ಬನ್ನೂರಿನ ಪ್ರಜ್ಞಾ ಆಶ್ರಮಕ್ಕೆ ಕಾಯಕಲ್ಪ ನೀಡಿದ ಶಾಸಕ ಸಂಜೀವ ಮಠಂದೂರು – ಬನ್ನೂರು ಕರ್ಮಲದಿಂದ ಬೀರಮಲೆಗೆ ಶಿಫ್ಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಂದು ಬನ್ನೂರು ಕರ್ಮಲದಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಭೇಟಿ ನೀಡಿ ಮುಂದಿನ ವರ್ಷದೊಳಗೆ ಆಶ್ರಮಕ್ಕೆ ಸೂಕ್ತ ಕಾಯಕಲ್ಪ ನೀಡುವ ಆಶ್ವಾಸನೆಯಂತೆ ಶಾಸಕ ಸಂಜೀವ ಮಠಂದೂರು ಅವರು ಪ್ರಜ್ಞಾ ಆಶ್ರಮಕ್ಕೆ ಬೀರಮಲೆಯಲ್ಲಿನ ಕಟ್ಟಡವೊಂದರಲ್ಲಿ ಆಶ್ರಯ ನೀಡಿದ್ದಾರೆ.

ಬೀರಮಲೆಯಲ್ಲಿನ ದೂರದರ್ಶನ ನಿಯಂತ್ರಣದ ಹಳೆ ಕಟ್ಟಡವನ್ನು ಶಾಸಕರ, ನಗರಸಭೆ ಅಧ್ಯಕ್ಷರ ಮುತುವರ್ಜಿಯಲ್ಲಿ ಸಹಾಯಕ ಕಮೀಷನರ್ ಅವರ ಮೂಲಕ ಇದೀಗ ಪ್ರಜ್ಞಾ ಆಶ್ರಮಕ್ಕೆ ಆಶ್ರಯಕ್ಕಾಗಿ ನೀಡಲಾಗಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಸಂದರ್ಭ ಪ್ರಜ್ಞಾ ಆಶ್ರಮಕ್ಕೆ ಭೇಟಿ ಅಗತ್ಯ ವಸ್ತುಗಳನ್ನು ವಿತರಿಸಿದ ಬಳಿಕ ಅಲ್ಲಿನ ಪರಿಸ್ಥಿತಿಯನ್ನು ಅರಿತ ಶಾಸಕರು ಆಶ್ರಮಕ್ಕೆ ಸೂಕ್ತ ಕಾಯಕಲ್ಪ ನೀಡುವ ಕುರಿತು ಭರವಸೆ ನೀಡಿದ್ದರು. ಅದರಂತೆ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಈ ಕುರಿತು ಅಧಿಕಾರಿಗಳು ನೀಡಿದ ಮಾಹಿತಿಯಂತೆ ಬೀರಮಲೆಯಲ್ಲಿ ಖಾಲಿ ಕಟ್ಟಡಕ್ಕೆ ಸ್ಥಳಾಂತರಿಸುವ ನಿರ್ಣಯಕೈಗೊಂಡಿದ್ದರು. ಅದರಂತೆ ಸೆ.10ರಂದು ಗಣಪತಿ ಹೋಮದ ಮೂಲಕ ಪ್ರಜ್ಞಾ ಆಶ್ರಮ ಬನ್ನೂರಿನಿಂದ ಬೀರಮಲೆಗೆ ಶಿಫ್ಟ್ ಆಗಿದೆ. ಸೆ.12ರಂದು ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಭೇಟಿ ನೀಡಿ ಅಲ್ಲಿರುವ ಭೀನ್ನ ಚೇತನರ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್, ಎಪಿಎಂಸಿ ಸದಸ್ಯ ಕೃಷ್ಣಕುಮಾರ್ ರೈ, ಬಿಜೆಪಿ ಯುವ ಮೋರ್ಚಾದ ಗ್ರಾಮಾಂತರ ಮಂಡಲದ ಅಧ್ಯಕ್ಷ ಸುನಿಲ್ ದಡ್ಡು, ಶಿಕ್ಷಕಿ  ಶ್ರೀವಿದ್ಯಾ     ಶ್ರೀಕೃಷ್ಣ ಜೆ.ರಾವ್, ವೈಷ್ಣವಿ ಜೆ ರಾವ್, ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.


