HomePage_Banner
HomePage_Banner
HomePage_Banner
HomePage_Banner

ಫಾ.ಪತ್ರಾವೋ ಆಸ್ಪತ್ರೆಯ ಸುವರ್ಣ ಸಂಭ್ರಮ-ಕೃತಜ್ಞತಾ ಬಲಿಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ ಶಿಕ್ಷಣ ಶಿಲ್ಪಿ ಎನಿಸಿಕೊಂಡಿರುವ ಮೊ|ಆಂಟನಿ ಪತ್ರಾವೋರವರ ದೂರದೃಷ್ಟಿತ್ವ ಯೋಜನೆಗಳಿಂದ ಅಂದು ಕುಗ್ರಾಮ ಎನಿಸಿಕೊಂಡಿದ್ದ ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಉದಯವಾಗಿತ್ತು. ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲ್ಲರೂ ಆರೋಗ್ಯವಂತರಾಗಿರಬೇಕು ಎನ್ನುವ ದೃಷ್ಟಿಯಿಂದ 1971ರಲ್ಲಿ ಪರ್ಲಡ್ಕ-ಪಾಂಗ್ಲಾಯಿ ಎಂಬಲ್ಲಿ ಫಾ.ಪತ್ರಾವೋ ಆಸ್ಪತ್ರೆಯ ಉದಯವಾಯಿತು. ಈಗ ಇದೇ ಫಾ.ಪತ್ರಾವೋ ಆಸ್ಪತ್ರೆಗೆ ಸೆ.10  ರಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ 50ನೇ ವರ್ಷದ ಸುವರ್ಣ ಸಂಭ್ರಮ. ಈ ಐವತ್ತು ವರ್ಷದ ಯಶಸ್ವಿ ಪಯಣದ ಹಿನ್ನೆಲೆಯಲ್ಲಿ ಫಾ.ಪತ್ರಾವೋ ಆಸ್ಪತ್ರೆಯ ಆಡಳಿತ ಮಂಡಳಿ ಆಸ್ಪತ್ರೆಯ ಆವರಣದಲ್ಲಿ ಸರಳವಾಗಿ ಕೃತಜ್ಞತಾ ದಿವ್ಯ ಬಲಿಪೂಜೆಯನ್ನು ಹಮ್ಮಿಕೊಳ್ಳಲಾಯಿತು.

ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರುವ ಅತಿ.ವಂ.ಡಾ|ಪೀಟರ್ ಪಾವ್ಲ್ ಸಲ್ದಾನ್ಹರವರು ಸಂಭ್ರಮದ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಬಳಿಕ ಅವರು, ಮೊ|ಪತ್ರಾವೋರವರು ಆರೋಗ್ಯದ ದೃಷ್ಟಿಯಿಂದ ಅಂದು ಈ ಭಾಗದಲ್ಲಿ ಆಸ್ಪತ್ರೆಯನ್ನು ನಿರ್ಮಿಸಿ ಅದೆಷ್ಟೋ ರೋಗಿಗಳ ಪಾಲಿಗೆ ಬೆಳಕಾಗಿದ್ದಾರೆ. ಮೊ|ಪತ್ರಾವೋರವರ ದೂರದೃಷ್ಟಿತ್ವದ ಕನಸಿನಿಂದಲೇ ಈ ಆಸ್ಪತ್ರೆಯಲ್ಲಿ ವೈದ್ಯರುಗಳಿಗೆ, ಶುಶ್ರೂಷಕಿಯರಿಗೆ ರೋಗಿಗಳ ಸೇವೆ ಮಾಡಲು ಸಹಕಾರಿಯಾಗಿದೆ. ಈ ಸುವರ್ಣ ಸಂಭ್ರಮದ ಪಯಣದಲ್ಲಿ ಆಸ್ಪತ್ರೆಯು ಸಾಕಷ್ಟು ಏಳು-ಬೀಳುಗಳನ್ನು ಕಂಡರೂ ದೇವರ ಹಾಗೂ ಪವಿತ್ರಾತ್ಮನ ಅನುಗ್ರಹದಿಂದ ಇಂದು ಒಳ್ಳೆಯ ಆಸ್ಪತ್ರೆಯಾಗಿ ಬೆಳೆದಿದೆ ಮಾತ್ರವಲ್ಲ ಪ್ರತಿಯೋರ್ವರ ಹೃದಯದಲ್ಲಿ, ಮನಸ್ಸಿನಲ್ಲಿ ಉಳಿಯುವಂತೆ ಮಾಡಿದೆ ಎಂದ ಅವರು ಈ ಆಸ್ಪತ್ರೆಯ ವೈದ್ಯರು, ಧರ್ಮಭಗಿನಿಯರು, ಶುಶ್ರೂಷಕಿಯರು, ಆಡಳಿತ ಸಿಬ್ಬಂದಿಗಳ ಅರ್ಪಣಾ ಹಾಗೂ ನಿಸ್ವಾರ್ಥ ಮನೋಭಾವವುಳ್ಳ ಚಿಂತನೆಯ ಜೊತೆಗೆ ರೋಗಿಗಳನ್ನು ಆತ್ಮೀಯವಾಗಿ, ನಗುಮುಖದ ಸೇವೆಯೊಂದಿಗೆ ಉಪಚರಿಸುತ್ತಾ ಬಂದಿರುವ ಈ ಆಸ್ಪತ್ರೆ ಸುವರ್ಣ ವರ್ಷದ ಸಂಭ್ರಮವನ್ನು ದಾಟಿ ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಯು ಆರೋಗ್ಯವನ್ನು ಬಯಸಿ ಬಂದವರಿಗೆ ಇನ್ನೂ ಉತ್ತಮ ಸೇವೆಯನ್ನು ನೀಡಲು ದೇವರು ಅನುಗ್ರಹವನ್ನು ಕರುಣಿಸಲಿ ಎಂದು ಅವರು ಸಂದೇಶ ನುಡಿದರು.

ಪುತ್ತೂರು ಸೀರೋ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್, ಪುತ್ತೂರು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಮುಕ್ರಂಪಾಡಿ ಸಾಂತೋಮ್ ಗುರುಮಂದಿರದ ವಂ|ಸನ್ನಿ ಮ್ಯಾಥ್ಯೂ, ಸಂತ ಫಿಲೋಮಿನಾ ಕಾಲೇಜು ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಫಿಲೋಮಿನಾ ಕಾಲೇಜು ಪುರುಷರ ವಸತಿನಿಲಯದ ವಾರ್ಡನ್ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಸಹ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಸೈಂಟ್ ಜೋಸೆಫ್ ಆಫ್ ತಾಬ್ಸ್ ಸಂಸ್ಥೆಯ ಪ್ರೊವಿನ್ಸಿಯಲ್ ಸುಪೀರಿಯರ್ ಭಗಿನಿ ಸಿಸ್ಟರ್ ಜಯರಾಣಿ ಎ., ಫಾ.ಪತ್ರಾವೋ ಆಸ್ಪತ್ರೆಯ ವೈದ್ಯಾಧಿಕಾರಿ ಸಿಸ್ಟರ್ ಡಾ.ಫ್ಲೋರಿನ್ ಮಥಾಯಿಸ್, ಸುಪೀರಿಯರ್ ಸಿಸ್ಟರ್ ಜುಲಿಯಾನ ಡಿ’ಸೋಜ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್, ಕಾರ್ಯದರ್ಶಿ ಮಾರ್ಟಿನ್ ಡಿ’ಸೋಜ, ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷ ರೋಶನ್ ಡಾಯಸ್, ಕಥೋಲಿಕ್ ಸಭಾ ಪುತ್ತೂರು ಘಟಕದ ಅಧ್ಯಕ್ಷ ಪಾವ್ಲ್ ಮೊಂತೇರೋ, ಡೊನ್ ಬೊಸ್ಕೊ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅರುಣ್ ರೆಬೆಲ್ಲೋ, ಫಿಲೋಮಿನಾ ಮಹಿಳೆಯರ ವಸತಿನಿಲಯದ ವಾರ್ಡನ್ ಸಿಸ್ಟರ್ ಜಾನೆಟ್ ಕುಟಿನ್ಹಾ, ಶ್ವಾಸಕೋಶ ತಜ್ಞ ಡಾ.