಪೂವಪ್ಪ ನಾಯ್ಕ, ರಾಮಚಂದ್ರ ಭಟ್ ಮಳಿ,ಯೋಗೀಶ್ ಕಾವು, ಗೋವಿಂದ ಭಟ್ ಟಪ್ಪಲುಕಟ್ಟೆ,ರವಿ ಆಮ್ಚಿನಡ್ಕ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು, ಆಮ್ಚಿನಡ್ಕಬೂತ್ ಅಧ್ಯಕ್ಷ ನಾರಾಯಣ ಆಚಾರ್ಯ ಸ್ವಾಗತಿಸಿ ಶರತ್ ಕುಮಾರ್ ರೈ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.