HomePage_Banner
HomePage_Banner
HomePage_Banner
HomePage_Banner

ಎನ್.ಎಚ್ ನಾಯಕ್ಸ್ ಹಾರ್ಡ್ ವೇರ್, ಎಂಟರ್ ಪ್ರೈಸಸ್ ಸ್ಥಳಾಂತರಗೊಂಡು ಪುರುಷರಕಟ್ಟೆ ಉದಯಭಾಗ್ಯ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಟ್ಟಡ ಸಾಮಾಗ್ರಿಗಳು ಹಾಗೂ ಹಾರ್ಡ್ ವೇರ್ ಸಾಮಾಗ್ರಿಗಳ ಸಂಸ್ಥೆಯಾಗಿರುವ ಎನ್.ಎಚ್ ನಾಯಕ್ಸ್ ಹಾರ್ಡ್ ವೇರ್ ಮತ್ತು ಎಂಟರ್ ಪ್ರೈಸಸ್ ಸ್ಥಳಾಂತರಗೊಂಡು ಪುರುಷರಕಟ್ಟೆ ಉದಯಭಾಗ್ಯ ಕಾಂಪ್ಲೆಕ್ಸ್‌ ನಲ್ಲಿ ಸೆ.10ರಂದು ಶುಭಾರಂಭಗೊಂಡಿತು.

ಮುಕ್ವೆ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಅಚರ್ಕರಾದ ಪ್ರಸಾದ್ ಅಡಿಗ ಅವರು ಪೂಜಾ ವಿಧಾನಗಳನ್ನು ನೆರವೇರಿಸಿದರು. ಎನ್.ಎಚ್ ನಾಯಕ್ಸ್ ಹಾರ್ಡ್‌ ವೇರ್ ಮಾಲಕ ವಿಜೇಶ್ ನಾಯಕ್ ಮಜಲು ಅವರ ತಂದೆ ಮೋಹನ್ ನಾಯಕ್ ಮಜಲು ಅವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆ ಮಾಡಿದರು. ವಿಜೇಶ್ ನಾಯಕ್ ಮಜಲು ಅವರ ತಾಯಿ ವಿದ್ಯಾಲಕ್ಷ್ಮೀ ನಾಯಕ್  ಉಪಸ್ಥಿತರಿದ್ದರು.

ಉದ್ಯಮಿ ಜಯಂತ ನಡುಬೈಲು, ಉದಯಭಾಗ್ಯ ಕಾಂಪ್ಲೆಕ್ಸ್ ಮಾಲಕ ಸುರೇಶ್ ಪ್ರಭು, ವಕೀಲರಾದ ರಾಜೇಶ್ ಎಂ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ, ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ನರಿಮೊಗರು ಗ್ರಾ.ಪಂ ಸದಸ್ಯರಾದ ನವೀನ್ ರೈ ಶಿಬರ, ನಾಗಮ್ಮ ಬಾಲಕೃಷ್ಣ, ಮಾಜಿ ಸದಸ್ಯ ಇಸಾಕ್ ಮುಕ್ವೆ, ಉದ್ಯಮಿ ವೇದನಾಥ ಸುವರ್ಣ, ಹರ್ಷಿತ್ ಜ್ಯುವೆಲ್ಲರ್ಸ್ ನ ರಾಹುಲ್, ಸೂರ್ಯ ಅರ್ಥ್ ಮೂವರ್ಸ್‌ ನ ವಿನಯ ಸವಣೂರು, ವಿಷ್ಣುಮೂರ್ತಿ ಅರ್ಥ್ ಮೂವರ್ಸ್‌ ನ ಚಂದ್ರ ಹಾಗೂ ಸುರೇಶ್ ಸೇರಿದಂತೆ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಎನ್.ಎಚ್ ನಾಯಕ್ ಹಾರ್ಡ್ ವೇರ್, ಎಂಟರ್‌ ಪ್ರೈಸಸ್‌ ನ ಮಾಲಕರಾದ ವಿಜೇಶ್ ನಾಯಕ್ ಮಜಲು ಹಾಗೂ ಶಿಲ್ಪಾ ಶೆಣೈ ಅವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.


ನಮ್ಮಲ್ಲಿ ವಿವಿಧ ಕಂಪೆನಿಗಳ ಸಿಮೆಂಟ್ ಗಳು, ವಿವಿಧ ಕಂಪೆನಿಗಳ ಪೈಪ್ ಗಳು, ಪೈಪ್ ಫಿಟ್ಟಿಂಗ್ಸ್ ಗಳು, ಸಾನಿಟರಿ ಫಿಟ್ಟಿಂಗ್ಸ್ ಗಳು, ಪಿವಿಸಿ ದಂಬೆ ಫಿಟ್ಟಿಂಗ್ಸ್ ಗಳು, ಹಾರ್ಡ್ವೇರ್ ಮೆಟೀರಿಯಲ್, ಡ್ಯೂರೋಫ್ಲೆಕ್ಸ್, ಫೈಬರ್ ಶೀಟ್ ಗಳು, ಸಿಮೆಂಟ್ ಉತ್ಪನ್ನಗಳು, ದಾರಂದ, ಕಿಟಕಿ, ಸರಿಗೆಗಳು, ಮುಳ್ಳುತಂತಿಗಳು ಸೇರಿದಂತೆ ಎಲ್ಲಾ ರೀತಿಯ ಹಾರ್ಡ್ವೇರ್ ಸಾಮಾಗ್ರಗಿಳು ಲಭ್ಯವಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ -ವಿಜೇಶ್ ನಾಯಕ್ ಮಜಲು ಹಾಗೂ ಶಿಲ್ಪಾ ಶೆಣೈ, ಮಾಲಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.