HomePage_Banner
HomePage_Banner
HomePage_Banner
HomePage_Banner

ಕುಂಬ್ರ ಬಿಜೆಪಿ ಬೂತ್ ಅಧ್ಯಕ್ಷ ಎಸ್.ಮಾಧವ ರೈ ಮನೆಯಲ್ಲಿ ನಾಮಫಲಕ ಅಳವಡಿಕೆ, ಕಾರ್ಯಕರ್ತರ ಭೇಟಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತೀಯ ಜನತಾಪಾರ್ಟಿ ಪುತ್ತೂರು ಮಂಡಲ, ಒಳಮೊಗ್ರು ಗ್ರಾಮ ಶಕ್ತಿಕೇಂದ್ರದ 160  ನೇ ಬೂತ್ ನ ಅಧ್ಯಕ್ಷರಾದ ಎಸ್ ಮಾಧವ ರೈ ಕುಂಬ್ರರವರ ಮನೆಯಲ್ಲಿ ಸೆ. 7 ರಂದು ಬೂತ್ ಅಧ್ಯಕ್ಷರ ನಾಮಫಲಕ ಅಳವಡಿಸುವ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಭೇಟಿ ಕಾರ್ಯಕ್ರಮ ನಡೆಯಿತು. ಶಾಸಕ ಸಂಜೀವ ಮಠ೦ದೂರುರವರು ಭಾರತ ಮಾತೆಯ ಭಾವಚಿತ್ರದ ಎದುರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಪಕ್ಷದ ಮುಖಂಡರ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಫಲಕ ಅಳವಡಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಬಿಜೆಪಿ ಮೋರ್ಚಾದ ಅಧ್ಯಕ್ಷ ಆರ್ ಸಿ ನಾರಾಯಣ , ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ,ಪಾಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಮಂಡಲದ ಉಪಾಧ್ಯಕ್ಷರಾದ ಜಯರಾಮ ಪೂಜಾರಿ , ಗ್ರಾಮಾಂತರ ಮಂಡಲದ ಉಪಾಧ್ಯಕ್ಷೆ ಮೀನಾಕ್ಷಿ ಮಂಜುನಾಥ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಎಸ್.ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಬಿಜಾತ್ರೆ , ಒಳಮೊಗ್ರು ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರೈ ಕೇರಿ , ಪ್ರಕೋಷ್ಟ ಹಿರಿಯ ಸದಸ್ಯ ರಾಮಯ್ಯ ಗೌಡ ಬೊಳ್ಳಾಡಿ, ಬೂತ್ ಕಾರ್ಯದರ್ಶಿ ಸಂಜೀವ ಬೊಳ್ಳಾಡಿ , ಬಾಬು ಪೂಜಾರಿ ಬಡಕೋಡಿ, ಕರುಣಾ ರೈ ಬಿಜಲ, ಅರುಣ ರೈ ಬಿಜಲ, ಮೋನಪ್ಪ ಪೂಜಾರಿ ಬಡಕೋಡಿ, ಜಯಲತಾ ಬಡಕೋಡಿ, ರೋಹಿಣಿ ಬಡಕೋಡಿ, ಲಲಿತ ಕೊಡೆಂಚಾರ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.