HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಸಾಹುಕಾರ ಮನೆತನದ ಯು.ವಿ. ಭಟ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಸಾಹುಕಾರ ಮನೆತನದ ಹಿರಿಯ ವ್ಯಕ್ತಿ, ಪ್ರೆಸ್ಟೋ ಆಹಾರ ಉದ್ಯಮದ ಸಂಸ್ಥಾಪಕ ಯು.ವಿ. ಭಟ್ (86 ವ.) ಕೆಲ ದಿನಗಳ ಅನಾರೋಗ್ಯದಿಂದ ಮಂಗಳೂರು ಅತ್ತಾವರದಲ್ಲಿರುವ ಅವರ ಮನೆಯಲ್ಲಿ ಸೆ. 10ರಂದು ನಿಧನ ಹೊಂದಿದರು.
ಉಪ್ಪಿನಂಗಡಿ ರಥಬೀದಿಯಲ್ಲಿ ಸಂತಾನ ಗೋಪಾಲಕೃಷ್ಣ ದೇವಾಲಯವನ್ನು ಹೊಂದಿರುವ ಮನೆಯಲ್ಲಿ ಖಾಯಂ ವಾಸ್ತವ್ಯ ಹೊಂದಿದ್ದ ಇವರು, ಆಹಾರ ಉದ್ಯಮದಿಂದ ವಿರಮಿಸಿದ ಬಳಿಕ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುವ ಮೂಲಕ ಜನಾನುರಾಗಿಯಾಗಿದ್ದರು.

ಹುಟ್ಟೂರ ಹಾಗೂ ತಾನು ಕಲಿತ ಉಪ್ಪಿನಂಗಡಿ ಸರಕಾರಿ ಮಾದರಿ ಶಾಲೆಯನ್ನು ದತ್ತು ಸ್ವೀಕರಿಸಿ ಸುಮಾರು 80 ಲಕ್ಷ ರೂಪಾಯಿ ವೆಚ್ಚದ ಸುಸಜ್ಜಿತ ಶಾಲಾ ಕಟ್ಟಡವನ್ನು ಉದಾರವಾಗಿ ನಿರ್ಮಿಸಿಕೊಟ್ಟ ಇವರು, ಬಳಿಕದ ದಿನಗಳಲ್ಲಿ ಉಪ್ಪಿನಂಗಡಿಯ ವೀರಾಂಜನೇಯ ದೇವಾಲಯವನ್ನು ಶಿಲಾಮಯವಾಗಿ ಪುನರ್ ನಿರ್ಮಿಸಿದ್ದರು. ಹುಟ್ಟೂರ ಸ್ಮಶಾನವನ್ನು ಸುಸಜ್ಜಿತವಾಗಿ ಪುನರ್ ನಿರ್ಮಿಸಿದ ಇವರು, ಪರಿಸರದ ಹಲವಾರು ಶಾಲೆಗಳಿಗೆ ಧಾರ್ಮಿಕ ಕೇಂದ್ರಗಳಿಗೆ ಯಥೇಚ್ಚಾ ಧನ ಸಹಾಯ ನೀಡಿ ಸಹಕಾರ ನೀಡಿದ್ದರು. ಮೃತ ದೇಹವನ್ನು ಉಪ್ಪಿನಂಗಡಿಯ ಅವರ ಮೂಲ ಮನೆಗೆ ತಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಉಪ್ಪಿನಂಗಡಿಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಮೃತರು ಪತ್ನಿಯನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.