HomePage_Banner
HomePage_Banner
HomePage_Banner
HomePage_Banner

ಇಲಾಖೆಗಳಿರುವುದು ನಮಗಾಗಿ, ಆಡಳಿತ ನಮಗಾಗಿ, ಪಕ್ಷಗಳು, ಪ್ರತಿನಿಧಿಗಳು ನಮಗಾಗಿ, ಕಾನೂನುಗಳು ನಮಗಾಗಿ ಇರುವುದು, ಅವುಗಳಿಗಾಗಿ ನಾವು (ಜನರು) ಇರುವುದಲ್ಲ. ಅದುವೇ ಜನಾಡಳಿತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವೀಕೆಂಡ್ ಕರ್ಫ್ಯೂ ರದ್ದಾಗಿರುವುದು ಅದೇ ಕಾರಣಕ್ಕೆ -ಅದುವೇ ಮಹಾತ್ಮ ಗಾಂಧಿಯ ಗ್ರಾಮ ಸ್ವರಾಜ್ಯ

ಮೇಲಿನ ಉದ್ಧೇಶಗಳು ಯಶಸ್ವಿಯಾಗಬೇಕಾದರೆ, ಬ್ರಿಟಿಷರ ಆಡಳಿತ ಕ್ರಮದಿಂದ ನಾವು ಹೊರಬಂದು ಸ್ವತಂತ್ರರಾಗಬೇಕಿದ್ದರೆ, ಇಲಾಖೆಗಳಿರುವುದು ನಮ್ಮ ಸೇವೆಗಾಗಿ, ಅವರಿಗಾಗಿ ನಾವಿರುವುದಲ್ಲ. ಆಡಳಿತವಿರುವುದು ನಮಗಾಗಿ, ಆಡಳಿತಕ್ಕಾಗಿ ನಾವಿರುವುದಲ್ಲ. ಕಾನೂನು ಇರುವುದು ನಮಗಾಗಿ, ಕಾನೂನಿಗಾಗಿ ನಾವಿರುವುದಲ್ಲ. ಜನಪ್ರತಿನಿಧಿಗಳು ಪಕ್ಷಗಳಿರುವುದು ಜನರಿಗಾಗಿ, ಪಕ್ಷಗಳಿಗಾಗಿ ಜನಪ್ರತಿನಿಧಿಗಾಗಿ ಜನರಿರುವುದಲ್ಲ. ‘ಜನರಿಂದ ಜನರಿಗಾಗಿ ಜನರೇ ಆಡಳಿತ ನಡೆಸುವುದು ಪ್ರಜಾಪ್ರಭುತ್ವ’ ಎಂದು ಅಮೇರಿಕಾ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಹೇಳಿದ್ದರು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ನಮ್ಮದೇ. ಎಲ್ಲವೂ ನಮಗಾಗಿ, ನಮ್ಮ ಸೇವೆಗಾಗಿ ಇರುವಂತಹುದು.

