HomePage_Banner
HomePage_Banner
HomePage_Banner
HomePage_Banner

ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಭಜನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮಂದಿರದ ಸಂಸ್ಥಾಪಕರಾದ ದಿ.ದೂಮಣ್ಣ ಗೌಡರವರ ಭಾವಚಿತ್ರ ಅನಾವರಣ


ಪುತ್ತೂರು: ಸರ್ವೆ ಗ್ರಾಮದ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಕದಿರು ವಿತರಣೆ ನಡೆಯಿತು. ತಿಮ್ಮಣ್ಣ ರೈ ಬೊಟ್ಯಾಡಿಗುತ್ತು ಹಾಗೂ ಶೀಲಾವತಿ ಸಂಜೀವ ಶೆಟ್ಟಿ ಆಲೇಕಿ ಅವರು ಭಜನಾ ಕಾರ್ಯಕ್ರಮದ ಸೇವಾಕರ್ತರಾಗಿದ್ದರು.


ಶ್ರೀರಾಮ ಭಜನಾ ಮಂದಿರದ ಸಂಸ್ಥಾಪಕರಾದ ದಿ.ದೂಮಣ್ಣ ಗೌಡರವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಮಂದಿರದ ಕಾರ್ಯಾಲಯದಲ್ಲಿ ಅವರ ಭಾವಚಿತ್ರವನ್ನು ಹಿರಿಯರಾದ ತಿಮ್ಮಪ್ಪ ಗೌಡರವರು ಅನಾವರಣಗೊಳಿಸಿದರು. ತಿಮ್ಮಣ್ಣ ರೈ ಬೊಟ್ಯಾಡಿಗುತ್ತು ನುಡಿನಮನ ಸಲ್ಲಿಸಿದರು. ಶ್ರೀರಾಮ ಭಜನಾ ಮಂದಿರದ ಸಂಸ್ಥಾಪಕರಾದ ದಿ.ದೂಮಣ್ಣ ಗೌಡರವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಮಂದಿರಕ್ಕೆ ಬರುವ ಭಕ್ತರ ಬಳೆಕೆಗಾಗಿ ಅವರ ಪುತ್ರ ನಿವೃತ್ತ ಎಎಸ್ಸೈ ಜನಾರ್ಧನ ಗೌಡ ಭಕ್ತಕೋಡಿ ಅವರು 40,000 ರೂ.ಗಳ ವೆಚ್ಚದ ಟಾಯ್ಲೆಟ್ ನಿರ್ಮಿಸಿ ಮಂದಿರಕ್ಕೆ ಕೊಡುಗೆಯಾಗಿ ನೀಡಿದ್ದು ಅದನ್ನು ಹಿರಿಯರಾದ ತಿಮ್ಮಪ್ಪ ಗೌಡ ಭಕ್ತಕೋಡಿ ಉದ್ಘಾಟಿಸಿದರು. ಅರ್ಚಕರಾದ ಕೃಷ್ಣ ಅಡಿಗರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು, ಉಪಾಧ್ಯಕ್ಷ ಜನಾರ್ಧನ ಗೌಡ ಭಕ್ತಕೋಡಿ, ಕಾರ್ಯದರ್ಶಿ ರಾಜೇಶ್ ಎಸ್.ಡಿ, ಖಜಾಂಜಿ ರಿತೇಶ್ ರೈ ಬಾವ, ಆಡಳಿತ ಸಮಿತಿ ಸದಸ್ಯರು, ಭಜಕರು, ಗ್ರಾಮಸ್ಥರು ಭಾಗವಹಿಸಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.