ಡೋನ್ ಮಸ್ಕರೇನ್ಹಸ್, ಸುಪ್ರೀಮ್ ಸರ್ವಿಸಸ್‌ನ ಸಿಪ್ರಿಯನ್ ಮೊರಾಸ್, ಸಿರಿಲ್ ಕೆಟರರ್‍ಸ್‌ನ ಸಿರಿಲ್ ಮೊರಾಸ್, ಹಿರಿಯ ಹಾಗೂ ಕಿರಿಯ ಧರ್ಮಭಗಿನಿಯರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಜನವರಿಯಲ್ಲಿ ಅದ್ದೂರಿ ಕಾರ್ಯಕ್ರಮ
ಕೋವಿಡ್ ಹಿನ್ನೆಲೆಯಲ್ಲಿ ಸರಕಾರವು ಅದ್ದೂರಿ ಸಮಾರಂಭಗಳಿಗೆ ಬ್ರೇಕ್ ಹಾಕಿದ್ದರಿಂದ ಫಾ.ಪತ್ರಾವೋ ಆಸ್ಪತ್ರೆಯ ಸುವರ್ಣ ವರ್ಷದ ಸಂಭ್ರಮವನ್ನು ಅದ್ದೂರಿಯಾಗಿ ಮಾಡಲಾಗದೆ ಕೇವಲ ದೇವರಿಗೆ ಕೃತಜ್ಞತೆ ಸಲ್ಲಿಸುವ ಕೃತಜ್ಞತಾ ದಿವ್ಯ ಬಲಿಪೂಜೆಯನ್ನು ಮಾತ್ರ ಈ ಸಂದರ್ಭದಲ್ಲಿ ಏರ್ಪಡಿಸಲಾಗಿದೆ. ೧೯೭೧ ರಿಂದ ಇಲ್ಲಿವರೆಗೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರುಗಳಿಗೆ, ಶುಶ್ರೂಷಕಿಯರಿಗೆ ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಸಂಸ್ಥೆಯು ಈಗಾಗಲೇ ಉದ್ಧೇಶ ಹೊಂದಲಾಗಿದ್ದು, ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಆಸ್ಪತ್ರೆಯ ಸುವರ್ಣ ವರ್ಷದ ಸಂಭ್ರಮವನ್ನು ಅದ್ದೂರಿಯಾಗಿ ಮಾಡಲಿದ್ದೇವೆ.
-ಸಿಸ್ಟರ್ ಜ್ಯುಲಿಯಾನ ಡಿ’ಸೋಜ, ಸುಪೀರಿಯರ್, ಫಾ.ಪತ್ರಾವೋ ಆಸ್ಪತ್ರೆ

ಗೌರವ
ದಿವ್ಯ ಬಲಿಪೂಜೆ ಆರಂಭದ ಮೊದಲಿಗೆ ಆಸ್ಪತ್ರೆಯ ಸುವರ್ಣ ವರ್ಷದ ಸಂಭ್ರಮದ ಪ್ರಯುಕ್ತ ಆಸ್ಪತ್ರೆಯ ಸ್ಥಾಪಕರಾದ ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ಭಾವಚಿತ್ರಕ್ಕೆ ಪುತ್ತೂರು ಸೀರೋ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ|ಗೀವರ್ಗೀಸ್ ಮಾರ್ ಮಕಾರಿಯೋಸ್‌ರವರು ಹಾರಾರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಲಾಯಿತು.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.