ನಾವು ಪ್ರಜೆಗಳು ರಾಜರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ಸೇವೆಗಾಗಿ ಆರಿಸಲ್ಪಟ್ಟವರು ಮತ್ತು ನೇಮಿಸಲ್ಪಟ್ಟವರು. ಅವರು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ನಮ್ಮೆಲ್ಲರ (ಜನರ) ಜವಾಬ್ದಾರಿ.ಅವರಿಂದ ತಪ್ಪುಗಳಾದಾಗ, ತೊಂದರೆಯಾದರೆ ಅದಕ್ಕೆ ನಮ್ಮ ನಿರ್ಲಕ್ಷ್ಯವೇ ಕಾರಣ. ನಾವೇ ಹೊಣೆಗಾರರು. ನಮಗೆ ಅದು ಸರಿಕಾಣದಿದ್ದರೆ ಅದನ್ನು ಸರಿಪಡಿಸಲಿಕ್ಕಾಗಿ ಮತದಾನ, ಚುನಾವಣೆಗಳಿರುತ್ತವೆ. ‘ನಿಮ್ಮ ಸೇವೆ ಮಾಡುತ್ತೇವೆ. ಉದ್ಧಾರ ಮಾಡುತ್ತೇವೆ, ಹಾಗೆ ಹೀಗೆ ಮಾಡುತ್ತೇವೆ. ಇತರರು ಭ್ರಷ್ಟರು. ಅವರಿಂದ ಯಾವ ಕೆಲಸವೂ ಸಾಧ್ಯವಿಲ್ಲ. ಅವರು ದೇಶದ್ರೋಹಿಗಳು ಆಗಿದ್ದಾರೆ’ ಎಂದು ಇತರರನ್ನು ದೂರಿ ತಮ್ಮನ್ನು ಆಯ್ಕೆ ಮಾಡುವಂತೆ ಕೆಳಿಕೊಳ್ಳುತ್ತಾರೆ. ಬೇಡಿಕೊಳ್ಳುತ್ತಾರೆ. ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಮ್ಮ ಮತದಾನದಿಂದ ತಾವೇ ರಾಜರಾಗಲು ಅಲ್ಲ. ಆದರೆ ಗೆದ್ದಮೇಲೆ ಪ್ರಜೆಗಳು ರಾಜರೆಂಬುದನ್ನು ಪ್ರಜೆಗಳು ಮತ್ತು ಜನಪ್ರತಿನಿಧಿಗಳು ಮರೆಯುತ್ತಾರೆ. ಜನಪ್ರತಿನಿಧಿಗಳು ತಾವೇ ರಾಜರುಗಳೆಂದು ಮೆರೆಯುತ್ತಾರೆ. (ನಮ್ಮ ಶಾಸಕರಿಗೆ ಇದು ಅನ್ವಯವಾಗುವುದಿಲ್ಲ) ಅಧಿಕಾರಿಗಳು, ಇಲಾಖೆಗಳು ತಾವು ಜನರ ಸೇವೆಗಾಗಿ ಇರುವುದು ಎಂಬುದನ್ನು ಮರೆಯುತ್ತಾರೆ. ಜನಪ್ರತಿನಿಧಿಗಳ, ಮಂತ್ರಿಗಳ, ಮೇಲಾಧಿಕಾರಿಗಳ ಸೇವೆಯೇ ಮುಖ್ಯ ಎಂದು ಕೆಲಸ ಮಾಡುತ್ತಾರೆ. ಜನರನ್ನು ಕಳ್ಳರೆಂದು, ವಂಚಕರೆಂದು, ಕಾನೂನು ಮುರಿಯುವವರೆಂದು, ಭಯೋತ್ಪಾದಕರೆಂದೂ ಶಿಕ್ಷೆಗೆ, ದಂಡನೆಗೆ ಅರ್ಹರೆಂದೂ ಪರಿಗಣಿಸುತ್ತಾರೆ. ಆದರೆ ಅದೇ ಸಮಯದಲ್ಲಿ ನಮ್ಮ ನಾಯಕರು, ಮಂತ್ರಿಗಳು ಮೇಲಧಿಕಾರಿಗಳು ಅದೇ ತಪ್ಪನ್ನು ಮಾಡಿದರೆ ಅಧಿಕಾರಿಗಳು, ಪೊಲೀಸರು ಕಣ್ಣಿಗೆ ಕಾಣದಂತೆ ವರ್ತಿಸುತ್ತಾರೆ, ಅವರಿಗೇ ರಕ್ಷಣೆ ನೀಡುತ್ತಾರೆ ಎಂಬುದಕ್ಕೆ ಕೊರೋನಾ ಕರ್ಫ್ಯೂ ಲಾಕ್‌ಡೌನ್ ಸಂದರ್ಭದಲ್ಲಿ ನಡೆದ ಘಟನೆಗಳು, ಅಲ್ಲಿ ಜನಸಾಮಾನ್ಯರಿಗೆ ಒಂದು ಕಾನೂನು(ದಂಡ) ನಾಯಕರಿಗೆ ಒಂದು ಕಾನೂನು(ಸ್ವಾಗತ) ಅನ್ವಯವಾದದ್ದು ಉತ್ತಮ ಸಾಕ್ಷಿ.

