ಒಳಮೊಗ್ರು ಅಜ್ಜಿಕಲ್ಲು ಬಿಜೆಪಿ 164 ನೇ ಬೂತ್ ಅಧ್ಯಕ್ಷ ಸಂತೋಷ್ ಕುಮಾರ್ ನೈಾಲ ರವರ ಮನೆಯಲ್ಲಿ ನಾಮಫಲಕ ಅನಾವರಣ,  ಕಾರ್ಯಕರ್ತರೊಂದಿಗೆ ಸಮ್ಮಿಲನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಭಾರತೀಯ ಜನತಾ ಪಾರ್ಟಿ ಪುತ್ತೂರು ಮಂಡಲ ಇದರ ವತಿಯಿಂದ ಒಳಮೊಗ್ರು ಶಕ್ತಿಕೇಂದ್ರದ 164 ನೇ ಬೂತ್ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ನೈಾಲ ಇವರ ಮನೆಯಲ್ಲಿ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ ಮತ್ತು ಕಾರ್ಯಕರ್ತರೊಂದಿಗೆ ಸಮ್ಮಿಲನ ಕಾರ್ಯಕ್ರಮ ಸೆ.7 ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ರವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಿ.ಜೆ.ಪಿ ಕಾರ್ಯಕರ್ತರ ಪಾರ್ಟಿ ಸಾಮಾನ್ಯ ಕಾರ್ಯಕರ್ತ ಕೂಡ ಇಲ್ಲಿ ಪಕ್ಷದ ಉನ್ನತ ಜವಾಬ್ದಾರಿಯನ್ನು ಅಲಂಕರಿಸುತ್ತಾರೆ. ಇದನ್ನು ಬಿ.ಜೆ.ಪಿ ಯಲ್ಲಿ ಮಾತ್ರ ಕಾಣಲು ಸಾಧ್ಯ ಹಾಗಾಗಿ ಸ್ಥಳೀಯವಾಗಿ ಪಕ್ಷದಲ್ಲಿ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸ್ಥಾನ ಮಾನ ನೀಡಿ ಅವರನ್ನು ಗೌರವಿಸುವ ಕೆಲಸ ಆಗಬೇಕು ಅದಕ್ಕಾಗಿ ಈ ಕಾರ್ಯಕ್ರಮ. ಕೇಂದ್ರ ಹಾಗೂ ರಾಜ್ಯದ ಹಲವಾರು ಕಾರ್ಯಕ್ರಮಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಿದಾಗ ಮಾತ್ರ ಪಂಡಿತ್ ಧೀನ್ ದಯಾಳ್ ರ ಅಂತ್ಯೋದಯದ ಕಲ್ಪನೆ , ಮಹಾತ್ಮ ಗಾಂಧಿ ಜೀ ಯವರ ರಾಮ ರಾಜ್ಯದ ಕನಸು ಸಾಕರಗೊಳ್ಳಲು ಸಾಧ್ಯ ಎಂದು ಹೇಳಿದರು.

ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರು ಪ್ರಾಸ್ತಾವಿಕವಾಗಿ ಮಾತನಾಡಿ ಶಕ್ತಿಯುತ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೀ ಯವರ ಸೂಚನೆ , ನಮ್ಮ ಸಂಸದರು ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರ ಯೋಜನೆಯಂತೆ ಜಿಲ್ಲಾ ಅಧ್ಯಕ್ಷರ ಮಾರ್ಗದರ್ಶನದಲ್ಲಿ ನಮ್ಮ ಶಾಸಕರ ನೇತೃತ್ವದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ನಮ್ಮ ಬೂತ್ ಅಧ್ಯಕ್ಷರ ಮನೆಗಳಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬಿಜೆಪಿ ಜಿಲ್ಲಾ ಓಬಿಸಿ ಮೋರ್ಛದ ಅಧ್ಯಕ್ಷ ಆರ್.ಸಿ .ನಾರಾಯಣ , ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಪಾಣಾಜೆ ಮಹಾ ಶಕ್ತಿಕೇಂದ್ರದ ಅಧ್ಯಕ್ಷರು ಹಾಗೂ ಮಂಡಲದ ಉಪಾಧ್ಯಕ್ಷರಾದ ಜಯರಾಮ ಪೂಜಾರಿ , ಗ್ರಾಮಾಂತರ ಮಂಡಲದ ಉಪಾಧ್ಯಕ್ಷೆ ಮೀನಾಕ್ಷಿ ಮಂಜುನಾಥ್, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಕೆ, ಎಸ್ಟಿ ಮೋರ್ಛ ದ ಜಿಲ್ಲಾ ಪ್ರ.ಕಾ ಹರೀಶ್ ಬಿಜತ್ರೆ, ಒಳಮೊಗ್ರು ಶಕ್ತಿಕೇಂದ್ರದ ಸಂಚಾಲಕ ರಾಜೇಶ್ ರೈ ಪರ್ಪುಂಜ, ಬೂತ್ ಅಧ್ಯಕ್ಷ ಸಂತೋಷ್ ಕುಮಾರ್ ನೈಾಲ ವೇದಿಕೆಯಲ್ಲಿದ್ದರು. ರೈತ ಮೋರ್ಛ ತಾಲೂಕು ಸಮಿತಿ ಸದಸ್ಯ ಬಾಲಕೃಷ್ಣ ರೈ ಬಿ, ಅಜ್ಜಿಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಕೆ, ಹಿರಿಯ ಸ್ವಯಂಸೇವಕ, ಕೃಷಿಕ ಬಾಲಕೃಷ್ಣ ರೈ , ಭಗವಾನ್ ದಾಸ್ ರೈ ಚಿಲ್ಮೆತ್ತಾರು, ಕರುಣಾಕರ ರೈ , ಪಂ.ಸದಸ್ಯರಾದ ನಳಿನಾಕ್ಷಿ, ವನಿತಾ, ನಿಮಿತಾ, ಬೂತ್ ಸಮಿತಿ ಕಾರ್ಯದರ್ಶಿ ಸುಶಾಂತ್ ಎ ಅಜ್ಜಿಕಲ್ಲು, ಶಶಿರಾಜ್ ರೈ ಚಿಲ್ಮೆತ್ತಾರು ಅತಿಥಿಗಳಿಗೆ ಪುಷ್ಪ ಗೌರವ ನೀಡಿದರು.


ಶಾಸಕರಿಗೆ ಗೌರವ ಅರ್ಪಣೆ , ಮನವಿ ಸಲ್ಲಿಕೆ
ಮೂರು ದಶಕಗಳ ಬೇಡಿಕೆಯಾಗಿದ್ದ ದೇವಸ್ಯ – ಚೆಲ್ಯಡ್ಕ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ತರುವಲ್ಲಿ ಮುತುವರ್ಜಿ ವಹಿಸಿದ ಶಾಸಕರನ್ನು ಈ ಸಂಧರ್ಭದಲ್ಲಿ ಬೂತ್ ಸಮಿತಿ ವತಿಯಿಂದ ಗೌರವಿಸಲಾಯಿತು. ತೀರಾ ಹದಗೆಟ್ಟ ಕಾಪಿಕಾಡು – ಮಿನಿಪದವು ಕೈಕಾರ ರಸ್ತೆ ಅಭಿವೃದ್ಧಿಗೆ , ಇತರ ನಾಲ್ಕು ಕಚ್ಚಾ ರಸ್ತೆಗಳ ಕಾಂಕ್ರೀಟ್ ಕರಣಕ್ಕೆ , ಅಜ್ಜಿಕಲ್ಲು ಸರಕಾರಿ ಶಾಲೆಯ ಮೇಲ್ಛಾವಣಿ ದುರಸ್ತಿಗೆ , ಧಾರ್ಮಿಕ ಶ್ರದ್ಧಾಕೇಂದ್ರ ಶ್ರೀ ದೇವಿ ಭಜನಾ ಮಂದಿರದ ಬಳಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಹಾಗೂ ಈ ಭಾಗದ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸುವಂತೆ ಮನವಿ ಸಲ್ಲಿಸಲಾಯಿತು. ಅಜ್ಜಿಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ , ಬೂತ್ ಸಮಿತಿ ಸದಸ್ಯ ಪುರುಷೋತ್ತಮ ಮಣಿಯಾಣಿ , ಬೂತ್ ಸಮಿತಿ ಸದಸ್ಯ ಈಶ್ವರ ನಾಯ್ಕ ಎಂ , ಕರುಣಾಕರ ಎಂ , ಪ್ರಕಾಶ್ ಕುಮಾರ್ ಬಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ ಸೇರಿದಂತೆ ನೂರಾರು ಹಿರಿಯ ಕಿರಿಯ ಕಾರ್ಯಕರ್ತರು , ಮಾತೆಯರು ಉಪಸ್ಥಿತರಿದ್ದರು.

ಕು.ಶ್ರಾವ್ಯ ಮತ್ತು ಕು.ವಾಸವಿ ವಂದೇ ಮಾತರಂ ಗೀತೆ ಹಾಡಿದರು , ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ಕುಮಾರ್ ಕೆ ಸ್ವಾಗತಿಸಿ , ಸುಶಾಂತ್ ಅಜ್ಜಿಕಲ್ಲು ವಂದಿಸಿದರು.ಒಳಮೊಗ್ರು ‌ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರೈ ಕೇರಿ ಕಾರ್ಯಕ್ರಮ ನಿರೂಪಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.