HomePage_Banner
HomePage_Banner
HomePage_Banner
HomePage_Banner

ಮುಂಡಾಳಗುತ್ತು ಕುಟುಂಬದ ‘ಉತ್ಕೃಷ್ಟ ಶ್ರೇಷ್ಠ ವ್ಯಕ್ತಿ – ಬೊಳ್ಳಿ ಬೊಲ್ಪು’ ಮುಂಡಾಳಗುತ್ತು ಡಾ. ತಿಮ್ಮಪ್ಪ ರೈಯವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಡಾ. ತಿಮ್ಮಪ್ಪ ರೈ ಮುಂಡಾಳಗುತ್ತಿನ ‘ಬೊಳ್ಳಿ ಬೊಲ್ಪು’ – ಕಡಮಜಲು

ಮುಂಡಾಳಗುತ್ತು ಮನೆತನದಲ್ಲಿ ಅನೇಕ ಹಿರಿಯರು ಶ್ರೇಷ್ಠ ಸಾಧನೆ‌ ಮಾಡಿದವರಿದ್ದಾರೆ. ಅವರ ಸಾಲಿಗೆ ಡಾ. ತಿಮ್ಮಪ್ಪ ರೈಯವರೂ ಸೇರುತ್ತಾರೆ. ಕುಟುಂಬಕ್ಕೆ ಬೆಳಕಾಗಿ ಮೂಡಿಬಂದ ಡಾ. ತಿಮ್ಮಪ್ಪ ರೈಯವರಿಗೆ ‘ಬೊಳ್ಳಿ ಬೊಲ್ಪು’ ಬಿರುದು ನೀಡಿ ಗೌರವಿಸುತ್ತಿದ್ದೇವೆ. ಅವರ 90 ರ ಹುಟ್ಟುಹಬ್ಬವನ್ನು ವೈಭವೋಪೇತವಾಗಿ ನಡೆಸಲು ಯೋಜಿಸಲಾಗಿತ್ತಾದರೂ ಕೋವಿಡ್ ನಿಂದಾಗಿ ಅದು ಫಲಗೂಡಲಿಲ್ಲ. ಇವತ್ತು ಆ ಗೌರವವನ್ನು ಸಾಂಕೇತಿಕವಾಗಿ ಅವರಿಗೆ ನೀಡಿದ್ದೇವೆ. ಅವರು ಶತಾಯುಷಿಯಾಗಿ ಬದುಕಬೇಕು. ಅವರ ಶತಮಾನೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ದೇವರು ನಮಗೆಲ್ಲಾ ಶಕ್ತಿ ನೀಡುವಂತಾಗಲಿ ಎಂದು ಕಡಮಜಲು ಸುಭಾಸ್ ರೈ ಹೇಳಿದರು.

ಪುತ್ತೂರು: ಮುಂಡಾಳಗುತ್ತು ಮನೆತನದ ಕೀರ್ತಿಯನ್ನು ನಾಡಿನೆತ್ತರಕ್ಕೆ ಏರಿಸಿದ ನಿವೃತ್ತ ಪಶುವೈದ್ಯರೂ, ಸಹಾಯಕ ಪ್ರಾಧ್ಯಾಪಕರೂ ಆದ ಮುಂಡಾಳಗುತ್ತು ಡಾ. ತಿಮ್ಮಪ್ಪ ರೈಯವರಿಗೆ ಮುಂಡಾಳಗುತ್ತು ತರವಾಡು ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಕುಟುಂಬಿಕರ, ಬಂಧು‌ಮಿತ್ರರ ಪರವಾಗಿ 90 ರ ಹುಟ್ಟುಹಬ್ಬದ ಸನ್ಮಾನ ಸೆ. 11 ರಂದು ಮುಂಡಾಳಗುತ್ತು ತರವಾಡಿನಲ್ಲಿ ಸರಳವಾಗಿ ನಡೆಯಿತು.

ನಾಯಿಲ ಕೃಷ್ಣ ರೈ ಮತ್ತು ಮುಂಡಾಳಗುತ್ತು ಸುಹಾಸಿನಿ ರೈ ದಂಪತಿ ಶಾಲು ಹೊದಿಸಿ, ಕುಟುಂಬದ ಯಜಮಾನ, ನಿವೃತ್ತ ಡಿವೈಎಸ್ಪಿ ಮುಂಡಾಳಗುತ್ತು ಶಾಂತರಾಮ ರೈಯವರು ಪೇಟ ತೊಡಿಸಿ, ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈ ದಂಪತಿ ಹೂಹಾರ ಹಾಕಿ, ಬೂಡಿಯಾರ್ ರಾಧಾಕೃಷ್ಣ ರೈ ರವರು ಫಲಪುಷ್ಪ ನೀಡಿ ಡಾ. ತಿಮ್ಮಪ್ಪ ರೈ ಮತ್ತು ಜಯಂತಿ‌ ತಿಮ್ಮಪ್ಪ ರೈ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.


