HomePage_Banner
HomePage_Banner
HomePage_Banner
HomePage_Banner

ಗಣೇಶ ಚತುರ್ಥಿ, ಮಹಾತ್ಮ ಗಾಂಧೀಜಿ ಜನ್ಮದಿನ ಮಾಂಸ ರಹಿತ ದಿನಗಳನ್ನಾಗಿ ಆಚರಿಸಲು ವಿಹಿಂಪ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿಂದೂಗಳ ರಾಷ್ಟ್ರೀಯ ಆಚರಣೆ ಗಣೇಶ ಚತುರ್ಥಿ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ಗಾಂಧಿ ಜಯಂತಿಯ ದಿನಗಳನ್ನು ಮಾಂಸ ರಹಿತ ದಿನಗಳನ್ನಾಗಿ ಆಚರಿಸುವಂತೆ ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಮಿತಿ ಪುತ್ತೂರು ಸಹಾಯಕ ಕಮೀಷನರ್‌ಗೆ ಮನವಿ ಮಾಡಿದೆ.

 

ಕರ್ನಾಟಕ ಸರಕಾರದ 11  ದಿನಗಳನ್ನು ಮಾಂಸಹಾರ ರಹಿತ ದಿನಗಳಾಗಿ ಆಚರಿಸುವಂತೆ ಆದೇಶ ನೀಡಿದ್ದು, ಆ ಆದೇಶದಂತೆ ಸೆ.10 ಗಣೇಶ ಚತುರ್ಥಿಯಂದು ಮತ್ತು ಅ. 2 ಗಾಂಧಿ ಜಯಂತಿಯಂದು ತಮ್ಮ ವ್ಯಾಪ್ತಿಯಲ್ಲಿ ಮಾಂಸಹಾರ ರಹಿತ ದಿನಗಳನ್ನಾಗಿ ಆಚರಿಸುವಂತೆ ಕ್ರಮಕೈಗೊಳ್ಳಲು ಮನವಿಯಲ್ಲಿ ವಿನಂತಿಸಲಾಗಿದೆ. ಆ ದಿನಗಳನ್ನು ಕಸಾಯಿಖಾನೆಗಳನ್ನು ಮತ್ತು ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಿಸಲು ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ವಿಶ್ವಹಿಂದೂ ಪರಿಷತ್ ಆಗ್ರಹಿಸಿದೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ನ್ಯಾಯವಾದಿ ಪ್ರಮುಖ್ ಮಾಧವ ಪೂಜಾರಿ, ವಿಶ್ವ ಹಿಂದೂ ಪರಿಷತ್ ಪ್ರಖಂಡ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು, ಬಜರಂಗದಳ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ, ಗೋರಕ್ಷಾ ಪ್ರಮುಖ್ ಕಿರಣ್ ಕುಮಾರ್ ರಾಮಕುಂಜ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಉಪಾಧ್ಯಕ್ಷ ಸೇಸಪ್ಪ ಬೆಳ್ಳಿಪ್ಪಾಡಿ, ಬಜರಂಗದಳ ನಗರ ಸಂಚಾಲಕ ಚೇತನ್ ಬೊಳುವಾರು, ಸಂಜಯ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.