HomePage_Banner
HomePage_Banner
HomePage_Banner
HomePage_Banner

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ 55 ನೇ ವರ್ಷದ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹಿಂದೂ ಸಂಘಟನೆ ಗಟ್ಟಿಯಾಗಬೇಕಾದರೆ ಗಣೇಶೊತ್ಸವ ಮುಖ್ಯ ಕಾರಣ – ಡಾ. ಎಂ.ಕೆ.ಪ್ರಸಾ
  • ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಗಣೇಶ ಹಬ್ಬ ಕಾರಣ – ಸಂಜೀವ ಮಠಂದೂರು
  • ಹಿಂದೂ ಸಮಾಜದ ಶಕ್ತಿ ಗಣೇಶೋತ್ಸವ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಸಣ್ಣ ರೀತಿಯಲ್ಲಿ ಆರಂಭಗೊಂಡ ಗಣೇಶೋತ್ಸವ ಬೃಹತ್ ಆಕಾರದಲ್ಲಿ ಬೆಳೆದಿದೆ. ಹಿಂದೂ ಸಂಘಟನೆ ಗಟ್ಟಿಯಾಗಬೇಕಾದರೆ ಅದಕ್ಕೆ ಗಣೇಶೋತ್ಸವ ಮುಖ್ಯ ಕಾರಣ. ಇಲ್ಲವಾದರೆ ನಮ್ಮಲ್ಲೂ ಇನ್ನೊಂದು ತಾಲಿಬಾನ್ ಆದಿತು ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅವರು ತಿಳಿಸಿದ್ದಾರೆ.

ನಾಲ್ಕು ದಿನಗಳು ಶ್ರೀ ಗಣೇಶನ ಆರಾಧನೆ ಮತ್ತು ವೈವಿಧ್ಯಮಯ ಸ್ತಬ್ಧಚಿತ್ರಗಳ ಪ್ರದರ್ಶನ ಮೂಲಕ ಶೋಭಾಯಾತ್ರೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು ಇದೀಗ ಕೋವಿಡ್ -19 ಸೊಂಕು ನಿಯಂತ್ರಣಕ್ಕೆ ಸಂಬಂಧಿಸಿ ಕೇವಲ ಒಂದು ದಿನಕ್ಕೆ ಸೀಮಿತವಾಗಿ ನಡೆಯುತ್ತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘಟನೆ ಗಟ್ಟಿಯಾಗಬೇಕಾದರೆ ಅದಕ್ಕೆ ಗಣೇಶೋತ್ಸವ ಮುಖ್ಯ ಕಾರಣ ಎಂದು ನಾನು ಖಂಡಾತುಂಡಾವಾಗಿ ಹೇಳುತ್ತೇನೆ. ನಮ್ಮ ಗಣೇಶೋತ್ಸವದಲ್ಲಿ ಪ್ರತಿ ವರ್ಷ ಹಿಂದೂ ನಾಯಕರನ್ನು ಕರೆಸಿ ಧಾರ್ಮಿಕ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ, ಕೊನೆಗೆ ಬೇರೆ ಬೇರೆ ಗ್ರಾಮಗಳಿಂದ ಬರುವ ಸ್ತಬ್ದಚಿತ್ರಗಳ ಮೂಲಕ ನಾವೆಲ್ಲ ಒಂದು ಎಂಬ ಭಾವನೆ ತೋರಿಸುವ ಕೆಲಸ ಆಗುತ್ತಿತ್ತು. ಕಳೆದ ವರ್ಷದಿಂದ ಕೊರೋನಾದಿಂದಾಗಿ ವಿಜೃಂಭಣೆಗೆ ಅಡ್ಡಿಯಾಗಿದೆ. ಆದರೆ ಭಕ್ತಿಗೆ ಯಾವುದೇ ತೊಂದರೆ ಆಗಿಲ್ಲ. ನಮ್ಮ ಗಣೇಶೋತ್ಸವ ಭಕ್ತಿಯ ಜೊತೆ ಹಿಂದೂ ಸಂಘಟನೆ ಆದ್ಯತೆ ಕೊಡುತ್ತೇವೆ. ಹಿಂದೂ ಸಂಘಟನೆ ಇಲ್ಲದಿದ್ದರೆ ಇವತ್ತು ಇನ್ನೊಂದು ತಾಲಿಬಾನು ಆದಿತ್ತು. ದಕ್ಷಿಣ ಕನ್ನಡದಲ್ಲಿ ಇನ್ನೊಂದು ತಾಲಿಬಾನ್ ಆಗಬಾರದು ಎಂದು ನಮ್ಮ ಕಾರ್ಯಕರ್ತರು ಸತತ ಪ್ರಯತ್ನ ಮಾಡಿದ್ದು, ಅವರ ಪ್ರಯತ್ನ ಫಲಿಸಿದೆ. ಮುಂದಿನ ವರ್ಷ ಖಂಡಿತಾವಾಗಿಯೂ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಿದ್ದೇವೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಗಣೇಶ ಹಬ್ಬ ಕಾರಣ

ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಶ್ರದ್ಧೆ ಭಕ್ತಿಯನ್ನು ತೋರ್ಪಡಿಸುವ ಹಬ್ಬಗಳೇ ಗಣೇಶ ಹಬ್ಬ, ಗೌರಿ ಗಣೇಶ ಹಬ್ಬ ಇತಿಹಾಸ ಪಡೆದಿದೆ. ಸ್ವಾತಂತ್ರ್ಯ ಪೂರ್ವದ ಸಂದರ್ಭದಲ್ಲಿ ದೇಶವನ್ನು ಒಂದು ಗೂಡಿಸುವ ಚಿಂತನೆಯಲ್ಲಿ ಗಣೇಶ ಹಬ್ಬ ಸಾರ್ವರ್ತಿಕವಾಗಿ ಮಡುವ ಮೂಲಕ ಹಿಂದುಗಳನ್ನು ಒಂದು ಗೂಡಿಸುವ ಕೆಲಸ ಆಗಿದೆ. ದೇಶಕ್ಕೆ ಸ್ವಾತಂತ್ರ್ಯ ಕೊಡಲು ಈ ಹಬ್ಬ ಕಾರಣ ಆಗಿದೆ. ದೇಶಕ್ಕೆ ಸ್ವತಂತ್ರ್ಯ ಕೊಡಲಿಸಲು ಈ ಹಬ್ಬ ಕರಣವಾಗಿದೆ ಎಂದ ಅವರು ಕೋವಿಡ್ ಸಂದರ್ಭದಲ್ಲಿ ಹಬ್ಬ ಆಚರಣೆಗೆ ಸರಕಾರದ ನಿಯಮ ಅಡ್ಡಿಯಾಗುವುದನ್ನು ತಪ್ಪಿಸಲು ಕನಾರ್ಟಕ ಸರಕಾರ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲು ಆದೇಶ ನೀಡಿದೆ. ಬರುವ ವರ್ಷಕ್ಕೆ ವಿಜೃಂಭಣೆಯಿಂದ ಆಚರಣೆ ಮಾಡಲು ಮತ್ತು ಕೋವಿಡ್ ಮುಕ್ತ ಸಮಾಜವಾಗಿ ಜನರು ಸಹಜ ಜೀವನಕ್ಕೆ ಬರಲು ಭಗವಂತ ಅನುಗ್ರಹ ಕರುಣಿಸಲಿ ಎಂದು ಹೇಳಿದರು.

ಹಿಂದೂ ಸಮಾಜದ ಶಕ್ತಿ ಗಣೇಶೋತ್ಸವ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಪುತ್ತೂರು ಇದರ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಬಾಲಗಾಂಧರ ತಿಲಕ್ ಅವರ ಚಿಂತನೆಯಂತೆ ಇಡಿ ಸಮಾಜವನ್ನು ಒಂದು ಗೂಡಿಸುವ ಕೆಲಸದ ಪ್ರತಿಪಾದನೆಯಿಂದ ಗಣೇಶೋತ್ಸವ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಗಣೇಶೋತ್ಸವದ ಕೊನೆಯ ದಿನ ಶೋಭಾ ಯಾತ್ರೆಯಲ್ಲಿ 20ಕ್ಕೂ ಅಧಿಕ ಸ್ತಬ್ಧ ಚಿತ್ರಗಳು ರಂಜಿಸುತ್ತಿದ್ದು, ಜಿಲ್ಲೆಯಿಂದ ಲಕ್ಷಾಂತರ ಮಂದಿ ಜನರು ಆಗಮಿಸುತ್ತಿದ್ದರು. ಕಳೆದ 54 ವರ್ಷಗಳಿಂದ ಹಿಂದೂ ಸಮಾಜವನ್ನು ಸಂಘಟಿಸುವ ವ್ಯವಸ್ಥೆಯ ದೃಷ್ಟಿಯಿಂದ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಮಾಡುತ್ತಾ ಬಂದಿದ್ದೇವೆ. ಈ ಭಾರಿ ಕೋವಿಡ್ ಕಾರಣದಿಂದ ಸರಳ ರೀತಿಯಲ್ಲಿ ಆಚರಣೆ ಮಾಡುತ್ತಿದ್ದೇವೆ. ಭಕ್ತಿ ಮತ್ತು ಶ್ರದ್ಧೆಗೆ ತೊಡಗಾದ ರೀತಿಯಲ್ಲಿ ಧಾರ್ಮಿಕ ಕಾರ್ಯ ಸಂಪ್ರದಾಯದಂತೆ ನಡೆಯುತ್ತಿದೆ. ಈ ಗಣೇಶೋತ್ಸವ ಹಿಂದು ಸಮಾಜದ ಶಕ್ತಿ ಎಂದರು.

ಪ್ರತಿಷ್ಠಾ ಕಾರ್ಯ:
ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಗುರು ತಂತ್ರಿಯವರ ವೈದಿಕತ್ವದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ ನೆರವೇರಿತು. ಇದೇ ಸಂದರ್ಭದಲ್ಲಿ ಡಾ. ಭಾಸ್ಕರ್ ಅವರು ಭಾರತ ಮಾತೆ ಮತ್ತು ಬಾಲಂಗಾಧರ ತಿಲಕ್ ಅವರ ಭಾವಚಿತ್ರದ ಎದುರು ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕೋಶಾಧಿಕಾರಿ ಶ್ರೀನಿವಾಸ್, ನೀಲಂತ್, ಅಶೋಕ್ ಕುಂಬ್ಳೆ, ಗಿರೀಶ್, ಹೆಚ್.ಉದಯ, ದಯಾನಂದ್, ಗೋಪಾಲ್ ನಾಕ್, ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ್ , ಸಹಜ್‌ ರೈ ಬಳಜ್ಜ,    ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.