HomePage_Banner
HomePage_Banner
HomePage_Banner
HomePage_Banner

ಪಾಲ್ತಾಡಿ: ಒಕ್ಕಲಿಗ ಸ್ವ ಸಹಾಯ ಗುಂಪುಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪಾಲ್ತಾಡಿ:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಒಕ್ಕಲಿಗ ಸ್ವ ಸಹಾಯ ಗುಂಪುಗಳ ಒಕ್ಕೂಟ ಪಾಲ್ತಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಸ 5 ರಂದು ಅಲ್ಯಾಡಿ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆಯಿತು, ಒಕ್ಕೂಟದ ನೂತನ ಅಧ್ಯಕ್ಷರಾಗಿ ಜಯರಾಮ ಗೌಡ ದೊಡ್ಡಮನೆ ಪಾಲ್ತಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ಅಂಗಡಿಹಿತ್ಳು, ಉಪಾಧ್ಯಕ್ಷರಾಗಿ ರಾಕೇಶ್ ಗೌಡ ಬೊಳಿಕ್ಕಳ,ಕಾರ್ಯದರ್ಶಿಯಾಗಿ ಕಮಲ ದೇವಳಿಕೆ, ಕೋಶಾಧಿಕಾರಿ ಯಾಗಿ ಗಣೇಶ್ ಎ ಟಿ ಅಮೆಚೊಡು ಇವರನ್ನು ಆಯ್ಕೆಗೊಳಿಸಲಾಯಿತು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಎ ವಿ ನಾರಾಯಣ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿ ಸ್ವ ಸಹಾಯ ಸಂಘಗಳ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿ, ಸಮಾಜವನ್ನು ಒಗ್ಗೂಡಿಸುವಂತೆ ಒಕ್ಕೂಟ ಕಾರ್ಯನಿರ್ವಹಿಸಬೇಕು ಎಂದರು, ಟ್ರಸ್ಟ್ ನ ಮೇಲ್ವಿಚಾರಕ ವಿಜಯಕುಮಾರ್ ಒಕ್ಕೂಟದ ಕಾರ್ಯಸೂಚಿಯ ಬಗ್ಗೆ ವಿವರಿಸಿದರು,ಒಕ್ಕಲಿಗ ಗೌಡ ಸೇವಾ ಸಂಘದ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಅಂಗಡಿಹಿತ್ಳು ಮಾತನಾಡಿ ಸ್ವ ಸಹಾಯ ಸಂಘಗಳ ಮೂಲಕ ಸದಸ್ಯರು ಸ್ವಾವಲಂಬಿ ಜೀವನ ನಡೆಸುವಂತಗಬೇಕು ಎಂದರು.

ಜಯರಾಮ ಗೌಡ ದೊಡ್ಡಮನೆ ಪಾಲ್ತಾಡಿ
 
 
ಗೀತಾ ಅಂಗಡಿಹಿತ್ಳು

ನಿಕಟಪೂರ್ವ ಅಧ್ಯಕ್ಷ ಜನಾರ್ಧನ ಗೌಡ ‘ಶಿವಕೃಪಾ’ ಮಾತನಾಡಿ ಮೂರು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲ ಸದಸ್ಯರಿಗೂ ಕ್ರತಜ್ಞತೆ ಸಲ್ಲಿಸಿದರು ನೂತನ ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ ಎಲ್ಲಾ ಸದಸ್ಯರುಗಳು ಸಹಕಾರ ನೀಡುವಂತೆ ವಿನಂತಿಸಿದರು.

ರಾಕೇಶ್ ಗೌಡ ಬೋಳಿಕ್ಕಳ
 
ಗಣೇಶ್ ಗೌಡ ಆಮೆಚೋಡು
 
ಕಮಲ ದೇವಳಿಕೆ

ಅಧಿಕಾರ ಹಸ್ತಾಂತರ: ಹಿಂದಿನ ಅವಧಿಯ ಪದಾಧಿಕಾರಿಳಾದ ಜನಾರ್ಧನ ಗೌಡ ‘ಶಿವಕೃಪಾ’,ಹೊನ್ನಪ್ಪ ಗೌಡ ಜಾರಿಗೆತ್ತಡಿ ಬಂಬಿಲ,ರಾಮಣ್ಣ ಗೌಡ ಪಳ್ಳತಡ್ಕ ನೂತನ ಪದಾಧಿಕಾರಿಗಳಿಗೆ ಒಕ್ಕೂಟ ನಿರ್ಣಯ ಪುಸ್ತಕ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು, ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ದ ಮಾಜಿ ಕುಂಬ್ರ ವಲಯ ಉಸ್ತುವಾರಿ ಸಂಜೀವ ಗೌಡ ಪಾಲ್ತಾಡಿ,ಸ್ವ ಸಹಾಯ ಸಂಘಗಳ ಪ್ರಬಂಧಕ ಮತ್ತು ಸಯೋಜಕರು ಗಳು ಸದಸ್ಯರು ಉಪಸ್ಥಿತರಿದ್ದರು. ಲೋಕಯ್ಯ ಗೌಡ ಪರಣೆ ಪ್ರಾರ್ಥಿಸಿದರು, ಜಯರಾಮ ಗೌಡ ಸ್ವಾಗತಿಸಿದರು, ಶ್ರೀಕಾಂತ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.