HomePage_Banner
HomePage_Banner
HomePage_Banner
HomePage_Banner

ಘನತ್ಯಾಜ್ಯ ವಿಲೇವಾರಿ ಘಟಕದ ಕುರಿತು ಸ್ಪಷ್ಟನೆ ಕೇಳಿದ ಆರೋಗ್ಯ ಇಲಾಖೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆರೋಗ್ಯ ಇಲಾಖೆ ವಿರುದ್ಧ ಬೆಟ್ಟಂಪಾಡಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಕ್ರೋಶ

ಪುತ್ತೂರು:ಗ್ರಾಮದ ಜನರ ಆರೋಗ್ಯದ ದೃಷ್ಠಿಯಿಂದ ಪಂಚಾಯತ್ ನಿಂದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದ್ದರೂ ಆರೋಗ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿಗಳು ಸ್ಪಷ್ಟನೆ ಕೇಳಿದ್ದಾರೆ. ಆರೋಗ್ಯ ಇಲಾಖೆಯ ಈ ರೀತಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿ ಆರೋಗ್ಯ ಇಲಾಖೆಯ ವಿರುದ್ಧ ಬೆಟ್ಟಂಪಾಡಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಭೆಯು ಸೆ.9 ರಂದು ಅಧ್ಯಕ್ಷೆ ಪವಿತ್ರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಿಡಿಓ ಸೌಮ್ಯರವರು ಆರೋಗ್ಯ ಇಲಾಖೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕದ ಕುರಿತು ಸ್ಪಷ್ಟೀಕರಣ ಕೇಳಿರುವ ಕುರಿತು ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮದ ಜನರ ಆರೋಗ್ಯ ದೃಷ್ಠಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಹಾಗಿದ್ದರೂ ಆರೋಗ್ಯ ಇಲಾಖೆಯೇ ಇದರ ಬಗ್ಗೆ ಪ್ರಶ್ನಿಸಿದರು ಹೇಗೆ? ಅಲ್ಲಿ ತಿಪ್ಪೆ ಗುಂಡಿ ಇದೆ ಎಂಬ ಕಾರಣಕ್ಕೆ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಸ್ಪಷ್ಟೀಕರಣ ಕೇಳಿರುವುದಾಗಿ ಪಿಡಿಓ ತಿಳಿಸಿದರು. ಪಂಚಾಯತ್ ವ್ಯಾಪ್ತಿಯ ಪುದ್ದೋಟ್ಟು ಎಂಬಲ್ಲಿ ನಿರ್ಮಾಣಗೊಂಡಿರುವ ಘಟಕ ನಿರ್ಮಿಸಲಾಗುತ್ತಿದೆ. ಅಲ್ಲಿ ತ್ಯಾಜ್ಯ ಡಂಪ್ ಮಾಡುತ್ತಿಲ್ಲ. ಒಣ ತ್ಯಾಜ್ಯಗಳನ್ನು ಮಾತ್ರ ಸಂಗ್ರಹಿಸಿ ಬಳಿಕ ಅದನ್ನು ಜಿ.ಪಂನವರು ಸಂಗ್ರಹಿಸಲಿದ್ದಾರೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುತ್ತಿಲ್ಲ. ಅಲ್ಲಿ ತಿಪ್ಪೆ ಗುಂಡಿಯೇ ಇಲ್ಲ. ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಸ್ಪಷ್ಟೀಕರಣ ಕೇಳಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು ತಾ.ಪಂ ಕಾರ್ಯನಿರ್ವಹಣಾದಿಕಾರಿಗಳ, ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ ಜಂಟಿಯಾಗಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.