ಸನ್ಮಾನಿತರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದ ಮುಂಡಾಳಗುತ್ತು ತರವಾಡು ದೈವಸ್ಥಾನ ವ್ಯವಸ್ಥಾಪನಾ ಸಮಿತಿಯ ಗೌರವ ಕಾರ್ಯದರ್ಶಿ ಕಡಮಜಲು ಸುಭಾಸ್ ರೈಯವರು ‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಎಂದು ಪುರಂದರದಾಸರು ಹಾಡಿರುವಂತೆ ಮುಂಡಾಳಗುತ್ತಿನ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ ಮುಂಡಾಳಗುತ್ತು ಡಾ. ತಿಮ್ಮಪ್ಪ ರೈ ಯವರು ಮನೆತನದ ಉತ್ಕೃಷ್ಟ ಶ್ರೇಷ್ಠ ವ್ಯಕ್ತಿಯಾಗಿದ್ದು, ಅವರನ್ನು ಗೌರವಿಸುವುದು ನಮ್ಮೆಲ್ಲರ ಭಾಗ್ಯ. ಈ ಮಣ್ಣಿನ ಭೋಗವನ್ನು ಹೆಚ್ಚಿಸಿರುವ ಅವರ ಸಾಧನೆಯ ಕ್ಷೇತ್ರಗಳು ಹಲವಾರು ಇವೆ. ಅವರ ಮಾರ್ಗದರ್ಶನದಲ್ಲಿ ಮುಂಡಾಳಗುತ್ತು ತರವಾಡಿನ ಜೀರ್ಣೋದ್ಧಾರ ಆಗಿ‌ ನಾವೆಲ್ಲಾ ಸುಖೀ ಸಂಸಾರದ ಬದುಕು‌ ನಡೆಸಲು ಕಾರಣೀಭೂತರಾದವರು ಡಾ. ರೈಯವರು. ಅವರಿಂದಾಗಿ ನಾವೆಲ್ಲಾ ಸಂತೋಷದ ಜೀವನ ನಡೆಸುವಂತಾಗಿದೆ’ ಎಂದು ಹೇಳಿ ‘ಡಾ. ರೈಯವರ ಜಯದ ಹಿಂದೆ ಅವರ ಧರ್ಮಪತ್ನಿ ಜಯಂತಿ ರೈಯವರ ಪಾತ್ರ ಅಮೋಘವಾದುದು’ ಎಂದರು.


ಮುಂಡಾಳಗುತ್ತು ತರವಾಡು ಯಜಮಾನ, ನಿವೃತ್ತ ಡಿವೈಎಸ್ಪಿ ಮುಂಡಾಳಗುತ್ತು ಶಾಂತರಾಮ ರೈವರು ಮಾತನಾಡಿ ‘ಡಾ. ರೈಯವರು ಬೆಂಗಳೂರಿನಲ್ಲಿ ನೆಲೆಸಿದ್ದರೂ ಕುಟುಂಬದ ಮೇಲೆ ಅವರಲ್ಲಿದ್ದ ಪ್ರೀತಿ ಪ್ರೇಮ ಅತ್ಯಂತ ವಿಭಿನ್ನ. ಅವರನ್ನು ಗೌರವಿಸಿ ಆಶೀರ್ವಾದ ಪಡೆಯುವುದು ನಮಗೆ‌ ಹೆಮ್ಮೆ ಇದೆ’ ಎಂದರು.


ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಮಾತನಾಡಿ ‘ತಿಮ್ಮಪ್ಪ ರೈಯವರ ಜೀವನ ಧರ್ಮ ಮತ್ತು ಜಯಂತಿ ರೈಯವರ ಸೇವೆಯಿಂದಾಗಿ ಇವತ್ತು ಅವರ ಮಕ್ಕಳು, ಮರಿಮಕ್ಕಳು ಸಮಾಜದಲ್ಲಿ ಘನಸ್ಥಿಕೆಯ ಸ್ಥಾನಮಾನ ಹೊಂದಲು ಸಾಧ್ಯವಾಗಿದೆ. ಡಾ. ರೈಯವರದ್ದು ಮಕ್ಕಳು, ಮಧ್ಯಮ ಪ್ರಾಯ, ಹಿರಿಯರಿಗೂ ಹೊಂದಿಕೊಳ್ಳುವ ವ್ಯಕ್ತಿತ್ವವಾಗಿದೆ’ ಎಂದು ಹೇಳಿದರು.


