HomePage_Banner
HomePage_Banner
HomePage_Banner
HomePage_Banner

13 ವರ್ಷಗಳ ಹಿಂದೆ ಚೆಲ್ಯಡ್ಕದಲ್ಲಿ ನಡೆದ ಗಾಂಜಾ ಸಾಗಾಟ ಪ್ರಕರಣ ತಲೆಮರೆಸಿಕೊಂಡಿದ್ದ  ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ ಸಂಪ್ಯ ಪೊಲೀಸರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಬೆಟ್ಟಂಪಾಡಿಯ ಚೆಲ್ಯಡ್ಕದಲ್ಲಿ 2007 ರಂದು ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ 13  ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ,ಗೋರಕ್ ಪುರ ಜಿಲ್ಲೆಯ ,ಶಿವಪುರ ನಿವಾಸಿ ಮುಲಿನ್ ಸೋನಾಕ್ಕರ್ ಬಂಧಿತ ಆರೋಪಿ. 2007  ರಲ್ಲಿ ಬೆಟ್ಟಂಪಾಡಿಯ ಚೆಲ್ಯಡ್ಕ ಸಮೀಪ ಗಾಂಜಾ ಸಾಗಾಟದ ವೇಳೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ ಮುಕ್ಕಾಲು ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಬಳಿಕದ ಬೆಳವಣಿಗೆಯಲ್ಲಿ ಆರೋಪಿಗಳು ಜಾಮೀನು ಪಡೆದಿದ್ದರು. ಆರೋಪಿಗಳ ಪೈಕಿ ಮುಲೀನ್ ಸೊನಾಕ್ಕರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಮುಲೀನ್ ಸೊನಾಕ್ಕರ್ ಮೇಲೆ ವಾರಂಟ್ ಜಾರಿ ಮಾಡಿತ್ತು. ಈ ನಿಟ್ಟಿನಲ್ಲಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವೃತ್ತನಿರೀಕ್ಷಕರು ಮತ್ತು ಸಂಪ್ಯ ಎಸ್.ಐ ಉದಯರವಿ ಅವರ ಸೂಚನೆಯಂತೆ ಸಿಬ್ಬಂದಿಗಳಾದ ಧರ್ಮಪಾಲ, ಶಿವಾನಂದ ನಾಯ್ಕ್, ಮುನಿಯ ನಾಯ್ಕ ಅವರು ಉತ್ತರಪ್ರದೇಶದ ಶಿವಪುರ ಗ್ರಾಮದ ಹಾಟ್ ಬಜಾರ್ ದಿಂದ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.