HomePage_Banner
HomePage_Banner
HomePage_Banner
HomePage_Banner

20 ನೇ ವರ್ಷದ ಹೇಮಂತ ಕುಮಾರ್ ಸಂಸ್ಮರಣಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಹೇಮಂತ್ ಕುಮಾರ್ ಪ್ರತಿಭಾನ್ವಿತ ವ್ಯಕ್ತಿಯಾಗಿ ಸಮಾಜದ ಯುವಜನತೆಗೆ ಸ್ಫೂರ್ತಿದಾಯಕವಾಗಿ ಬದುಕಿದವರು. ಹುತಾತ್ಮ ಹೇಮಂತ್ ಹೆಸರಿನಲ್ಲಿ ಸಮಾಜಕ್ಕೆ ಅನುಕೂಲವಾಗುವ ಕಾರ್ಯವನ್ನು ಆನಂದ ಟೈಲರ್ ಕುಟುಂಬ ನಿರ್ವಹಿಸಿಕೊಂಡು ಬಂದಿದೆ ನಿಜವಾಗಳೂ ದು:ಖದ ಸಂದರ್ಭದಲ್ಲಿ ಸಮಾಜ ಹಿತವನ್ನು ಬಯಸಿ ಕಾರ್ಯನಿರ್ವಹಣೆ ಮಾಡಿರಿವುದು ಆದರ್ಶಪ್ರಾಯ ಸಂಗತಿ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಕಾರ್ಯನಿರ್ವಹಣಾಧಿಕಾರಿ ಆರ್ ಸಿ ನಾರಾಯಣ ರೆಂಜ ಅವರು ಹೇಮಂತ ಕುಮಾರ್ ಸಂಸ್ಮರಣೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು. 2001 ಸೆಪ್ಟೆಂಬರ್ 11 ರಂದು ನಡೆದ ನ್ಯೂಯಾರ್ಕ್ ಜಾಗತಿಕ ಕಟ್ಟಡ ದುರಂತದಲ್ಲಿ ಹುತಾತ್ಮರಾದ ದಿ| ಹೇಮಂತ ಕುಮಾರ್ ಸಂಸ್ಮರಣಾ ಕಾರ್ಯಕ್ರಮ ಸೋಮವಾರ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಫ ಮತ್ತು ದಿ| ಹೇಮಂತ ಕುಮಾರ್ ಸ್ಮಾರಕ ಸಮಿತಿ, ಪುತ್ತೂರು ಇದರ ಆಶ್ರಯದಲ್ಲಿ ಬಿಲ್ಲವ ಸಂಘದ ಹೇಮಂತ ಕುಮಾರ್ ಸಭಾಭವನದಲ್ಲಿ ಜರಗಿತು. ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ಪೂಜೆ ನೇರವೇರಿಸಿ. ಹೇಮಂತ ಕುಮಾರ್ ತೈಲಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೇಮಂತ ಕುಮಾರ್ ತಂದೆ ಪಿ ಆನಂದ ಟೈಲರ್, ತಾಯಿ ಪಿ ಕುಸುಮ, ಸಹೋದರ ಪ್ರಶಾಂತ್ ಕುಮಾರ್, ಶ್ವೇತಾ ಪ್ರಶಾಂತ್, ಶ್ರುಶಾಂತ್. ಬೇಬಿ ಶ್ರೀಯಾ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಶೇಷಪ್ಪ ಬಂಗೇರ, ನಿಕಟಪೂರ್ವ ಕಾರ್ಯದರ್ಶಿ ಶಶಿಧರ ಕಿನ್ನಿಮಜಲು, ನಿಕಟಪೂರ್ವ ಉಪಾಧ್ಯಕ್ಕರಾದ ಡಾ. ಸದಾನಂದ ಕುಂದರ್, ಮಾಜಿ ಕಾರ್ಯದರ್ಶಿ ಕೇಶವ ಬೆದ್ರಾಳ, ಜಯರಾಮ ಪೂಜಾರಿ ಹಾಗು ಕುಟುಂಬಸ್ಥರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ರಾಮಕೃಷ್ಣ ಆಶ್ರಮದ ಮಕ್ಕಳಿಗೆ ಅನ್ನಸಂತರ್ಪಣೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.