ಶಾಸಕರು, ಸಂಸದರು, ನಮ್ಮ ಊರಿನ ಕಾನೂನಿಗೂ, ಆಡಳಿತಕ್ಕೂ ಜವಾಬ್ದಾರರು:
ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ವಿರುದ್ಧದ ಹೋರಾಟ ವರ್ತಕರಿಗೂ, ರಿಕ್ಷಾ ವಾಹನ ಚಾಲಕರಿಗೂ, ದುಡಿದು ತಿನ್ನುವ ಇತರ ಸಮುದಾಯದವರಿಗೂ ಜನತೆಗೂ, ಶಾಸಕರಿಗೂ ಅಧಿಕಾರಿಗಳಿಗೂ ಎಲ್ಲರಿಗೂ ಜಯ ಕೊಟ್ಟಿದೆ. ಇಲ್ಲಿಗೆ ಅನ್ವಯವಾಗದಿದ್ದ ಕುರುಡು ಕಾನೂನಿಗೆ ಮೋಕ್ಷ ಸಿಕ್ಕಿದೆ. ಅದರಿಂದಾಗಿ ಜನತೆ ಆರಿಸಿದ ಶಾಸಕರೇ ತಾಲೂಕಿನ ಸುಪ್ರೀಂ. ಶಾಸಕರು, ಸಂಸದರು ನಮ್ಮಲ್ಲಿಯ ಎಲ್ಲಾ ಕಾನೂನುಗಳಿಗೂ, ಆಡಳಿತಕ್ಕೂ ಜವಾಬ್ದಾರರು ಎಂಬುದು ಜನರಿಗೆ ಮನವರಿಕೆ ಆಗಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಸುದ್ದಿ ಪತ್ರಿಕೆ ಪ್ರಾರಂಭಿಸಿದ ಈ ಆಂದೋಲನ ಜಿಲ್ಲೆಗೆ ಹರಡಿದೆ. ಆ ಜನಾಭಿಪ್ರಾಯ ಸಂಗ್ರಹದ ಕಾರ್ಯದಲ್ಲಿ ಸುದ್ದಿ ಪತ್ರಿಕೆ ಮತ್ತು ಚಾನೆಲ್‌ಗಳಲ್ಲಿ ಸ್ಥಳ ಮತ್ತು ಸಮಯ ವಿನಿಯೋಗಿಸಿ ಅಪಾರ ಮೊತ್ತದ ಖರ್ಚು ಆಗಿದ್ದರೂ ಶ್ರಮ ವಹಿಸಿ ದುಡಿದ ಸುದ್ದಿ ಬಳಗಕ್ಕೆ ತಮ್ಮ ಆಂದೋಲನ ಪ್ರತಿಫಲ ನೀಡಿದ್ದಕ್ಕೆ ಅಪಾರ ಸಂತೋಷ ಉಂಟಾಗಿದೆ. ಒಟ್ಟಿನಲ್ಲಿ ಅದನ್ನು ತೊಂದರೆಗೊಳಗಾದ ಜನರ ಧ್ವನಿಗೆ, ಆ ಧ್ವನಿಯಾದ ಸುದ್ದಿ ಮಾಧ್ಯಮಕ್ಕೆ, ಶಾಸಕರ ಪ್ರಯತ್ನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ಜಯವೆಂದೇ ಹೇಳಬೇಕು. ಈಗ ಅದರ ಮುಂದುವರಿದ ಭಾಗವಾಗಿ ಪ್ರಜಾಪ್ರಭುತ್ವದ – ಜನರ ಸ್ವಾತಂತ್ರ್ಯದ – ಜನಾಡಳಿತದ – ಮಹಾತ್ಮ ಗಾಂಧಿಯವರ ‘ಹಳ್ಳಿಯಿಂದ ಡೆಲ್ಲಿಗೆ ಆಡಳಿತ’ದ ಆಶಯದ ಆಂದೋಲನ, ಅವರ ಜಯಂತಿಯವರೆಗೆ ಆಚರಣೆಯಾಗಿ ಇದೇ ಅಕ್ಟೋಬರ್ 2 ರವರೆಗೆ ನಡೆಯಲಿದೆ. ಅದರ ಅಂಗವಾಗಿ ಮಹಾತ್ಮಗಾಂಧಿ ರಥ ತಾಲೂಕಿನ ಗ್ರಾಮ ಗ್ರಾಮಗಳಿಗೆ ಸಂಚರಿಸಲಿದೆ.