ಬಜರಂಗದಳದ ಕಾರ್ಯಕರ್ತರಿಂದ ಸ್ಥಳಾಂತರ ಸೇವೆ:
ಪ್ರಜ್ಞಾ ಆಶ್ರಮವನ್ನು ಬನ್ನೂರು ಕರ್ಮಲದಿಂದ ಸ್ಥಳಾಂತರಿಸುವ ಕಾರ್ಯದಲ್ಲಿ ಬಜರಂಗದಳದ ಕಾರ್ಯಕರ್ತರು ಸಹಕಾರ ನೀಡಿದ್ದು, ಸೆ.12ರಂದು ವಸ್ತುಗಳ ಸಾಗಾಟ ಸೇವೆಯನ್ನು ಮಾಡಿದರು.

ಕಳೆದ ವರ್ಷ ಪ್ರಧಾನಿ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಸೆ.17ಕ್ಕೆ ಶಾಸಕರು ಬನ್ನೂರಿನಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂದಿನ ವರ್ಷ ಪ್ರಧಾನಿ ಮೋದಿಯವರ ಜನ್ಮದಿನದ ಮೊದಲು ನಿಮಗೆ ವ್ಯವಸ್ಥಿತ ಕೇಂದ್ರವನ್ನು ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದಂತೆ ಶಾಸಕರು ಇವತ್ತು ಅದನ್ನು ನೆರವೇರಿಸಿಕೊಟ್ಟಿದ್ದಾರೆ.
   – ಕೆ.ಜೀವಂಧರ್ ಜೈನ್, ಅಧ್ಯಕ್ಷರು, ನಗರಸಭೆ ಪುತ್ತೂರು

ಬನ್ನೂರಿನಲ್ಲಿ ಆಶ್ರಮ ನಡೆಸಿಕೊಂಡಿದ್ದೆವು. ಅಲ್ಲಿ ತುಂಬಾ ಇಕ್ಕಾಟಾಗುತ್ತಿತ್ತು. ಜೊತೆಗೆ ಮನೆಯಲ್ಲೂ ಮಳೆ ನೀರು ಬೀಳುವ ಮೂಲಕ ತುಂಬಾ ಸಮಸ್ಯೆ ಇತ್ತು. ಅದನ್ನು ಮನಗಂಡು ಶಾಸಕರು, ನಗರಸಭೆ ಅಧ್ಯಕ್ಷರು, ಸಹಾಯಕ ಆಯುಕ್ತರು ಸೇರಿಕೊಂಡು ನಮಗೊಂದು ಉತ್ತಮ ವಾತಾವರಣ ಕೊಡಿಸಿದ್ದಾರೆ. ಇದರ ಜೊತೆಗೆ ಆಶ್ರಮದಲ್ಲಿರುವವರಿಗೆಲ್ಲಾ ಕೋವಿಡ್ ಲಸಿಕೆಯನ್ನು ಕೊಡಿಸಿದ್ದಾರೆ.
  -ಅಣ್ಣಪ್ಪ, ಆಶ್ರಮದ ವ್ಯವಸ್ಥಾಪಕರು

ಬನ್ನೂರು ಕರ್ಮಲದಲ್ಲಿ ಪ್ರಜ್ಞಾ ಆಶ್ರಮ ನಡೆಸುತ್ತಿದ್ದ ಅಣ್ಣಪ್ಪ ದಂಪತಿ ಸಣ್ಣ ಬಾಡಿಗೆ ಮನೆಯಲ್ಲಿ ಬುದ್ದಿ ಮಾಂದ್ಯ ಮಂದಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸಲಹುತ್ತಿದ್ದ ಸಂದರ್ಭದಲ್ಲಿ ಸ್ಥಳಾವಕಾಶದ ಕೊರತೆಯನ್ನು ಕಂಡು ಸಹಾಯಕ ಆಯುಕ್ತರು, ನಗರಸಭೆ ಅಧ್ಯಕ್ಷರು ನಾವೆಲ್ಲ ಸೇರಿಕೊಂಡು ಅವರಿಗೆ ಸೂಕ್ತ ಸ್ಥಳವನ್ನು ಗುರುತಿಸಿಕೊಡಬೇಕೆಂದು ಬೀರಮಲೆಯಲ್ಲಿನ ಪ್ರಶಾಂತ ವಾತಾವರಣದಲ್ಲಿರುವ ದೂರದರ್ಶನ ಕೇಂದ್ರದ ಕಟ್ಟಡದಲ್ಲಿ ಪ್ರಜ್ಞಾ ಕೇಂದ್ರ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ಈ ಪ್ರಶಾಂತ ವಾತಾವರಣದಲ್ಲಿ ಭಿನ್ನಚೇತನರ ಮನಸ್ಸಿಗೆ ಹೆಚ್ಚಿನ ಶಕ್ತಿ ನೀಡುವ ಕೆಲಸ ಆಗಲಿದೆ.

    -ಸಂಜೀವ ಮಠಂದೂರು ಶಾಸಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.