HomePage_Banner
HomePage_Banner
HomePage_Banner
HomePage_Banner

ಅಚ್ಛೇ ದಿನ ಎಲ್ಲಿದೆ ಅಂತ ಬಿಜೆಪಿಗರಲ್ಲಿ ಪ್ರಶ್ನೆ ಮಾಡಿ ಜನರಿಗೆ ಶಕುಂತಲಾ ಟಿ ಶೆಟ್ಟಿ ಕರೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

       ಜಿಡೆಕಲ್ಲು ನಗರ ಕಾಂಗ್ರೆಸ್ ನಿಂದ ಬೂತ್ ಮಟ್ಟದ ಸಭೆ

ಪುತ್ತೂರು: ಪ್ರಧಾನಿ ಮನಮೋಹನ್ ರವರ ಕಾಂಗ್ರೆಸ್ ಸರಕಾರ ದೇಶದ ಜನರ ಒಳಿತಿಗಾಗಿ ಹಲವಾರು ಕಾರ್ಯಕ್ರಮ ಹಾಕಿತ್ತು, ಇದರಿಂದಾಗಿ ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರು ಆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸಿ ಜನರಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧವಾಗಿ ಅಪಪ್ರಚಾರ ಮಾಡಿ ಬಿಜೆಪಿ ಬಂದರೆ ಸ್ವರ್ಗ ವನ್ನೇ ತಂದು ಕೊಡುತ್ತೇವೆ, ದೇಶದ ಜನರಿಗೆ ಅಚ್ಚೇ ದಿನ ತರುತ್ತೇವೆ ಎಂದು ಸುಳ್ಳುಭರವಸೆಯನ್ನು ನೀಡಿ, ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದು ಕಳೆದ 8 ವರ್ಷದಲ್ಲಿ ಪ್ರಧಾನಿ ಮೋದಿಯ ಕೇಂದ್ರ ಸರಕಾರ ಜನದ್ರೋಹಿಯಾಗಿರುವ ವಿವಿಧ ಕಾನೂನು ತಂದ ಕಾರಣದಿಂದ ಹಾಗೂ ವಿಪರೀತ ಬೆಲೆ ಏರಿಕೆಯಿಂದ ಜನರ ಜೀವನವೇ ನರಕ ವಾಗಿರುತ್ತದೆ, ಬಿಜೆಪಿಗರ ಈ ದುರಾಡಳಿತ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು, ಬಿಜೆಪಿಗರು ಜನರ ಬಳಿ ಬಂದಾಗ ಇದೇನಾ ಅಚ್ಚೇ ದಿನ್ ಅಂತ ಪ್ರಶ್ನೆ ಮಾಡಬೇಕು ಎಂದು ಮಾಜಿ ಶಾಸಕರಾದ ಶಕುಂತಲಾ ಟಿ ಶೆಟ್ಟಿ ಹೇಳಿದರು,
ಅವರು ನಗರ ಕಾಂಗ್ರೆಸ್ ಆಯೋಜಿಸಿದ ಜಿಡೆಕಲ್ಲು ಬೂತ್ ಸಂಖ್ಯೆ 135 ಕ್ಕೆ ಸಂಬಂಧ ಪಟ್ಟಂತೆ ನೆಕ್ಕರೆ ಎಂಬಲ್ಲಿ ಮೌರಿಸ್ ದಲ್ಮೆದ ಎಂಬವರ ಮನೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ, ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ ಪಕ್ಷ ಸಂಘಟಣೆಯೊಂದಿಗೆ ಸ್ಥಳೀಯ ಜನರ ಸಮಸ್ಯೆ ಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಮಾಡುವ ಕೆಲಸಕ್ಕೆ ನಾವೆಲ್ಲಾ ಕೈಜೋಡಿಸಲಿದ್ದೇವೆ, ಮೋದಿ ಸರಕಾರದ ದುರಾಡಳಿತದ ವಿರುದ್ಧ ಜನಜಾಗೃತಿ ಮೂಡಿಸ ಬೇಕಾಗಿದೆ, ಇದಕ್ಕೆ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಮಾತನಾಡಿ, ನಗರ ಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಈ ಭಾಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ, ಸಾಮೆತಡ್ಕ-ಕರಿಯಾಲ-ನೆಕ್ಕರೆಗೆ ಸಂಪರ್ಕಗೊಳಿಸುವ ರಸ್ತೆ ಅಭಿವೃದ್ಧಿಯನ್ನು ನಗರೋತ್ತಾನ ಯೋಜನೆಯ ಅನುದಾನದಲ್ಲಿ ಮಾಡಿದ್ದೇವೆ, ಈ ವಾರ್ಡಿನ ಸದಸ್ಯರಾಗಿದ್ದ ಮುಕೇಶ್ ಕೆಮ್ಮಿOಜೆ ರವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಡೆಸಿರುತ್ತೇವೆ ಆದರೆ ಈಗಿರುವ ನಗರ ಸಭಾ ಆಡಳಿತ ಅಭಿವೃದ್ಧಿ ಮಾಡುವ ಬದಲು ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ, ಗ್ಯಾಸ್, ಡಿಸೇಲ್, ಪೆಟ್ರೋಲ್, ದಿನ ನಿತ್ಯ ಬಳಸುವ ಎಣ್ಣೆ, ಬೇಳೆ ಕಾಳು, ಹಾಲು ತರಕಾರಿ, ಅಕ್ಕಿ ಸಕ್ಕರೆ, ಮೀನು ಮಾಂಸ ಎಲ್ಲದರ ಬೆಲೆ ಏರಿಕೆ ಮಾಡಿರುವ ಬಿಜೆಪಿ ಸರಕಾರ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದೆ, ಇದನ್ನು ಜನರಿಗೆ ತಿಳಿಸಬೇಕಾದ ಕೆಲಸ ಕಾರ್ಯಕರ್ತರದ್ದು ಎಂದು ಹೇಳಿದರು.

