HomePage_Banner
HomePage_Banner
HomePage_Banner
HomePage_Banner

ಲಯನ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಹಸಿರೇ ಉಸಿರು ಕಾರ್ಯಕ್ರಮ ಮತ್ತು ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಕೆಯ್ಯೂರು:  ಕೆಪಿಎಸ್ ಕೆಯ್ಯೂರಿನಲ್ಲಿ ಲಯನ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಹಸಿರೇ ಉಸಿರು ಯೋಜನೆಯ ಅಂಗವಾಗಿ ಕೆಪಿಎಸ್ ಕೆಯ್ಯೂರಿನಲ್ಲಿ 500 ಸಸಿಗಳನ್ನು ನೆಡುವ ಕಾರ್ಯಕ್ರಮ ಮತ್ತು ಶಿಕ್ಷಕರ ದಿನಚಾರಣೆಯ ಪ್ರಯುಕ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸೆ9ರಂದು ಕೆಪಿಎಸ್ ಕೆಯ್ಯೂರು ಸಭಾಂಗಣದಲ್ಲಿ ಲ.ಆನಂದ ಪೂಜಾರಿ ಅದ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ  ಕೆಪಿಎಸ್ ಕೆಯ್ಯೂರು ‌ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ,    ಕೆಯ್ಯೂರು ಗ್ರಾ.ಪಂ ಅದ್ಯಕ್ಷೆ ಜಯಂತಿ ಎಸ್ ಭಂಡಾರಿ, ಕೆಯ್ಯೂರು ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ಸುಬ್ರಮಣ್ಯ ಕೆ.ಎಂ. ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ ಕುಮಾರ್ ಕೈತ್ತಡ್ಕ, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ರಮಿತ ಜಯರಾಮ ದೇರಪ್ಪಜ್ಜನಮನೆ, ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಕೆಪಿಎಸ್ ಕೆಯ್ಯೂರು ನಿವೃತ್ತ ಪ್ರಾಂಶುಪಾಲ ನಾಗೇಶ್ ರಾವ್,  ಕೆ.ಪಿಎಸ್ ಕೆಯ್ಯೂರು ಪ್ರಾಂಶುಪಾಲ ಆನಂದ ಪಿ, ಕೆಪಿಎಸ್ ಪ್ರಾಥಮಿಕ ವಿಭಾಗ ಪದವೀಧರೇತರ  ಮುಖ್ಯಗರು ಬಾಬು. ಇವರನ್ನು ಹೂ,ಹಾರ, ಹಣ್ಣು ಹಂಪಲು, ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ, ಪದವಿ ಪೂರ್ವ ಕಾಲೇಜು, ಉಪನ್ಯಾಸಕ ರಿಗೆ,  ‌ಪ್ರಾಂಶುಪಾಲರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಕೆಪಿಎಸ್ ಪ್ರಾಂಶುಪಾಲ ಆನಂದ ಪಿ ಮಾತಾನಾಡಿ ಶಿಕ್ಷಕ ವೃತ್ತಿ ಎನ್ನುವುದು ದೇವರ ಸೇವೆ ಇದ್ದಂತೆ. ಮರದ ಕೋಠಡಿಗೂ ಜೀವ ತುಂಬುವ ಶಕ್ತಿ ಒಬ್ಬ ಗುರುವಿಗೆ ಇದೆ, ಆದರೆ ಗುರು ಅವನಲ್ಲಿರುವ ಶಕ್ತಿ, ಸಾಮಾರ್ಥ್ಯವನ್ನು ಗುರುತಿಸಿ ಅದರ ಬೆಳವಣಿಗೆಗೆ ಪ್ರೇರಣೆ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ 500 ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಲ. ಆನಂದ ಪೂಜಾರಿ ಮತ್ತು ಅವರ ಪತ್ನಿ ಸುಷ್ಮಾಆನಂದ ಪೂಜಾರಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದಿನದಿಂದ ದಿನಕ್ಕೆ ಎರುತ್ತಿರುವ ಬಿಸಿ ಗಾಳಿ ಹೆಚ್ಚಾಗುತ್ತಿದ್ದು, ಪರಿಸರ ಮಾಲಿನ್ಯವೆ ಹೆಚ್ಚಾಗುತ್ತಿದೆ. ಕ್ರಮೇಣ ಮಳೆ ಇಳುವರಿಯು ಕಡಿಮೆಯಾಗುತ್ತಿದೆ. ಮುದೊಂದು ದಿನ ನಮ್ಮ ಪೀಳಿಗೆ ಯವರಿಗೆ ಶುದ್ದ ಗಾಳಿ ಸಿಗದೆ ಇರುವ ಸಾಧ್ಯತೆ ಹೆಚ್ಚು ಹೀಗಾಗಿ ಪರಿಸರವನ್ನು ಉಳಿಸುವ ಪ್ರಯತ್ನವನ್ನು ಪ್ರತಿಯೋಬ್ಬರು ಮಾಡಬೇಕು, ಪರಿಸರ ನಾಶದಿಂದಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು  ಸಸಿಗಳನ್ನು ನೆಟ್ಟು ಅದರ ಪೋಷಣೆಯನ್ನು ಪ್ರತಿಯೊಬ್ಬ ಶಾಲಾ ಶಿಕ್ಷಕರಿಗೆ ಮತ್ತು  ಕೆಯ್ಯೂರು ಗ್ರಾ.ಪಂ ‌ನವರು ‌ಪೋಷಣೆ ಮಾಡಬೇಕು ‌ಎಂದರು. ಈ ಸಂದರ್ಭದಲ್ಲಿ ಕೆಯ್ಯೂರು ‌ಗ್ರಾ.ಪಂ. ‌ಕಾರ್ಯದರ್ಶಿ ‌ಸುರೇಂದ್ರ ‌ರೈ  ‌ಇಳಾಂತಜೆ, ಸದಸ್ಯರಾದ ಜಯಂತ ‌ಪೂಜಾರಿ ಕೆಂಗುಡೇಲು, ಮೀನಾಕ್ಷಿ ‌ರೈ ‌ಮಾಡಾವು, ‌ಸುಭಾಷಿಣಿ ಸಣಂಗಳ,  ಲಯನ್ಸ್ ಉಪಾದ್ಯಕ್ಷ ‌ರಾಮಕೃಷ್ಣ ರೈ, ಮಾಜಿ  ‌ಅಧ್ಯಕ್ಷ  ‌ಕರುಂಬಯ್ಯ,  ‌ಸದಸ್ಯ ‌ಮಲ್ಲಿಕಾರ್ಜುನ ‌ಪ್ರಸಾದ್, ವಲಯ ‌ಮೆಂಟರ್  ‌ಗಂಗಾಧರ ರೈ, ‌ಎಸ್.ಡಿ.ಎಂ.ಸಿ. ಸದಸ್ಯರು, ‌ಪೋಷಕರು, ಶಿಕ್ಷಕ ‌ವೃಂದ,‌ ‌ವಿಧ್ಯಾರ್ಥಿಗಳು   ಉಪಸ್ಥಿತರಿದ್ದರು. ಕೆಪಿಎಸ್ ‌ಕೆಯ್ಯೂರು ವಿದ್ಯಾರ್ಥಿಗಳು ಪ್ರಾರ್ಥಿಸಿ, ಲಯನ್ಸ್ ಕ್ಲಬ್ ‌ಜಿಲ್ಲಾ ‌ಸಂಪರ್ಕಾಧಿಕಾರಿ ಜಯರಾಮ  ‌ದೇರಪ್ಪಜ್ಜನಮನೆ ಕಾರ್ಯಕ್ರಮ  ನಿರೂಪಣೆ ಮಾಡಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.