ಪ.ಜಾತಿ, ಪಂಗಡ ನಿಧಿ ಆವಶ್ಯಕತೆಗಳಿಗೆ ಮಾತ್ರ:
ಪರಿಶಿಷ್ಟ ಜಾತಿ, ಪಂಗಡದ ಶೇ.25 ರ ನಿಧಿಯಲ್ಲಿ ಈ ತನಕ ಮದುವೆ ಕಾರ್ಯಕ್ರಮಗಳಿಗೆ ಅನುದಾನ ನೀಡಲಾಗುತ್ತಿತ್ತು. ಆದರೆ ಮದುವೆ ಕಾರ್ಯಕ್ರಮ ಆಡಂಬರದಿಂದ ಆಚರಿಸುತ್ತಿದ್ದಾರೆ. ದುಂಬು ವೆಚ್ಚ ನಡೆಯುತ್ತಿದ್ದು ಅವುಗಳನ್ನು ಸ್ಥಗಿತಗೊಳಿಸಬೇಕು. ಪ.ಜಾತಿ, ಪಂಗಡದವರಲ್ಲಿಯೂ ಆರ್ಥಿಕವಾಗಿ ಅನುಕೂಲವಸ್ಥರೂ ಇದ್ದಾರೆ. ಹೀಗಾಗಿ ಮದುವೆಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸಿ ಪರಿಶಿಷ್ಟ ಜಾತಿ,ಪಂಗಡದವರಿಗೆ ಮನೆ ದುರಸ್ತಿ, ಶೌಚಾಲಯ, ವೈದ್ಯಕೀಯ ಮೊದಲಾದ ಆವಶ್ಯಕತೆಗಳಿಗೆ ನೀಡಬೇಕು ಎಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದು ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.

ತಾ.ಪಂ ಕಬಕ ಕ್ಷೇತ್ರ ಇರ್ದೆ ಗ್ರಾಮ ಸೇರ್ಪಡೆ ಆಕ್ಷೇಪ;
ತಾ.ಪಂ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಇರ್ದೆ ಗ್ರಾಮವನ್ನು ಕಬಕ ಕ್ಷೇತ್ರಕ್ಕೆ ಸೇರ್ಪಡೆ ಗೊಳಿಸಲಾಗಿದೆ. ಇರ್ದೆ ಹಾಗೂ ಬೆಟ್ಟಂಪಾಡಿ ಗ್ರಾಮಕ್ಕೆ ಒಂದೇ ಪಂಚಾಯತ್ ಇದ್ದು ಅಭಿವೃದ್ಧಿ ದೃಷ್ಟಿಯಿಂದ ಈ ಹಿಂದಿನಂತೆ ಎರಡೂ ಗ್ರಾಮಗಳನ್ನು ತಾ.ಪಂನ ಒಂದೇ ಕ್ಷೇತ್ರಕ್ಕೆ ಹೊಂದಿಕೊಂಡಿರಬೇಕು. ಎರಡು ಪ್ರತ್ಯೇಕಗೊಳಿಸಬಾರದು ಎಂದು ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದ್ದು ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.

ಕೊರೋನಾದಿಂದ ಮೃತಪಟ್ಟರೂ ವರದಿ ನೀಡಲು ವೈದ್ಯರ ನಿರಾಕರಣೆ;
ಗುಂಡ್ಯಡ್ಕ ನಿವಾಸಿ ಮಹಿಳೆಯೋರ್ವರು ಕೊರೋನಾದಿಂದ ಮೃತಪಟ್ಟಿದ್ದರೂ ಸರಕಾರಿ ಆಸ್ಪತ್ರೆಯಲ್ಲಿ ವರದಿ ನೀಡಲು ನಿರಾಕರಿಸಿದ್ದಾರೆ. ಕೊರೋನಾದಿಂದ ಮೃತಪಟ್ಟರೆ ಸರಕಾರದಿಂದ ರೂ.1ಲಕ್ಷ ಪರಿಹಾರ ನೀಡುತ್ತಿದ್ದು ವೈದ್ಯರ ನಿರಾಕರಣೆಯಿಂದ ಬಡ ಕುಟುಂಬ ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಸದಸ್ಯ ಮೊದು ಕುಂಞಿ ಆರೋಪಿಸಿದರು.