ಸರಕಾರಿ ಇಲಾಖೆಗಳಲ್ಲಿನ ಕುಂದು ಕೊರತೆ ನಿವಾರಣೆ-ಉತ್ತಮ ಜನಸೇವೆಗೆ ಅಗತ್ಯ:
ಅದರ ಮೊದಲ ಭಾಗವಾಗಿ ತಾಲೂಕಿನಲ್ಲಿರುವ ಎಲ್ಲಾ ಸರಕಾರಿ ಇಲಾಖೆಗಳು ನಮ್ಮದೇ, ನಮಗಾಗಿ ಇರುವಂತಹುದು. ಅಲ್ಲಿ ಸಿಬ್ಬಂದಿಗಳು ಸರಿಯಿದ್ದರೆ, ನಮಗೆಲ್ಲರಿಗೂ(ಜನರಿಗೆ) ಬೇಕಾದ ಕೆಲಸಗಳು ನಡೆಯುತ್ತದೆ. ಅದರಿಂದ ಜನರಿಗೆ ಪ್ರಯೋಜನ. ಇಲಾಖೆಯಲ್ಲಿ ಕೊರತೆಯಿದ್ದರೆ ಸಾಕಷ್ಟು ವ್ಯವಸ್ಥೆ ಇಲ್ಲದಿದ್ದರೆ, ಜನರಿಗೆ ತೊಂದರೆ ಎಂಬ ಕಾರಣಕ್ಕೆ ತಾಲೂಕಿನ ಪ್ರತಿಯೊಂದು ಇಲಾಖೆಯ ಕೆಲಸ, ಅಲ್ಲಿರುವ ಸಿಬ್ಬಂದಿಗಳ ಕೊರತೆ, ಜನಸೇವೆಗೆ ಬೇಕಾದ ವ್ಯವಸ್ಥೆಗಳನ್ನು ಪಟ್ಟಿ ಮಾಡಿ ಶಾಸಕರ, ಸರಕಾರದ ಮತ್ತು ಜನರ ಮುಂದಿಡುತ್ತಿzವೆ. ಉದಾ: ಶಾಲೆಯಲ್ಲಿ ಟೀಚರ್ ಇಲ್ಲದಿದ್ದರೆ ಶಾಲೆಗೆ, ಶಿಕ್ಷಣ ಇಲಾಖೆಗೆ, ಸರಕಾರಕ್ಕೆ ಏನೂ ತೊಂದರೆ ಇಲ್ಲ. ಅಲ್ಲಿ ಪಾಠಕ್ಕೆ ಬರುವ ನಮ್ಮ ಮಕ್ಕಳಿಗೆ ನಷ್ಟ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ, ಬೆಡ್‌ಗಳು, ಬೇಕಾದ ವ್ಯವಸ್ಥೆಗಳು ಇಲ್ಲದಿದ್ದರೆ ಆಸ್ಪತ್ರೆಗೆ, ವೈದ್ಯಕೀಯ ಇಲಾಖೆಗೆ, ಸರಕಾರಕ್ಕೆ ಏನೂ ನಷ್ಟವಿಲ್ಲ. ಅಲ್ಲಿಗೆ ಬರುವ ನಮ್ಮ ತಾಲೂಕಿನ ರೋಗಿಗಳಿಗೆ ಜೀವದ ಸಮಸ್ಯೆಯಾಗುತ್ತದೆ. ವಿದ್ಯುತ್ ಇಲಾಖೆಯಲ್ಲಿ ನೌಕರರಿಲ್ಲದಿದ್ದರೆ, ಲೈನ್‌ಮ್ಯಾನ್ ಇಲ್ಲದಿದ್ದರೆ ಜನರಿಗೆ ನಷ್ಟ. ಇಲಾಖೆಗೆ ಅಲ್ಲ. ಈ ಮಾತು ಎಲ್ಲಾ ಇಲಾಖೆಗಳಿಗೂ ಅನ್ವಯವಾಗುತ್ತದೆ. ಪುತ್ತೂರು ತಾಲೂಕಿನ ಎಲ್ಲಾ ಇಲಾಖೆಗಳು ಸುಸಜ್ಜಿತವಾಗಿ ಸಂಪೂರ್ಣವಾಗಿ ಇದ್ದರೆ, ಪುತ್ತೂರಿನ ಎಲ್ಲಾ ಜನರಿಗೆ ಉತ್ತಮ ಸೇವೆ ದೊರಕುವುದು ಖಂಡಿತ. ಅಲ್ಲಿ ಭ್ರಷ್ಟಾಚಾರವೂ ಕಡಿಮೆಯಾಗಬಹುದು. ಅದರೊಂದಿಗೆ ಆ ಇಲಾಖೆಗೆ ಬರುವ ಜನರಿಗೆ ಕನಿಷ್ಠ ಅಲ್ಲಿ ಕುಳಿತುಕೊಳ್ಳುವ ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು ಮಹಿಳೆಯರಿಗೆ ಪ್ರತ್ಯೇಕವಾಗಿ ಇರಬೇಕು. ನಮಗಾಗಿ ಇರುವ ಇಲಾಖೆಗಳಲ್ಲಿ ಅಲ್ಲಿಗೆ ಬರುವ ನಮಗೆ (ಜನರಿಗೆ) ಸೌಕರ್ಯಗಳು ಅಗತ್ಯ ಎಂದು ಹೇಳುವುದರಲ್ಲಿ ತಪ್ಪಿದೆಯೇ?. ಈ ಎಲ್ಲಾ ಕಾರಣಗಳಿಗೆ ಇಲಾಖೆಗಳ ಕುಂದುಕೊರತೆ ನಿವಾರಣೆ ಮತ್ತು ಅಲ್ಲಿಗೆ ಬರುವ ಜನರಿಗೆ ಸೌಲಭ್ಯ ದೊರಕುವ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಆ ರೀತಿಯ ವ್ಯವಸ್ಥೆ ಪ್ರತೀ ಪಂಚಾಯತ್‌ನಲ್ಲಿಯೂ ಆಗಬೇಕು. ಅದು ಜನರ ಸಹಭಾಗಿತ್ವದಲ್ಲಿಯೇ ನಡೆಯಬೇಕು ಎಂಬ ಕಾರಣಕ್ಕೆ ಸಾರ್ವಜನಿಕರ, ಸಂಘಸಂಸ್ಥೆಗಳ ಸಹಕಾರವನ್ನು ಕೋರುತ್ತಿzವೆ. ಪ್ರತಿಯೊಂದು ಇಲಾಖೆಯನ್ನು ಜನರು, ಸಂಘಸಂಸ್ಥೆಗಳು ದತ್ತು ತೆಗೆದುಕೊಂಡು ಇಲಾಖೆಗಳಲ್ಲಿರುವ ಆ ಕೊರತೆಗಳನ್ನು ನಿವಾರಣೆ ಮಾಡುವಂತೆ ಆ ಬಗ್ಗೆ ಚರ್ಚಿಸಲು ಸಾರ್ವಜನಿಕರ ಮತ್ತು ಸಂಘಸಂಸ್ಥೆಗಳ ಸಭೆಯನ್ನು ಕರೆಯಬೇಕೆಂದಿದ್ದೇವೆ.