ಡಾ. ತಿಮ್ಮಪ್ಪ ರೈಯವರ ಪುತ್ರಿ ಮಂಜುಳಾ ಸಂತೋಷ್ ರೈ ಮಾತನಾಡಿ ‘ನಮ್ಮ ತಂದೆಯವರು ನಮಗೆ ರೋಲ್ ಮಾಡೆಲ್. ಮಧ್ಯಮ ಕುಟುಂಬದವಾರದರೂ‌ ನಮ್ಮನ್ನು ಅತ್ಯಂತ ಶ್ರೀಮಂತ ಕುಟುಂಬದ ಮಕ್ಕಳಂತೆ ನೋಡಿಕೊಂಡಿದ್ದಾರೆ. ನಾವೆಲ್ಲಾ ಬೆಳೆದು ಬರಲು ನಮ್ಮ ತಂದೆಯೇ ಕಾರಣ. ಕುಟುಂಬದಲ್ಲಿ ಉತ್ತಮ ಸಂಬಂಧ ಬೆಳೆದು ಬರಲು ಅವರೇ ಕಾರಣರು. ಕುಟುಂಬಿಕರು ಸೇರಿ ಅವರಿಗೆ ಸನ್ಮಾನ ಮಾಡಿರುವುದು ನಮಗೆ ಹೆಮ್ಮೆ ತಂದಿದೆ’ ಎಂದರು.


ಸವಣೂರಿನ ಡಾ. ಬಿ. ಜಯರಾಮ ರೈರವರು ಮಾತನಾಡಿ ‘ಮುಂಡಾಳಗುತ್ತು ಕುಟುಂಬದ ಜೊತೆ ಇರುವ ಪ್ರೀತಿ ಸಂಬಂಧವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಡಾ. ತಿಮ್ಮಪ್ಪ ರೈಯವರ ಕುಟುಂಬದ ಪ್ರೇಮ ನಮಗೆಲ್ಲಾ ಆದರ್ಶವಾದುದು’ ಎಂದರು.

ಕಾಸರಗೋಡು ಕಿಮ್ಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.‌ ಜಿತೇಂದ್ರ ರೈ ಮಾತನಾಡಿ ‘ಬೆಂಗಳೂರಿನಲ್ಲಿ ಡಾ. ತಿಮ್ಮಪ್ಪ ರೈಯವರ ನಿವಾಸದಲ್ಲಿದ್ದಾಗ ನಾನು ನನ್ನ ಸ್ವಂತ ಮನೆಯ ಹಾಗೇ ಅನುಭವ ಪಡೆದವನು. ಡಾ. ರೈ ದಂಪತಿಯ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ’ ಎಂದರು‌.

ಡಾ. ತಿಮ್ಮಪ್ಪ ರೈಯವರ ಪುತ್ರರಾದ ಉದಯಶಂಕರ ರೈ, ಮನೋಜ್ ಕುಮಾರ್ ರೈ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.‌ ದೀಪಕ್ ರೈ, ಪುತ್ರಿ ಅರಿಯಡ್ಕ ಸೌಮ್ಯಮಣಿ ಜಯರಾಮ ರೈ, ಅಳಿಯಂದಿರಾದ ಸಾಹಿತಿ ಜಯರಾಮ ರೈ, ಸಂತೋಷ್ ರೈ, ಮೊಮ್ಮಕ್ಕಳು, ಮರಿಮಕ್ಕಳು, ಮುಂಡಾಳಗುತ್ತು ಕುಟುಂಬಿಕರು, ಬಂಧುಮಿತ್ರರು ಉಪಸ್ಥಿತರಿದ್ದು, ಡಾ. ತಿಮ್ಮಪ್ಪ ರೈ‌ ದಂಪತಿಯ ಆಶೀರ್ವಾದ ಪಡೆದರು‌.

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮುಂಡಾಳಗುತ್ತು ಪ್ರಶಾಂತ್ ರೈ ಪಂಜ ಡಾ. ತಿಮ್ಮಪ್ಪ ರೈಯವರ ಪರಿಚಯ ಮಾಡಿದರು. ಮುಂಡಾಳಗುತ್ತು ತರವಾಡು ದೈವಸ್ಥಾನ ವ್ಯವಸ್ಥಾಪನಾ ಸಮಿತಿಯ ಜೊತೆ ಕಾರ್ಯದರ್ಶಿ ಮುಂಡಾಳಗುತ್ತು ಮೋಹನ ಆಳ್ವರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ‘ಡಾ. ತಿಮ್ಮಪ್ಪ ರೈಯವರು ನಮ್ಮ ಕುಟುಂಬದ ಆಧುನಿಕ ಭೀಷ್ಮರಾಗಿದ್ದಾರೆ’ ಎಂದರು. ಮುಂಡಾಳಗುತ್ತು ವಿಶುಕುಮಾರ್ ರೈ ಬೆಂಗಳೂರು ವಂದನಾರ್ಪಣೆ ಮಾಡಿ ‘ಅಜ್ಜನ ಸನ್ಮಾನವನ್ನು ವಿಜೃಂಭಣೆಯಿಂದ ಮಾಡಬೇಕೆಂದಿತ್ತು. ಆದರೆ ಇಂದು ಆ ಯೋಗಭಾಗ್ಯ ನಮಗೆಲ್ಲಾ ಕೂಡಿಬಂತು’ ಎಂದು ಹೇಳಿ ಸರ್ವರಿಗೂ ಧನ್ಯವಾದ ಸಲ್ಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.