HomePage_Banner
HomePage_Banner
HomePage_Banner
HomePage_Banner

ಕಿಯೋನಿಕ್ಸ್ ಯುವ.ಕಾಂ ಕಂಪ್ಯೂಟರ್ ತರಬೇತಿ ಸೆಂಟರ್ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಿದ್ಯಾಭ್ಯಾಸ ಆದ ಮೇಲೆ ಮುಂದೇನು ಎಂಬ ಕಲ್ಪಣೆ ಕೊಡುವುದೇ ಕಿಯೋನಿಕ್ಸ್ – ಸಂಜೀವ ಮಠಂದೂರು
  • ನಿದ್ರೆ ಮಾಡಲು ಬಿಡದಿರುವ ಕನಸಿರಬೇಕು – ಹರಿಕೃಷ್ಣ ಭಂಟ್ವಾಳ್
  • ಆನ್ ಲೈನ್ ಉದ್ಯೋಗ ತರಬೇತಿಗೂ ಅವಕಾಶ ಸಿಗಲಿ- ವಿದ್ಯಾ ಗೌರಿ
  • ಸ್ಕಿಲ್ ಡೆವಲಪ್ ಮೆಂಟ್ ಯೋಜನೆ ಶೀಘ್ರ – ದಿನೇಶ್ ಪ್ರಸನ್ನ

ಪುತ್ತೂರು: ಪುತ್ತೂರು ಎಸ್ ಎಲ್ ವಿ ಕಟ್ಟದಲ್ಲಿ ಕಾರ್ಯಾಚರಿಸಿ ಇದೀಗ ಪಕ್ಕದ ಸಿಪಿಸಿ ಪ್ಲಾಜಾದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಕಿಯೋನಿಕ್ಸ್ .ಕಾಂ ಸೆ.11  ರಂದು ಶುಭಾರಂಭಗೊಂಡಿತ್ತು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿದರು.

 


ವಿದ್ಯಾಭ್ಯಾಸ ಆದ ಮೇಲೆ ಮುಂದೇನು ಎಂಬ ಕಲ್ಪಣೆ ಕೊಡುವುದೇ ಕಿಯೋನಿಕ್ಸ್:
ಕಿಯೋನಿಕ್ಸ್ ಸಂಸ್ಥೆಯ ಸ್ವಂತ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ವಿದ್ಯಾಭ್ಯಾಸ ಆದ ಮೇಲೆ ಮುಂದೇನು ಎಂಬ ಕಲ್ಪಣೆ ಕೊಡುವ ಕೆಲಸ ಕಿಯೋನಿಕ್ಸ್ ಯುವ.ಕಾಂ ಮಾಡುತ್ತಿದೆ. ಪ್ರಧಾನಿಯವರು ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ ವಿದ್ಯಾರ್ಥಿಗಳು ದೇಶದಲ್ಲೇ ಉಳಿಯಬೇಕೆಂದು ಉದ್ದೇಶ.
ಕೌಶಲ್ಯ ಅಭಿವೃದ್ದಿ ಇಲಾಖೆ ಮೂಲಕ ಯುವ ಜನಾಂಗಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

 


ನಿದ್ರೆ ಮಾಡಲು ಬಿಡದಿರುವ ಕನಸು ಇರಬೇಕು:
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ನಿದ್ರೆ ಮಾಡಲು ಬಿಡದಿರುವ ಕನಸು ಮುಖ್ಯ. ನಾನೇನಾಗಬೇಕೆಂಬ ಗುರಿ ಇಲ್ಲದೆ ಹೋದರೆ ಗುರಿ ಸಾಧ್ಯವಿಲ್ಲ. ನಿಮ್ಮಲ್ಲಿ ನಾನೆನಾಗಬೇಕೆಂಬ ಸ್ಪಷ್ಟತೆ ಇದ್ದರೆ ಸಾಧನೆ ಸುಲಭ ಎಂದ ಅವರು ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಇಂತಹ ಶಿಕ್ಷಣ ಕೊಡುವ ವ್ಯವಸ್ಥೆಗೆ ಮುಂದಾಗುವವರು ಇದ್ದರೆ ಅವರಿಗೆ ಪ್ರಾಂಚಾಯಸ್ ಕೊಡುತ್ತೇನೆ ಎಂದು‌ ಮಾಹಿತಿ ನೀಡಿದರು.

