HomePage_Banner
HomePage_Banner
HomePage_Banner
HomePage_Banner

ನೇರ ನೇಮಕಾತಿ ಇಲ್ಲವೇ ನೇರ ವೇತನ ಪಾವತಿಸುವಂತೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ಪೌರ ಕಾರ್ಮಿಕರ ಸಂಘದಿಂದ ಶಾಸಕರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಹೊರಗುತ್ತಿಗೆ ಆಧಾರದಲ್ಲಿ ತ್ಯಾಜ್ಯ ಸಾಗಿಸುವ ವಾಹನ ಚಾಲಕರು, ವಾಟರ್‌ಮೆನ್, ಡಾಟಾ ಎಂಟ್ರಿ/ಕಂಪ್ಯೂಟರ್ ಆಪರೇಟರ್‌ಗಳು, ಒಳಚರಂಡಿ ಕಾರ್ಮಿಕರು, ಲ್ಯಾಂಡ್‌ ಫಿಲ್ಲಿಂಗ್ ಕಾರ್ಮಿಕರು, ಸಹಾಯಕರು, ಸ್ಮಶಾನ ಕಾವಲುಗಾರರಿಗೆ ನೇರ ನೇಮಕಾತಿ ಇಲ್ಲವೇ ನೇರ ವೇತನ ಪಾವತಿಸುವಂತೆ ಈ ಹಿಂದೆ ರಾಜ್ಯಾದ್ಯಂತ ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಇದೀಗ ಅಧಿವೇಶನದಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸುವಂತೆ ಪುತ್ತೂರು ನಗರಸಭೆ ಪೌರಕಾರ್ಮಿಕರ ಸಂಘದ ನಿಯೋಗ ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಲಾಯಿತು.

ಅತ್ಯಂತ ನೈರ್ಮಲ್ಯ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಈ ನೌಕರರಿಗೆ ನೇರ ವೇತನ ಜಾರಿಗೊಳಿಸುವಂತೆ ಕೋರುತ್ತೇವೆ. ಅತ್ಯಂತ ಅಪಾಯಕಾರಿ ತ್ಯಾಜ್ಯದೊಂದಿಗೆ ಬದುಕು ದೂಡುವ ಈ ವರ್ಗಕ್ಕೆ ಸೇವಾ ಭದ್ರತೆ ಒದಗಿಸುವುದು ಮಾನವೀಯ ನೆಲೆಯಲ್ಲಿ ಅತ್ಯಗತ್ಯ ಮಹತ್ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರಕಾರದಿಂದ ನಮಗೆ ನೇರ ನೇಮಕಾತಿ ಇಲ್ಲವೇ ನೇರ ವೇತನ ಪಾವತಿಸುವಂತೆ ಸೌಲಭ್ಯ ಒದಗಿಸುವಂತೆ ಅವರು ಮನವಿಯಲ್ಲಿ ತಿಳಿಸಿದರು. ನಿಯೋಗದಲ್ಲಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಚಾಲಕ ಸದ್ದಾಂಹುಸೈನ್, ಸದಸ್ಯ ಶರತ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.