ಹಳ್ಳಿಯಿಂದ ಡೆಲ್ಲಿಗೆ ಆಡಳಿತಕ್ಕಾಗಿ, ಜನಾಡಳಿತಕ್ಕಾಗಿ ಮಹಾತ್ಮ ಗಾಂಧಿ ರಥ ಸಂಚಾರ:
ಈ ಮೇಲಿನ ಉದ್ಧೇಶ ಈಡೇರಿಸಲಿಕ್ಕಾಗಿ ಸುದ್ದಿಪತ್ರಿಕೆ ಮತ್ತು ಚಾನೆಲ್‌ಗಳಲ್ಲಿ ಜನಾಧಿಕಾರದ ಅಂಗವಾಗಿ ಇಲಾಖೆಗಳ ಕೆಲಸಗಳನ್ನು, ಸೇವೆಗೆ ತೊಡಕುಂಟುಮಾಡುವ ಅಲ್ಲಿಯ ಕೊರತೆಗಳ ಮಾಹಿತಿಯನ್ನು ಜನತೆಗೆ ನೀಡಲಿದ್ದೇವೆ. ನಿವಾರಣೆಗೆ ಪ್ರಯತ್ನ ಮಾಡಲಿದ್ದೇವೆ. ಸ್ಥಳೀಯಾಡಳಿತ, ಗ್ರಾಮ ಸ್ವರಾಜ್ಯದ ಚಿಂತನೆಯನ್ನು ಹರಡಲು ಮಹಾತ್ಮಗಾಂಧಿ ರಥ ತಾಲೂಕಿನಾದ್ಯಂತ ಸಂಚರಿಸಲಿದೆ. ಗಾಂಧಿ ಜಯಂತಿಯಂದು ಗಾಂಧಿ ನಡಿಗೆಯಿಂದ ಪ್ರಾರಂಭವಾಗಿ, ಜನಾಡಳಿತದ ಸ್ವಾತಂತ್ರ್ಯದ ಘೋಷಣೆಗಳೊಂದಿಗೆ ನಮ್ಮದೇ ಆಡಳಿv, ಎಲ್ಲವೂ ನಮಗಾಗಿ, ನಮ್ಮದೇ ಜವಾಬ್ದಾರಿ ಎಂಬ ಗ್ರಾಮ ಸ್ವರಾಜ್ಯದ ಘೋಷಣೆಗಳ ಪ್ರತಿಜ್ಞೆಯೊಂದಿಗೆ ಶ್ರಮದಾನ, ಸ್ವಚ್ಛತೆ, ಊರಿನ ಅಭಿವೃದ್ಧಿಗೆ ಕೊಡುಗೆಯ ಮತ್ತು ಸಾಧಕರನ್ನು ಗುರುತಿಸುವ ಕಾರ್ಯಕ್ರಮಗಳು ನಡೆಯಲಿದೆ. ನಮ್ಮ ಊರು ಭ್ರಷ್ಟಾಚಾರ ಮುಕ್ತ, ಸ್ವಚ್ಛ ಊರು ಆಗುವ ಪ್ರತಿಜ್ಞೆಯೂ, ಸಂಕಲ್ಪವೂ ನೆರವೇರಲಿದೆ. ಸಾರ್ವಜನಿಕರು ಮಹಾತ್ಮಗಾಂಧಿಯವರ ಆಶಯದ ಸುದ್ದಿಯ ಈ ಆಂದೋಲನದಲ್ಲಿ ಭಾಗಿಗಳಾಗಬೇಕೆಂದು ವಿನಂತಿಸುತ್ತಿದ್ದೇವೆ. – ಡಾ.ಯು.ಪಿ. ಶಿವಾನಂದ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.