 

ಆನ್ ಲೈನ್ ಉದ್ಯೋಗ ತರಬೇತಿಗೂ ಅವಕಾಶ ಸಿಗಲಿ:
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ಶಿಕ್ಷಣದ ಜೊತೆಗೆ ಸಮಾಜ ಸೇವೆಯ ದೃಷ್ಟಿಕೋನವಿಟ್ಟುಕೊಂಡಿರುವ ದಿನೇಶ್ ಪ್ರಸನ್ನ ದಂಪತಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಂಪ್ಯೂಟರ್ ಯುಗದಲ್ಲಿ ಎಲ್ಲರಿಗೂ ಅವಕಾಶವಿದೆ. ಪ್ರಸ್ತುತ ದಿನಗಳಲ್ಲಿ ಆನ್ ಲೈನ್ ಜಾಬ್ ತುಂಬಾ ಇದೆ. ಮನೆಯಲ್ಲೇ ಕೂತು ಸಾವಿರಾರು ಸಂಪದಾನೆ ಮಾಡುವ ಅವಕಾಶವಿದೆ. ಇಂತಹ ತರಬೇತಿ ಕಾರ್ಯವು ಸಂಸ್ಥೆ ಮುಂದೆ ಹಮ್ಮಿಕೊಳ್ಳುವಂತೆ ಹೇಳಿದರು.

 

ಸ್ಕಿಲ್ ಡೆವಲಪ್ ಮೆಂಟ್ ಯೋಜನೆ ಶೀಘ್ರ:
ಕಿಯೋನಿಕ್ಸ್ ಯುವ .ಕಾಮ್ ಸಂಸ್ಥೆ ಪುತ್ತೂರು ನಿರ್ದೇಶಕ ದಿನೇಶ್ ಪ್ರಸನ್ನ ಅವರು‌ ಮಾತನಾಡಿ ತಂತ್ರಜ್ಞಾನದಿಂದ ಉಜ್ವಲ ಭವಿಷ್ಯ ಮತ್ತು ಕಳೆದ 22 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಸಬ್ಸಿಡಿ ಸಹಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಕಿಯೋನಿಕ್ಸ್ ಸ್ಕಿಲ್ ಡೆವಲಪ್ ಮೆಂಟ್ ಕುರಿತುಕೇಂದ್ರ ಸರಕಾರದ ಯೋಜನೆಯನ್ನು ಅಳವಡಿಸಲಾಗುವುದು. ಯಾಕೆಂದರೆ ಕೇವಲ ಶಿಕ್ಷಣ ಸಾಗುವುದಿಲ್ಲ ಸ್ಕಿಲ್ ಕೂಡಾ ಬೇಕು. ಕಂಪೆನಿಗಳನ್ನು ಶಿಕ್ಷಣದ ಜೊತೆಗೆ ಸ್ಕಿಲ್ ಗಳನ್ನು ಬಯಸುತ್ತದೆ.ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ಮುಂದೆ ಸ್ಕಿಲ್ ಡೆವೆಲಪ್ ಮೆಂಟ್ ಯೋಜನೆ ಅತಿ ಶೀರ್ಘದಲ್ಲಿ ಪ್ರಾರಂಭ ಆಗಲಿದೆ ಎಂದರು. ಸಿಪಿಸಿ ಪ್ಲಾಜಾ ಕಟ್ಟಡ ಸಂಘದ ಅಧ್ಯಕ್ಷ ಡಾ.ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಮಾಲಕ ಬಲರಾಮ ಆಚಾರ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಕಟ್ಟದ ಮಾಲಕ ರಾಜಾರಾಮ ಪ್ರಭು, ವತ್ಸಲರಾಜ್ಞಿ, ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ, ಲಯನ್ಸ್ ಕ್ಲಬ್ ನ ಜಯಶ್ರೀ ಎಸ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

 

ಪ್ರಸನ್ನ, ಭಾಗ್ಯಶ್ರೀ, ಪ್ರಣಮ್ಯ, ಧನುಶ್ಯಾಮ್, ವೇಣುಗೋಪಲ್, ಸ್ವಾತಿ, ಪ್ರಜ್ವಲ್, ಆಸಿನ್ ಅತಿಥಿಗಳನ್ನು ಗೌರವಿಸಿದರು. ಪೂಜಾ ಮತ್ತು ಪೂಜಾಶ್ರೀ ಪ್ರಾರ್ಥಿಸಿದರು. ಕಿಯೋನಿಕ್ಸ್ ಪುತ್ತೂರು ಸಂಸ್ಥೆಯ ನಿರ್ದೇಶ ದಿನೇಶ್ ಪ್ರಸನ್ನ ಸ್ವಾಗತಿಸಿದರು.ದೀಕ್ಷಾ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು. ಕಿಯೋನಿಕ್ಸ್ ಯುವ.ಕಾಂ ನ ತರಬೇತಿ‌ ಅಧಿಕಾರಿ ಉಮಾ ಡಿ ಪ್ರಸನ್ನ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.