HomePage_Banner
HomePage_Banner
HomePage_Banner
HomePage_Banner

ಮೈ ಫ್ರೆಂಡ್ ಗಣೇಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಧ್ಯಾಹ್ನ 2 ಗಂಟೆ, ಮನೆಯ ಗೇಟ್ ಬಾರಿಸಿದರು ಯಾರೆಂದು ಕಿಟಕಿಯಿಂದ ನೋಡಿದರೆ 4-5 ಜನ ಚಿಕ್ಕ ಮಕ್ಕಳು ಒಬ್ಬರ ಕೈಯಲ್ಲಿ ಒಂದು ಗುಲಾಬಿ ಬಣ್ಣದ, ಅಂಗೈಯಷ್ಟು ಅಗಲದ ಪುಸ್ತಕ. ಅಪ್ಪ ಬಾಗಿಲು ತೆರೆದರು, ಹುಡುಗರು ಅಪ್ಪನ ಮುಖ ನೋಡಿದ ಕೂಡಲೇ ” ಅಂಕಲ್, ಚಂದಾ, ಗಣೇಶ ಹಬ್ಬ” ಎಂದು ಹೇಳಿದರು. ಗಣೇಶ ಹಬ್ಬಕ್ಕೆ ಇನ್ನೂ ಮೂರು ವಾರ ಇರುವಂತೆ ಗುಂಪು – ಗುಂಪಾಗಿ ದುಡ್ಡು ಕೇಳಲು ಬರುತ್ತಾರೆ. ಅಪ್ಪ ಗಣೇಶ ಎಲ್ಲಿ ಇಡುತ್ತೀರಪ್ಪಾ? ಎಂದು ವಿಚಾರಿಸಿದಾಗ ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು ನಾಲ್ಕು ದಿಕ್ಕಿನತ್ತ ಕೈ ತೋರಿಸಿದರು.

ಗಣೇಶ ಹಬ್ಬ ಎಂದರೆ ನನ್ನ ತಾಯಿಯ ಅಮ್ಮನ ಮನೇಲಿ ದೊಡ್ಡ ಸಡಗರ, ಗಣೇಶನು 5  ದಿನದ ಅತಿಥಿ. ಸೆಪ್ಟಂಬರ್ ತಿಂಗಳ ಬರುವ ಮುಂಚಿತವಾಗಿಯೇ ಎಲ್ಲ ಅಲಂಕಾರದ ವಸ್ತುಗಳನ್ನು ತಂದಿರುತ್ತಾರೆ. ಇನ್ನು ಗಣೇಶನನ್ನು ಆಯ್ಕೆ ಮಾಡುವುದೊಂದು ಸಂಭ್ರಮ, ಇಷ್ಟ ಆದ ಗಣೇಶನ ಫೋಟೋ ತೆಗೆದು “ನಮ್ಮ ಸಂಸಾರ” ಎಂಬ ವಾಟ್ಸಪ್ ಗ್ರೂಪ್ಗೆ ಹಾಕುತ್ತಾರೆ. ನನ್ನ ಅಮ್ಮ ನೋಡಿ ” ಚೈತ್ರಾ!” ಎಂದು ಜೋರಾಗಿ ಬೊಬ್ಬೆ ಹಾಕುತ್ತಾರೆ ಇವರು ಬೊಬ್ಬೆ ಹಾಕಿದ್ದನ್ನು ನೋಡಿ ನಾನು ನನ್ನ ಅಪ್ಪ ಏನೋ ಆಯಿತೆಂದು ಓಡಿ ಬರುತ್ತೇವೆ… “ನೋಡು ಎಷ್ಟು ಚಂದ ಇದ್ದಾನೆ ಅಲಾ?” ಎಂದು ಗಣೇಶನನ್ನು ತೋರಿಸುತ್ತಾರೆ.

ನಮ್ಮ ತಂದೆಯ ಮನೆಯಲ್ಲಿ ಗಣೇಶನನ್ನು ಇಡುವ ಪದ್ಧತಿ ಇಲ್ಲ, ಯಾಕೆ? ಏಕೆಂದರೆ ನನ್ನ ಅಪನ ಮನೆಯ ಕಡೆ ಈ ಪದ್ಧತಿ ಇಲ್ಲ… ಯಾಕೆ? ಅಂದು ಮತ್ತೆ ಪ್ರಶ್ನಿಸಬೇಡಿ ನನಗೂ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಅಂದಿನ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿ, ಗಣೇಶನಿಗೆ ವಿಶೇಷ ಪೂಜೆಯನ್ನು ಮಾಡುತ್ತೇವೆ, ಮಧ್ಯಮ ವರ್ಗದ ಮನೆಗಳಲ್ಲಿ ಹಬ್ಬಗಳಿಗಾಗಿಯೇ ಬೇರೆ ಅಗರ್ಬತ್ತಿಗಳನ್ನು ಇಟ್ಟಿರುತ್ತಾರೆ ಅದರ ಘಮ ಉಳಿದ ಅಗರ್ಬತ್ತಿಗಳಿಗಿಂತ ಸ್ವಲ್ಪ ಮೇಲಿನ ವರ್ಗ. ಹಬ್ಬ ಹರಿದಿನಗಳ ವೇಳೆ ಇವು ಶೆಲ್ಫ್ ಇಂದ ಹೊರಗೆ ಬರುತ್ತವೆ. ದೇವರ ಕೋಣೆಯ ಮುಂದೆ ಹಣ್ಣುಗಳನ್ನು ನೈವೇದ್ಯಗೆ ಇಡುತ್ತೇವೆ, ಅಡುಗೆಯಲ್ಲಿ ಒಂದು ಸಿಹಿಯ ಪದಾರ್ಥವನ್ನು ಮಾಡಿರುತ್ತೇವೆ, ದೇವರಿಗೆ ಕೈ ಮುಗಿದು ನಾವೇ ತಿಂದು ಮುಗಿಸಿ ಬಿಡುತ್ತೇವೆ.

ಮನೆಗೆ ಯಾರೇ ಬಂದರೂ ಅವರೊಡನೆ ನನ್ನ ಬಾಂಧವ್ಯ ಬೇಗ ಬೆಳೆಯುತ್ತದೆ ಅದೇ ರೀತಿ ಗಣೇಶನನ್ನು ಸ್ಥಾಪಿಸಿದರೆ, ವಿಸರ್ಜನೆಯ ವೇಳೆ ನನಗೆ ದುಃಖ ತಡೆದುಕೊಳ್ಳಲು ಆಗುವುದಿಲ್ಲ ಅದರಲ್ಲೂ “ಮೈ ಫ್ರೆಂಡ್ ಗಣೇಶ” ಎಂಬ ಚಲನಚಿತ್ರವನ್ನು ನೋಡಿದ ನಾನು, ವಿಸರ್ಜಿಸಿದ ನಂತರ ಗಣೇಶನು ಮನೆ ಬಿಟ್ಟು ಹೋಗುತ್ತಾನೆ ಎಂದು ಇನ್ನೂ ನಂಬುತ್ತೇನೆ. ಆದರೆ ಮತ್ತೆ ಮುಂದಿನ ವರ್ಷ..ಗಣೇಶ ಬಂದ ಕಾಯಿ ಕಡುಬು ತಂದ… ಎನ್ನೋದೇ ಖುಷಿ.

ಚೈತ್ರ ಕೆ
ಪ್ರಥಮ ಬಿ ಎ
ಪತ್ರಿಕೋದ್ಯಮ ವಿಭಾಗ
ಎಸ್. ಡಿ. ಎಂ. ಉಜಿರೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.