ಸದಸ್ಯರೊಳಗೆ ವಾಗ್ವಾದ

9\11ಗೆ ಅರ್ಜಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಸದಸ್ಯರೊಳಗೆ ತೀವ್ರ ವಾಗ್ವಾಧವೇ ನಡೆಯಿತು. ಉಪ್ಪಳಿಗೆಯಲ್ಲಿ 9\11ಗೆ ಸಂಬಂಧಿಸಿದ ಅರ್ಜಿಯನ್ನು ಪಿಡಿಓರವರು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಪ್ರಕಾಶ್ ರೈಯವರು ಅದಕ್ಕೆ ಆಕ್ಷೇಪಣೆ ಇರುವುದಾಗಿ ತಿಳಿಸಿದರು. ಆಕ್ಷೇಪಣೆ ಇದೆ ಎಂದು ಹೇಳಿದರೆ ಸಾಲದು. ಇಲ್ಲಿ ಆಕ್ಷೇಪಣೆ ಬೇಕಲ್ಲ ಎಂದು ತಿಳಿಸಿದ ಸದಸ್ಯ ಮೊದು ಕುಂಞಿ ಆಕ್ಷೇಪನೆ ಇದೆ ಎಂದು ಹೇಳಲು ನೀವು ಯಾರು ಎಂದು ಪ್ರಕಾಶ್ ರೈಯವರನ್ನು ಪ್ರಶ್ನಿದರು. ಇದಕ್ಕೆ ಆಕ್ರೋಶಗೊಂಡ ಪ್ರಕಾಶ್ ರೈಯವರು, ನಾನು ನನ್ನ ವಾರ್ಡ್‌ಗೆ ಸಂಬಂಧಿಸಿ ಮಾತನಾಡಿದ್ದೇವೆ. ನಿಮ್ಮ ವಾರ್ಡನದಲ್ಲ. ನನ್ನ ವಾರ್ಡ್‌ನ ಬಗ್ಗೆ ಮಾತನಾಡುವ ಹಕ್ಕು ನನಗಿದೆ ಎಂದು ತಿಳಿಸಿದರು. ಇದೇ ವಿಚಾರದಲ್ಲಿ ಸದಸ್ಯರೊಳಗೆ ತೀವ್ರ ವಾಗ್ವಾದವೇ ನಡೆಯಿತು. ಅರ್ಜಿಯ ಜೊತೆಗೆ ದಾಖಲೆಗಳನ್ನು ನೀಡದಿರುವ ಬಗ್ಗೆ ಪ್ರಶ್ನಿಸಿದ್ದೇನೆ ಎಂದು ತಿಳಿಸಿದರು. ಪಿಡಿಓ ಸೌಮ್ಯರವು ಮಾತನಾಡಿ, 11\9ಗೆ ನಕ್ಷೆಯ ಜೊತೆಗೆ ರಸ್ತೆಯನ್ನು ಕಡ್ಡಾಯವಾಗಿ ಗುರುತಿಸಬೇಕು. ಆದರೆ ಅರ್ಜಿಯಲ್ಲಿ ಯಾವುದೇ ನಕ್ಷೆ ಹಾಗೂ ರಸ್ತೆಯನ್ನು ಗುರುತಿಸಿಲ್ಲ. ಅರ್ಜಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿದಲ್ಲಿ 9\11 ನೀಡಬಹುದು ಎಂದು ತಿಳಿಸಿ ಚರ್ಚೆ ತೆರೆ ಎಳೆದರು.

ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು, ಸದಸ್ಯರಾದ ಬೇಬಿ ಜಯರಾಮ ಪೂಜಾರಿ, ವಿದ್ಯಾಶ್ರೀ, ಗಂಗಾಧರ ಗೌಡ, ಮಹೇಶ್, ಮಹಾಲಿಂಗ, ಸುಮಲತಾ, ರಮ್ಯ, ಲಲಿತಾ, ಉಮಾವತಿ ಸುಬ್ಬಪ್ಪ ಮಣಿಯಾಣಿ, ಚಂದ್ರಶೇಖರ ರೈ ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಸೌಮ್ಯ ಸ್ವಾಗತಿಸಿ, ಕಾರ್ಯದರ್ಶಿ ಬಾಬು ನಾಯ್ಕ ವಂದಿಸಿದರು. ಸಿಬಂದಿಗಳು ಸಹಕರಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗೆ ಮನವಿ:
ಪುತ್ತೂರು-ಪಾಣಾಜೆ ರಸ್ತೆಯ ದೇವಸ್ಯದಿಂದ ಚೆಲ್ಯಡ್ಕ ತನಕ ರಸ್ತೆಯು ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗಿದೆ. ಈ ರಸ್ತೆಯಲ್ಲಿ ಖಾಸಗಿ ಬಸ್‌ಗಳ ಸಂಚಾರವು ವಿರಳವಾಗಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ರಸ್ತೆಯಾಗಿ ಕೆಎಸ್‌ಆರ್‌ಟಿಸಿ ಬಸ್ ಓಡಾಟ ನಡೆಸಬೇಕು ಎಂದು ಸದಸ್ಯ ಪ್ರಕಾಶ್ ರೈಯವರು ಒತ್ತಾಯಿಸಿದರು. ಈ ಕುರಿತು ಶಾಸಕರು ಹಾಗೂ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡುವುದಾಗಿ ನಿರ್ಣಯ ಕೈಗೊಳ್ಳಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.