HomePage_Banner
HomePage_Banner
HomePage_Banner
HomePage_Banner

ಕುಮ್ಕಿ, ಡೀಮ್ಡ್ ಫಾರೆಸ್ಟ್ , ಕನ್ವರ್ಷನ್ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು – ಎಸ್.ಅಂಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು : ಕಾನ,ಬಾನ,ಕುಮ್ಕಿ,ಡೀಮ್ಡ್ ಫಾರೆಸ್ಟ್ ,ಕನ್ವರ್ಷನ್ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು. ಅವರು ಕಾಣಿಯೂರಿನ ಬೆದ್ರಂಗಳದಲ್ಲಿ ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಬೆದ್ರಂಗಳ ಅವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ಪಕ್ಷವು ಹಿರಿಯರ ಶ್ರಮದಿಂದಾಗಿ ಇಂದು ಬೆಳೆದಿದೆ. ಗುರೂಜಿ, ಶ್ಯಾಮ್ ಪ್ರಕಾಶ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಜನಸಂಘದ ಹಿರಿಯ ತ್ಯಾಗದ ಫಲವಾಗಿ ನಾವಿಂದು ಅಽಕಾರ ಅನುಭವಿಸುವಂತಾಗಿದೆ. ಪಕ್ಷವನ್ನು ಬೆಳೆಸಿದ ಹಿರಿಯರನ್ನು ನಾವು ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು. ಪ್ರತೀ ಗ್ರಾಮಕ್ಕೆ ಸಂಪರ್ಕ ರಸ್ತೆ ಕಲ್ಪಿಸುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ರಸ್ತೆ, ಸುಂದರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಜಪೇಯಿ ಯವರಿಂದ ಮೊತ್ತ ಮೊದಲ ಬಾರಿಗೆ ಆರಂಭ ಮಾಡಿ ದೇಶದ ಉದ್ದಗಲದಲ್ಲಿ ರಸ್ತೆ ನಿರ್ಮಾಣವಾಯಿತು. ಜನಧನ್, ಫಸಲ್ ವಿಮಾ ಯೋಜನೆ, ದೀನ್ ದಯಾಳ್ ವಿದ್ಯುದ್ದೀಕರಣ, ಉಚಿತ ಉಜ್ವಲ ಗ್ಯಾಸ್,ಕೃಷಿ ಸಮ್ಮಾನ್ ಮುಂತಾದ ಹಲವಾರು ಯೋಜನೆಗಳನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು ಕಾಂಗ್ರೆಸ್ ಸೇರಿದಂತೆ ಅನೇಕ ಜನಸಾಮಾನ್ಯರು ಅದರ ಲಾಭ ಪಡೆದುಕೊಂಡಿದ್ದಾರೆ. ಅದರೆ ಅದನ್ನು ನಾವು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಹಿಂದೆ ಅನೇಕ ಒಳ್ಳೆಯ ಕೆಲಸ ಮಾಡಿದ್ದರೂ ವಾಜಪೇಯಿಯವರ ಸರ್ಕಾರ ಕೂಡಾ ಸೋತಿದೆ. ಸರ್ಕಾರದ ಯೋಜನೆಗಳನ್ನು ಮನೆಮನೆಗೆ ಮುಟ್ಟಿಸುವ ಕೆಲಸ ನಮ್ಮ ಕಾರ್ಯಕರ್ತರು ಮಾಡಬೇಕು ಎಂದರು.

ವೇದಿಕೆಯಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸುಭೋದ್ ಶೆಟ್ಟಿ ಮೇನಾಲ, ಬೆಳಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಬಿಜೆಪಿ ಕಾಣಿಯೂರು ಶಕ್ತಿ ಕೇಂದ್ರದ ಪ್ರಮುಖ್ ಧನಂಜಯ ಕೇನಾಜೆ, ಸಹಪ್ರಮುಖ್ ಸುರೇಶ್ ಓಡಬಾಯಿ, ಕಾಣಿಯೂರು ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೆದ್ರಂಗಳ ಮೊದಲಾದವರಿದ್ದರು. ಗ್ರಾ.ಪಂ, ಸದಸ್ಯರಾದ ಪ್ರವೀಣ್‌ಚಂದ್ರ ರೈ ಕುಮೇರು ಸ್ವಾಗತಿಸಿ, ರಾಮಣ್ಣ ಗೌಡ ಮುಗರಂಜ ವಂದಿಸಿದರು. ಮಂಡಲ ಸಮಿತಿ ಸದಸ್ಯ ಶಿವರಾಮ ರೈ ಪಿಜಕ್ಕಳ ಕಾರ್ಯಕ್ರಮ ನಿರೂಪಿಸಿದರು.

ನಾಮಫಲಕ ಹಸ್ತಾಂತರ: ಈ ಸಂದರ್ಭದಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಮಿತಿ ಅಧ್ಯಕ್ಷರ ನಾಮಫಲಕವನ್ನು ಹಸ್ತಾಂತರಿಸಲಾಯಿತು. ದೋಳ್ಪಾಡಿ ಬೂತ್ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಕಾಣಿಯೂರು ಬೂತ್ ಸಮಿತಿ ಅಧ್ಯಕ್ಷ ಸುಂದರ ಬೆದ್ರಾಜೆ, ಚಾರ್ವಾಕ ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ದೇವಿನಗರ ಹಾಗೂ ನಾಣಿಲ ಬೂತ್ ಸನಿತಿ ಅಧ್ಯಕ್ಷ ವೀರಪ್ಪ ಗೌಡ ಉದ್ಲಡ್ಡ ಇವರಿಗೆ ಸಚಿವ ಎಸ್ ಅಂಗಾರ ಅವರು ನಾಮಫಲಕವನ್ನು ಹಸ್ತಾಂತರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.