ಉದನೆ: ಗಣಪತಿ ಕಟ್ಟೆ ಹಾನಿಗೈದ ಪ್ರಕರಣ – ಆರೋಪಿಯ ಬಂಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಡಬ ತಾಲೂಕಿನ ಕೊಣಾಜೆ ಗ್ರಾಮದ ಉದನೆ ಪರುಶುರಾಮ್ ಮೈದಾನ ಗಣಪತಿ ಕಟ್ಟೆಯೊಳಗೆ ಕಿಡಿಗೇಡಿಗಳು ಅಕ್ರಮ ಪ್ರವೇಶ ಮಾಡಿ ಗಣಪತಿ ಕಟ್ಟೆಯ ಮೆಟ್ಟಿಲು, ಗೋಡೆ ಆವರಣವನ್ನು ಕಲ್ಲಿನಿಂದ ಗುದ್ದಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿ ಬಿಹಾರ್ ರಾಜ್ಯದ ಬಾಗಲ್‌ಪುರ್ ಜಿಲ್ಲೆಯ ಸುದಾಮ್ ಗೋಪಾಲ್ ಪುರ್ ತಾಲೂಕಿನ ಗರ್ನಿಯ ನಿವಾಸಿ ರವೀಂದ್ರ(೨೫ವ)ರವರು ಎಂದು ಗುರುತಿಸಲಾಗಿದೆ. ಘಟನೆ ನಡೆದ ಬಳಿಕ ಪೊಲೀಸರು ಉದನೆಗೆ ಬೇಟಿ ನೀಡಿ ಮಹಜರು ತಯಾರಿಸಿದಾಗ ಅಲ್ಲಿ ರೂ. 50ನೋಟಿನ ತುಣುಕುಗಳು ಬಿದ್ದುಕೊಂಡಿದ್ದು ಅದನ್ನು ಸ್ವಾಧೀನ ಪಡಿಸಿಕೊಂಡು, ಆರೋಪಿ ಪತ್ತೆ ಬಗ್ಗೆ ವಿಶೇಷ ಕರ್ತವ್ಯದಲ್ಲಿದ್ದ ಹೆಡ್‌ಕಾನ್‌ಸ್ಟೇಬಲ್ ಹಿತೋಷ್ ಕುಮಾರ್, ಕಾನ್‌ಸ್ಟೇಬಲ್ ಯೋಗರಾಜ್ ಅವರು ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡೊಳೆ ಎಂಬಲ್ಲಿ ಇದ್ದ ಆರೋಪಿಯನ್ನು ಪತ್ತೆ ಮಾಡಿ ಠಾಣೆಗೆ ಹಾಜರುಪಡಿಸಿದ್ದರು. ಆರೋಪಿಯನ್ನು ವಿಚಾರಿಸಿದಾಗ ಈತ ರವೀಂದ್ರ ಕುಮಾರ್ ಎಂದು ತಿಳಿದು ಆತನ ಬರ್ಮುಡ ಚಡ್ಡಿಯಲ್ಲಿ ರೂ. 50  ಮುಖ ಬೆಲೆಯ ಹರಿದ ತುಣುಕುಗಳು ದೊರೆತಿದ್ದು, ಇದೇ ಆರೋಪಿಯು ಉದನೆ ಪೇಟೆಯಲ್ಲಿ ಅಟೋರಿಕ್ಷಾ ಚಾಲಕನೊನ್ನಬ್ಬಗೆ ಕಲ್ಲು ಎಸೆದ ಬಗ್ಗೆ ಮಾಹಿತಿ ಕಲೆಹಾಕಿ ರಿಕ್ಷಾ ಚಾಲಕ ವಿಕ್ರಮ್ ಎಂಬವರನ್ನು ಪ್ರಶ್ನಿಸಿದಾಗ ಅವರು ಆರೋಪಿ ಕಲ್ಲು ಎಸೆದ ಕುರಿತು ಮಾಹಿತಿ ನೀಡಿದ್ದರು. ಇದರ ಆದಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.