HomePage_Banner
HomePage_Banner
HomePage_Banner
HomePage_Banner

ಕೊಯಿಲ-ಗಂಡಿಬಾಗಿಲು ರಸ್ತೆ ಕಾಮಗಾರಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರಸ್ತೆ ಅಭಿವೃದ್ಧಿಗೆ ಆಯಾ ಪ್ರದೇಶದ ಜನರ ಸಹಕಾರ ಅಗತ್ಯ-ಅಂಗಾರ

ಉಪ್ಪಿನಂಗಡಿ: ರಸ್ತೆಗಳ ಅಭಿವೃದ್ಧಿ, ಅಗಲೀಕರಣ ಸಂದರ್ಭದಲ್ಲಿ ಕೆಲವೊಂದು ಕಡೆಗಳಲ್ಲಿ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡು ರಸ್ತೆ ಅಭಿವೃದ್ಧಿ ಮಾಡುವಾಗ ತೊಂದರೆಗಳನ್ನು ಕೊಡುವುದು ಸರಿ ಅಲ್ಲ, ನಮ್ಮ ಊರಿನ, ನಮ್ಮ ಗ್ರಾಮದ ರಸ್ತೆ ಅಭಿವೃದ್ಧಿ, ಅಗಲೀಕರಣ ಆಗುವಾಗ ಆಯಾ ಪ್ರದೇಶದ ಜನರು ಮುಂದೆ ಬಂದು ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಬಂದರು, ಮೀನುಗಾರಿಕಾ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಅವರು ಸೆ.11ರಂದು ಕೊಲ-ಗಂಡಿಬಾಗಿಲು-ಉಪ್ಪಿನಂಗಡಿ ಸಂಪರ್ಕದ ಕೊಲದಿಂದ ಗಂಡಿಬಾಗಿಲು ತನಕ 1 ಕಿ.ಮೀ. ರಸ್ತೆ 1 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲೀಕರಣಗೊಂಡು ಮರು ಡಾಂಬಂರೀಕರಣ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು. ಬಿ.ಜೆಪಿ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅತ್ಯಂತ ಗ್ರಾಮೀಣ ಭಾಗದ, ಅದರಲ್ಲೂ ತೀರಾ ಹಿಂದುಳಿದ ಪ್ರದೇಶಗಳ ರಸ್ತೆಗಳನ್ನು ಆದ್ಯತೆ ನೆಲೆಯಲ್ಲಿ ಅಭಿವೃದ್ಧಿಗೊಳಿಸುತ್ತಿದ್ದು, ಕೊಯಿಲ ಗ್ರಾಮವೊಂದರಲ್ಲೇ ಬಹಳ ಕಾಲದಿಂದ ಅಭಿವೃದ್ಧಿ ಕಾಣದ ಈ ರಸ್ತೆಯ ಸಹಿತ ವಲಕಡಮ, ಸಬಲೂರು, ಕೆ.ಸಿ. ಫಾರ್ಮ್ ರಸ್ತೆಯನ್ನೂ ಅಭಿವೃದ್ಧಿಗೊಳಿಸಲು ಅನುದಾನ ಇಡಲಾಗಿದೆ, ಈ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಆಯಾ ಗ್ರಾಮದ ಮಂದಿಯ ಸಹಕಾರ ಅತೀ ಅಗತ್ಯ ಎಂದು ಹೇಳಿದರು.

ಕಾರ್‍ಯಕ್ರಮದಲ್ಲಿ ಬಿಜೆಪಿ. ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ರಾವ್ ಆತೂರು, ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಉಪಾಧ್ಯಕ್ಷೆ ಕಮಲಾಕ್ಷಿ ಪಾಜಲಿಕೆ, ಸದಸ್ಯರಾದ ಚಿದಾನಂದ ಪಾನ್ಯಾಲು, ಸೀತಾರಾಮ ಗೌಡ, ಚಂದ್ರಶೇಖರ ಮಾಳ, ನಝೀರ್ ಪೂರಿಂಗ, ಹಸನ್ ಸಜ್ಜದ್, ಆಲಂಕಾರು ಸಿ.ಎ. ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ನೆಲ್ಯಾಡಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಸದಾಶಿವ ಶೆಟ್ಟಿ ಮಾರಂಗ, ಕಡಬ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಂತಿ ಆರ್. ಗೌಡ, ಮಾಜಿ ಸದಸ್ಯೆ ತೇಜಶ್ವಿನಿ ಕಟ್ಟಪುಣಿ, ಕೊಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಮತಾ ಆನೆಗುಂಡಿ, ವಿನೋದರ ಮಾಳ, ಕೊಲ ಸದಾಶಿವ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಶ್ರೀರಾಮ, ಮುರಳಿಕೃಷ್ಣ, ಗಂಡಿಬಾಗಿಲು ಮಸೀದಿ ಕಾರ್‍ಯದರ್ಶಿ ಜಿ. ಮಹಮ್ಮದ್ ರಫೀಕ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಸ್. ಅಬ್ದುಲ್ ರಹಿಮಾನ್, ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು.

ಕೊಯಿಲ ಸದಾಶಿವ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಸ್ವಾಗತಿಸಿ, ಕೊಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.