ಮಾಜಿ ನಗರ ಸಭಾ ಸದಸ್ಯ ಮುಕೇಶ್ ಕೆಮ್ಮಿಂಜೆ ಮಾತನಾಡಿ, ಈ ವಾರ್ಡಿನ ನೀರಿನ ಸಮಸ್ಯೆ ಗಳನ್ನು ನಾನು ಸದಸ್ಯನಾಗಿದ್ದಾಗ ಪರಿಹರಿಸಿದ್ದೇನೆ, ಮರೀಲ್ ಚರ್ಚಿನ ಫಾದರ್ ರವರ ಕಲ್ಪನೆಯ ಮಾದರಿ ವಾರ್ಡ್ ಯೋಜನೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಿರುತ್ತೇವೆ, ವಿದ್ಯುತ್ ಸಂಪರ್ಕ ಕಲ್ಪಿಸಿರುತ್ತೇವೆ ಹಾಗೂ ಹೆಚ್ಚಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಿರುತ್ತೇವೆ, ಆದರೆ ಈಗಿನ ಕೌನ್ಸಿಲ್ ರರು ಯಾವುದೇ ಕೆಲಸ ಮಾಡ್ತಿಲ್ಲ,ಚರಂಡಿಗಳ ಹೂಳೆತ್ತದೆ ಮಳೆ ನೀರಿನಿಂದ ರಸ್ತೆ ಹಾಳಾಗುತ್ತಿದೆ,ಎಂದು ಹೇಳಿದರು.

ನಗರಸಭಾ ಸದಸ್ಯ ರೋಬಿನ್ ತಾವ್ರೋ ಮಾತನಾಡಿ, ಜನರ ಕೆಲಸ ಮಾಡೋದು ಜನ ಪ್ರತಿನಿಧಿಗಳ ಆದ್ಯ ಕರ್ತವ್ಯ ವಾಗಿದೆ, ಅನುದಾನದ ಕೊರತೆಯಿಂದ ನಿರೀಕ್ಷೆ ಗೆ ತಕ್ಕಂತೆ ವಾರ್ಡಿನ ಅಭಿವೃದ್ಧಿ ಮಾಡಲಾಗುತ್ತಿಲ್ಲ, ಜನರ ಸಮಸ್ಯೆ ನಿವಾರಣೆ ಮಾಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಅದಕ್ಕಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ನಾಯಕರು ಮಾಡುತ್ತಿದ್ದಾರೆ ಎಂದರು,

ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ವಿ ಎಚ್ ಎ ಶಕೂರ್ ಹಾಜಿ ಮಾತನಾಡಿ, ಪ್ರಧಾನಿ ಮೋದಿಯವರು ತಾನು ತಿನ್ನುವುದಿಲ್ಲ ಬೇರೆಯವರನ್ನು ತಿನ್ನಲು ಬಿಡುವುದಿಲ್ಲ ಎಂಬ ಮಾತು ಹೇಳಿದ್ದಾರೆ, ಆದರೆ ಈಗ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ದಿನಕ್ಕೆ 80 ಸಾವಿರ ಬೆಲೆ ಯ ಮಶ್ರೂಮ್ ತಿನ್ನುವ ಮೋದಿಯವರು ಕಾಂಗ್ರೆಸ್ ಸರಕಾರ ಮಾಡಿಟ್ಟಿದ್ದ ಸರಕಾರದ ಸೊತ್ತು ಗಳನ್ನು ಅಂಬಾನಿ, ಅದಾನಿ ಗಳಿಗೆ ತಿನ್ನಲು ಬಿಟ್ಟಿರುತ್ತಾರೆ, ಬಿಜೆಪಿ ಯವರು ಹೇಳುವುದು ಒಂದು ಮಾಡುವುದು ಒಂದು, ಇವರಿಗೆ ಜನ ಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲಾ ಎಂದರು.

ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ಸಿಗ ಮೌರಿಸ್ ದಲ್ಮೆದ ಇವರನ್ನು ಶಕುಂತಲಾ ಶೆಟ್ಟಿಯವರು ಸನ್ಮಾನಿಸಿದರು, ಕಚೇರಿ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು,ಮೌರಿಸ್ ಡಿ’ಕುನ್ಹಾ ರವರು ಸ್ವಾಗತ ಮಾಡಿದರು ಈ ಕಾರ್ಯಕ್ರಮದಲ್ಲಿ ಬ್ಲಾಕ್ ಪ್ರದಾನ ಕಾರ್ಯ ದರ್ಶಿ ಪೂರ್ಣೇಶ್ ಭಂಡಾರಿ, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಬ್ಲಾಕ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸನಮ್ ನಝೀರ್, ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು, ರಾಘವೇಂದ್ರ ನೆಕ್ಕರೆ ಇವರ ಅಧ್ಯಕ್ಷತೆಯಲ್ಲಿ ಬೂತ್ ಸಮಿತಿ ರಚಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.