HomePage_Banner
HomePage_Banner
HomePage_Banner
HomePage_Banner

ಅತಿ ಶೀಘ್ರದಲ್ಲಿ ತಾಲೂಕು ಮಟ್ಟದಲ್ಲಿ ಸಮಸ್ಯೆಗಳ ಪರಿಹಾರ ಕ್ರಮ – ಜಿಲ್ಲಾಮಟ್ಟದ ಕೊರಗ ಸಮುದಾಯದ ಅಭಿವೃದ್ಧಿ ಕುರಿತ ಸಂವಾದಲ್ಲಿ ಸಚಿವ ಎಸ್.ಅಂಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಸಮಸ್ಯೆಗಳನ್ನು ಸಚಿವರ ಮುಂದಿಟ್ಟ ಕೊರಗ ಸಮುದಾಯದ ಪ್ರಮುಖರು

ಪುತ್ತೂರು: ಕೊರಗ ಸಮುದಾಯಗಳಿಗೆ ಜಮೀನು ಹಕ್ಕು ಪತ್ರ, ಪೌಷ್ಠಿಕ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಇನ್ನೂ ವಂಚಿತರಾಗಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಸೌಲಭ್ಯಗಳು ಕೊರಗರಿಗೆ ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಹಾಗೂ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿಯೇ ಗುರುತಿಸಿ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಬಂದರು, ಮೀನುಗಾರಿಕೆ, ಒಳನಾಡು ಮತ್ತು ಜಲಸಾರಿಗೆ ಸಚಿವರಾದ ಸಚಿವ ಎಸ್. ಅಂಗಾರ ತಿಳಿಸಿದರು.

ಅವರು ದ.ಕ.ಜಿಲ್ಲಾ ಕೊರಗ ಸಮುದಾಯಗಳ ಸಮಸ್ಯೆಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಸೆ.11 ರಂದು ಪುತ್ತೂರು ಪುರಭವನದಲ್ಲಿ ನಡೆಸಲಾದ ಜಿಲ್ಲಾ ಮಟ್ಟದ ಕೊರಗ ಸಮುದಾಯಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಂಟ್ವಾಳ ತಾಲೂಕಿನ ಗುರುವಮ್ಮ ಬೋಳಂತೂರು, ಮೈರೆ ನಾರೆಕೋಡಿ, ವಿಶ್ವನಾಥ ಆಲಂಗಾರು, ಬೆಳ್ತಂಗಡಿ ತಾಲೂಕಿನ ಹರೀಶ್ ಸುಲಿಕೇರಿ, ಪುತ್ತೂರು ತಾಲೂಕಿನ ಕೃಷ್ಣಪ್ಪ ಒಳತ್ತಡ್ಕ, ಐತ್ತ ಮಾನ್ಯಡ್ಕ, ಬಾಲು ಒಳತ್ತಡ್ಕ, ತುಕ್ರಪ್ಪ ಒಳತ್ತಡ್ಕ, ಬಾಬು ಬೊಳ್ಳಾಡಿ, ಉಮೇಶ್ ಕೌಡಿಚ್ಚಾರು, ಸಂಜೀವ ಬೇರಿಕೆ, ಸುಳ್ಯ ತಾಲೂಕಿನ ಆನಂದ ಜಾಲ್ಪಣೆ, ಕವಿತ ದುಗ್ಗಲಡ್ಕ, ಮೂಡಬಿದ್ರೆಯ ಸಂಜೀವ ಮೂಡಬಿದ್ರೆ ಮತ್ತಿತರರು ಮಾತನಾಡಿ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಕೊರಗ ಸಂಘಗಳ ಒಕ್ಕೂಟದ ಸದಸ್ಯ ಮತ್ತಡಿ ಕಾಯರ್‌ಪಲ್ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕೊರಗ ಸಂಘದ ಜಿಲ್ಲಾ ಸಮಿತಿ ಸದಸ್ಯ ದಿನೇಶ್ ಬೇಡಿಕೆ ವರದಿ ಮಂಡಿಸಿದರು. ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಮತ್ತು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಗಾಯತ್ರಿ ಸಿ.ಎಚ್, ಕೊರಗ ಒಕ್ಕೂಟ ಸದಸ್ಯ ಮತ್ತಡಿ ಕಾಯರ್‌ಪಲ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.