ಹಳೆನೇರಂಕಿ ಮಹಿಳೆ ನಾಪತ್ತೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಕಡಬ: ಹಳೆನೇರಂಕಿ ಗ್ರಾಮದ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆನೇರಂಕಿ ಗ್ರಾಮದ ಮಡೆಂಜಿಮಾರು ನಿವಾಸಿ ಹೊನ್ನಮ್ಮ(58ವ.) ಎಂಬವರು ನಾಪತ್ತೆಯಾಗಿರುವವರು. ಈ ಬಗ್ಗೆ ಹೊನ್ನಮ್ಮ ಅವರ ಮಗ ವಿಶ್ವನಾಥ ಎಂಬವರು ದೂರು ನೀಡಿ, ನಾನು ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದು ನನ್ನ ತಾಯಿಯವರಿಗೆ ಸ್ವಲ್ಪ ಮಾನಸಿಕ ಅಸ್ವಸ್ಥತೆ ಇದ್ದು ಮನೆಯಲ್ಲಿಯೇ ಇರುತ್ತಿದ್ದರು. ಒಮ್ಮೊಮ್ಮೆ ಮಾನಸಿಕ ಅಸ್ವಸ್ಥತೆಯಿಂದ ಮನೆ ಬಿಟ್ಟು ಹೋಗುತ್ತಿದ್ದು ಈ ಹಿಂದೆ ಕೂಡ ಒಮ್ಮೆ ಮನೆಯಿಂದ ಹೇಳದೆ ಹೋದವರನ್ನು ನಾನು ಪತ್ತೆ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದೆ. ಸೆ.5ರಂದು ನಾನು ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ತಂದೆ-ತಾಯಿ ಮಾತ್ರ ಇದ್ದರು ಈ ವೇಳೆ ಮನೆಯಿಂದ ಗುಡ್ಡದ ಕಡೆಗೆ ಹೋದವರು ಮತ್ತೆ ಮನೆಗೆ ಬರಲಿಲ್ಲ, ಈ ಬಗ್ಗೆ ಹುಡುಗಾಡಿದರೂ ಅವರು ಪತ್ತೆಯಾಗಲಿಲ್ಲ ಎಂದು ಅವರು ಕಡಬ ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.